ಗುರು ನಾನಕ ಶಾಲೆ ಜನವಾಡಾ ಮಕ್ಕಳಿಂದ ಸ್ವಚ್ಛತೆ ಅಭಿಯಾನ

ಬೀದರ:ಜ.24: ತಾಲೂಕಿನ ಜನವಾಡಾ ಗ್ರಾಮದಲ್ಲಿ ನಡೆಯುತ್ತಿರುವ ಗುರು ನಾನಕ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳಿಂದ ಶ್ರಮದಾನ ಅಭಿಯಾನ ಹಮ್ಮಿಕೊಳ್ಳಲಾಗಿತ್ತು.

ಹೊಸ ವರ್ಷದ ಮೊದಲನೇ ದಿನದಿಂದಲೇ ಪ್ರಾರಂಭಗೊಂಡು ಜನವಾಡಾ ಸರ್ಕಲ್‍ನ 30 ಗ್ರಾಮಗಳಿಗೆ ವಿದ್ಯಾರ್ಥಿಗಳು ಭೇಟಿ ನೀಡಿ ಸಾರ್ವಜನಿಕ ಸ್ಥಳಗಳು, ದೇವಸ್ಥಾನ, ಮಸೀದಿ, ಚರ್ಚ್ ಮತ್ತು ಗುರುದ್ವಾರಾಗಳನ್ನು ಸ್ವಚ್ಛಗೊಳಿಸಿದರು. ಈ ಕಾರ್ಯಕ್ರಮದ ಮುಖ್ಯ ಉದ್ದೇಶವು ಜನ ಸಮಾನ್ಯರಲ್ಲಿ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವುದು ಹಾಗೂ ಸ್ವಚ್ಛತೆಯಿಂದ ಸ್ವಸ್ತ ಆರೋಗ್ಯ ಪಡೆದುಕೊಳ್ಳುವುದು ಸಾಧ್ಯ ಎಂಬುದನ್ನು ತಿಳಿಸುವುದಾಗಿದೆ.

ಪ್ರಾಂಶುಪಾಲೆ ಶ್ರೀಮತಿ ಭಾಗ್ಯಶಾಲಿ ಖಾನಾಪೂರೆ ಅವರು ಮಾತನಾಡಿ ಮಕ್ಕಳು ಸಣ್ಣ ವಯಸ್ಸಿನಲ್ಲಿಯೇ ಇಂತಾಹ ಜವಾಬ್ದಾರಿಗಳನ್ನು ಪಡೆದಿರುವುದು ಒಳ್ಳೆಯ ಸಂಕೇತ. ಜನರಲ್ಲಿ ಒಳ್ಳೆಯ ಸಂದೇಶ ಕೊಡುತ್ತಿದ್ದಾರೆ ಮತ್ತು ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ. ಅದೆ ರೀತಿ ಪ್ರತಿ ಶನಿವಾರ ಸಿವಿಲ್ ಆಸ್ಪತ್ರೆ ಬೀದರಗೆ ಬಂದು ರೋಟಿ ಸೇವಾ ಮಾಡುತ್ತಿದ್ದಾರೆ ಎಂದರು.

ಗುರು ನಾನಕ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷೆ ಡಾ. ರೇಷ್ಮಾ ಕೌರ ಅವರು ಮಾತನಾಡಿ ಮಕ್ಕಳು ಪಾಠದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿರುವುದು ಒಳ್ಳೆಯದು, ಮನುಷ್ಯನ ಆಯುಷ್ಯ ಹಾಗೂ ಆರೋಗ್ಯ ಸ್ಥಿರವಾಗಿರಲು ಕಡ್ಡಾಯವಾಗಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಮನೆ ಪರಿಸರ ಸ್ವಚ್ಛಗೊಳಿಸುವ ಮೂಲಕ ಗ್ರಾಮದ ಸುಂದರೀಕರಣಕ್ಕೆ ಆದ್ಯತೆ ನೀಡಬೇಕು. ಚರಂಡಿ ನೀರು ನಿಲ್ಲದಂತೆ ಕ್ರಮ ಅನುಸರಿಸಬೇಕು. ಇಲ್ಲವಾದರೆ ಡೆಂಗೂ ಸೇರಿ ಸಾಂಕ್ರಾಮಿಕ ರೋಗಗಳು ಹರಡುವ ಸಾದ್ಯತೆಗಳಿವೆ, ಇದು ಒಂದು ದಿವಸಕ್ಕೆ ಮಾತ್ರ ಸಿಮೀತ ಇರಬಾರದು, ತಮ್ಮ ಕೈಲಾದಷ್ಟು ಸೇವಾ ಮನೋಭಾವನೆ ಎಂದು ತಿಳಿದು ಸ್ಚಚ್ಛತೆ ಕಾಪಾಡಬೇಕು. ಆರೋಗ್ಯ ಸಂಪತ್ತು ತಮ್ಮದನ್ನಾಗಿಸಿರಿಕೊಳ್ಳುವ ಸಂಕಲ್ಪ ನಮ್ಮದಾಗಬೇಕು, ಸಾರ್ವಜನಿಕ ಸ್ಥಳಗಳ ಸ್ವಚ್ಛತೆ ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಹೇಳಿದರು.