ಕಲಬುರಗಿ;ಜು.5: ಮಂಗಳವಾರ ಕಲಬುರಗಿ ನಗರದ ಶರಣಬಸವೇಶ್ವರ ಸಂಸ್ಥಾನದ ಮಹಾಮನೆಯಲ್ಲಿ, ಸಂಸ್ಥಾನದ 8ನೇ ಮಹಾದಾಸೋಹ ಪೀಠಾಧಿಪತಿ ಹಾಗೂ ಶರಣಬಸವ ವಿಶ್ವವಿದ್ಯಾಲಯದ ಕುಲಾಧಿಪತಿಗಳಾಗಿರುವ ಪೂಜ್ಯ ಡಾ.ಶರಣಬಸವಪ್ಪ ಅಪ್ಪಾಜಿ ಅವರನ್ನು ಶರಣಬಸವ ವಿಶ್ವವಿದ್ಯಾಲಯದ ಬೋಧಕ ಸಿಬ್ಬಂದಿ ಹಾಗೂ ಪದಾಧಿಕಾರಿಗಳು ಪಾದಪೂಜೆ ನೆರವೇರಿಸಿ ಗುರುವಂದನೆ ಸಲ್ಲಿಸಿದರು.
ಪೂಜ್ಯ ಡಾ.ಅಪ್ಪಾಜಿ ಅವರಿಗೆ ವಿಶ್ವವಿದ್ಯಾಲಯದ ಕುಲಸಚಿವ ಡಾ.ಅನಿಲಕುಮಾರ ಬಿಡವೆ ಮತ್ತು ಡೀನ್ ಡಾ.ಲಕ್ಷ್ಮೀ ಪಾಟೀಲ್ ಮಾಕಾ ಮತ್ತು ವಿವಿಯ ವಿವಿಧ ಬೋಧನಾ ವಿಭಾಗದ ಮುಖ್ಯಸ್ಥರ ನೇತೃತ್ವದ ಹಿರಿಯ ಪ್ರಾಧ್ಯಾಪಕರು ಮತ್ತು ಅಧಿಕಾರಿಗಳು ವೇದ, ಘೋಷ, ಶ್ಲೋಕ ಮತ್ತು ಇತರ ಧಾರ್ಮಿಕ ವಿಧಿವಿಧಾನಗಳೊಂದಿಗೆ ಪಾದಪೂಜೆ ನೆರವೇರಿಸಿದರು. ಆಧ್ಯಾತ್ಮಿಕ ಮತ್ತು ಶೈಕ್ಷಣಿಕ ಗುರುಗಳಾದ ಪೂಜ್ಯ ಡಾ ಅಪ್ಪಾಜಿ ಅವರ ಗೌರವ ಸೂಚಕವಾಗಿ ಎಲ್ಲಾ ಶಿಕ್ಷಕ ಸಿಬ್ಬಂದಿಯವರು ಅಪ್ಪಾಜಿಯವರಿಗೆ ಗುಲಾಬಿ ದಳಗಳಿಂದ ಹೂಮಳೆಗೈದರು.
ಇದೇ ಸಂದರ್ಭದಲ್ಲಿ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರಪರ್ಸನ್ ಮಾತೋಶ್ರೀ ಡಾ. ದಾಕ್ಷಾಯಿಣಿ ಅವ್ವಾಜಿ ಹಾಗೂ ಸಂಸ್ಥಾನದ 9ನೇ ಪೀಠಾಧಿಪತಿ ಚಿರಂಜೀವಿ ಪೂಜ್ಯ ದೊಡ್ಡಪ್ಪ ಅಪ್ಪ ಅವರನ್ನು ವಿಶ್ವವಿದ್ಯಾಲಯದ ಬೋಧಕ ಸಿಬ್ಬಂದಿ ಹಾಗೂ ಅಧಿಕಾರಿಗಳು ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಮಾತೋಶ್ರೀ ಡಾ. ಅವ್ವಾಜಿ ಮಾತನಾಡಿ, ವಿಶ್ವವಿದ್ಯಾಲಯದ ಬೋಧಕ ಸಿಬ್ಬಂದಿಯ ಶ್ರಮವನ್ನು ಶ್ಲಾಘಿಸಿದರು. ಅಲ್ಪಾವಧಿಯಲ್ಲಿಯೇ ಶರಣಬಸವ ವಿಶ್ವವಿದ್ಯಾಲಯವನ್ನು ದೇಶದ ಅತ್ಯುತ್ತಮ ವಿಶ್ವವಿದ್ಯಾಲಯವನ್ನಾಗಿ ಪರಿವರ್ತಿಸಿದ್ದೆ ಅಪ್ಪಾಜಿಯವರಿಗೆ ಅತ್ಯುತ್ತಮ ಗುರುದಕ್ಷಿಣೆಯಾಗಿದೆ ಎಂದರು. ಈ ಶರಣಬಸವ ವಿಶ್ವವಿದ್ಯಾಲಯವನ್ನು ವಿಶ್ವದರ್ಜೆಯ ವಿಶ್ವವಿದ್ಯಾಲಯವನ್ನಾಗಿ ಪರಿವರ್ತಿಸುವ ಕನಸಿನೊಂದಿಗೆ ಸ್ಥಾಪಿಸಲಾಗಿದೆ ಹಾಗೂ ಈ ಕನಸನ್ನು ನನಸಾಗಿಸುವ ದಿನಗಳು ದೂರವಿಲ್ಲ ಎಂದು ಹೇಳಿದರು.
ಈ ವರ್ಷ ಶರಣಬಸವ ವಿಶ್ವವಿದ್ಯಾಲಯ ಮತ್ತು ಇತರ ವಿಶ್ವವಿದ್ಯಾಲಯಗಳಿಂದ ಪಿಎಚ್‍ಡಿ ಪದವಿ ಪಡೆದ ಸುಮಾರು 50 ಬೋಧಕ ಸಿಬ್ಬಂದಿಯನ್ನು ಅಭಿನಂದಿಸಿದ ಡಾ.ಅವ್ವಾಜಿ, ಇದು ಡಾ. ಅಪ್ಪಾಜಿಯವರ ಕನಸಾಗಿತ್ತು ಹಾಗೂ ಪಿಎಚ್‍ಡಿ ಪಡೆಯಲು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ನಡೆಯುವ ಸಂಸ್ಥೆಗಳು. ವಿಶ್ವವಿದ್ಯಾಲಯದ ಬೋಧಕ ಸಿಬ್ಬಂದಿಗೆ ನೀಡಲಾಗುವ ಹೆಚ್ಚಿನ ಸಂಖ್ಯೆಯ ಡಾಕ್ಟರೇಟ್‍ಗಳು ವಿಶ್ವವಿದ್ಯಾಲಯದ ಬೋಧನಾ ಸಿಬ್ಬಂದಿಯ ಉನ್ನತ ಸಾಮಥ್ರ್ಯವನ್ನು ಬಹಿರಂಗಪಡಿಸುತ್ತದೆ…..ಇತರ ಶಿಕ್ಷಕರು ಪಿಎಚ್‍ಡಿ ಪಡೆದ ಶಿಕ್ಷಕರನ್ನು ಅನುಕರಿಸಬೇಕು ಮತ್ತು ವಿಶ್ವವಿದ್ಯಾಲಯದ ಎಲ್ಲಾ ಶಿಕ್ಷಕರು ಅತಿ ಶೀಘ್ರದಲ್ಲಿ ಪಿಎಚ್‍ಡಿ ಪಡೆಯಲು ಮುಂದೆ ಬರಬೇಕು ಎಂದರು.
ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವುದರೊಂದಿಗೆ ಶಿಕ್ಷಕರು ನೈತಿಕ ಶಿಕ್ಷಣಕ್ಕೂ ಪ್ರಾಮುಖ್ಯತೆ ನೀಡಬೇಕು ಮತ್ತು ವಿದ್ಯಾರ್ಥಿಗಳನ್ನು ಜವಾಬ್ದಾರಿಯುತ ಹಾಗೂ ಉತ್ತಮ ನಾಗರಿಕರನ್ನಾಗಿ ಪರಿವರ್ತಿಸಲು ಪಠ್ಯಕ್ರಮದ ಭಾಗವಾಗಿ ಸಂಸ್ಕøತಿಯನ್ನು ಸೇರಿಸುವ ಮಹತ್ವವನ್ನು ಡಾ. ಅವ್ವಾಜಿ ಒತ್ತಿ ಹೇಳಿದರು.
ವಿಶ್ವವಿದ್ಯಾಲಯದ ಕುಲಸಚಿವ ಡಾ.ಅನಿಲಕುಮಾರ ಬಿಡವೆ ಮಾತನಾಡಿ, ವಿಶ್ವವಿದ್ಯಾಲಯವಾಗಬೇಕೆಂಬ ಡಾ. ಅಪ್ಪಾಜಿಯವರ ಕನಸನ್ನು ನನಸಾಗಿಸಲು ವಿಶ್ವವಿದ್ಯಾಲಯವು ಸಕಾರಾತ್ಮಕ ರೀತಿಯಲ್ಲಿ ತನ್ನ ಪಯಣ ಆರಂಭಿಸಿದ್ದು, ವಿಶ್ವವಿದ್ಯಾಲಯದ ಕೇಂದ್ರೀಕೃತ ಕ್ಷೇತ್ರಗಳಲ್ಲಿ ಸಂಶೋಧನೆಯೂ ಒಂದಾಗಿದೆ ಎಂದರು. ಇಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಸಂಶೋಧನೆ ಮತ್ತು ನಾವೀನ್ಯತೆಯ ಮಾರ್ಗವನ್ನು ಅನುಸರಿಸಲು ಪೆÇ್ರೀತ್ಸಾಹಿಸಲಾಗುತ್ತದೆ. ವಿದ್ಯಾರ್ಥಿಗಳು ಮತ್ತು ಶಿಕ್ಷಕರು ವಿಶ್ವವಿದ್ಯಾಲಯಕ್ಕೆ ಹೆಚ್ಚಿನ ಉತ್ಪನ್ನ ಆಧಾರಿತ ಪೇಟೆಂಟ್‍ಗಳೊಂದಿಗೆ ಹೊರಬರಲು ಪೆÇ್ರೀತ್ಸಾಹಿಸುತ್ತಾರೆ. ವಿಶ್ವವಿದ್ಯಾಲಯದ ಬೋಧಕ ಸಿಬ್ಬಂದಿಯಿಂದ ಸುಮಾರು 100 ಪೇಟೆಂಟ್ ಅರ್ಜಿಗಳನ್ನು ಪ್ರಸ್ತುತಪಡಿಸುವುದು ಬಾಕಿ ಉಳಿದಿದೆ ಎಂದು ಹೇಳಿದರು.
ವಿಶ್ವವಿದ್ಯಾಲಯವು ನ್ಯಾಕ್‍ನಿಂದ ಮಾನ್ಯತೆ ಪಡೆಯುವ ಪ್ರಕ್ರಿಯೆಯಲ್ಲಿದೆ ಮತ್ತು ಇದು ಹೆಚ್ಚು ಹೆಚ್ಚು ಸಂಶೋಧನಾ ಚಟುವಟಿಕೆಗಳನ್ನು ಕೈಗೊಳ್ಳಲು ವಿವಿಧ ಸಂಸ್ಥೆಗಳಿಂದ ವಿಶ್ವವಿದ್ಯಾಲಯಕ್ಕೆ ಹೆಚ್ಚಿನ ಅನುದಾನವನ್ನು ಹರಿಯುವಂತೆ ಮಾಡುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಶ್ರೀ ಬಸವರಾಜ ದೇಶಮುಖ ಮಾತನಾಡಿದರು. ಡೀನ್ ಡಾ.ಲಕ್ಷ್ಮೀ ಪಾಟೀಲ್ ಮಾಕಾ ಸ್ವಾಗತಿಸಿದರು. ಉಪಕುಲಪತಿ ಪೆÇ್ರ.ವಿ.ಡಿ.ಮೈತ್ರಿ, ಹಣಕಾಸು ಅಧಿಕಾರಿ ಕಿರಣ್ ಮಾಕಾ ಸೇರಿದಂತೆ ಇತರ ಪ್ರಮುಖರು ಉಪಸ್ಥಿತರಿದ್ದರು.