ಗುರು ಪೂರ್ಣಿಮೆ: ಹಿರಿಯ ಕಲಾವಿದರಿಗೆ ಸನ್ಮಾನ

ಸಂಜೆವಾಣಿ ವಾರ್ತೆ
ಚಿತ್ರದುರ್ಗ.ಜು.೪: ಗುರುಪೂರ್ಣಿಮೆ ಅಂಗವಾಗಿ ಹಮ್ಮಿಕೊಂಡಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಮೊಳಕಾಲ್ಮುರು ತಾಲ್ಲೂಕಿನ ಚಿಕ್ಕೋನಹಳ್ಳಿ ಗ್ರಾಮ ಜಾನಪದ ಹಾಗೂ ತತ್ವಪದ ಕಲಾವಿದರಾದ ಕೊಡತಿ ಓಬಯ್ಯ ಅವರಿಗೆ ಸನ್ಮಾನಿಸಲಾಯಿತು.ನಗರದ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ  ಸೋಮವಾರ ಸಂಸ್ಕಾರ ಭಾರತೀ ಜಿಲ್ಲಾ ಸಮಿತಿ, ರೋಟರಿ ಕ್ಲಬ್ ಚಿತ್ರದುರ್ಗ ಪೋರ್ಟ್, ಇನ್ನರ್ ವ್ಹೀಲ್ ಚಿತ್ರದುರ್ಗ ಫೋರ್ಟ್ ವತಿಯಿಂದ ಗುರು ಪೂರ್ಣಿಮೆ ಅಂಗವಾಗಿ ಗುರುವಂದನಾ ಕಾರ್ಯಕ್ರಮ ನಡೆಯಿತು.ಜಾನಪದ ಹಾಗೂ ತತ್ವಪದ ಕಲಾವಿದರಾದ ಕೊಡತಿ ಓಬಯ್ಯ ಅವರ ಸುಮಾರು 4 ದಶಕಗಳ ಕಾಲ ಹೆಚ್ಚು ತಮ್ಮ ಕಲಾ ಸೇವೆ ಜಾನಪದ ತತ್ವಪದ ಭಜನೆ, ಸಾಮಾಜಿಕ ಚಟುವಟಿಕೆಯಲ್ಲಿನ ಸೇವೆ ಪರಿಗಣಿಸಿ, ಅಭಿನಂದನಾ ಪತ್ರ ನೀಡಿ ಗೌರವಿಸಲಾಯಿತು.