ಗುರು ನಾನಕ ಶಾಲೆಯ ವಿದ್ಯಾರ್ಥಿಗಳ ಸಾಧನೆ – ಸನ್ಮಾನ

ಬೀದರ:ಸೆ.18:ಸಾರ್ವಜನಿಕ ಶಿಕ್ಷಣ ಇಲಾಖೆ ಬೀದರ, ತಾಲೂಕಾ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಕ್ರೀಡಾಕೂಟ ನೆಹರು ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಟೀಚರ್ಸ್ ಕಾಲೋನಿಯಲ್ಲಿರುವ ಗುರು ನಾನಕ ಪಬ್ಲಿಕ್ ಶಾಲೆ(ಶಾಖೆ)ಯ ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ ಸಾಧನೆ ಮಾಡಿ ಗಮನ ಸೆಳೆದಿದ್ದಾರೆ.

ಈ ಪ್ರತಿಭಾವಂತ ಮಕ್ಕಳಿಗೆ ಗುರು ನಾನಕ ಪಬ್ಲಿಕ ಶಾಲೆಯ ಉಪಾಧ್ಯಕ್ಷೆ ಶ್ರೀಮತಿ ರೇಷ್ಮಾ ಕೌರ ಅವರು ಸನ್ಮಾನಿಸಿದರು. ಅವರು ಮುಂದು ವರೆದು ಮಾತನಾಡುತ್ತ ಕ್ರೀಡಾಪಟುಗಳು ಕ್ರೀಡೆಯಲ್ಲಿ ಕ್ರೀಡಾ ನಿಯಮಗಳು ಪಾಲಿಸಬೇಕು. ಅದಲ್ಲದೆ ಕ್ರೀಡಾ ಕೌಶಲ್ಯಗಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಕ್ರೀಡೆಯಲ್ಲಿ ಸೋಲು-ಗೆಲುವು ಮುಖ್ಯವಲ್ಲ ಜೀವನದಲ್ಲಿ ಗುರಿ ಇಟ್ಟುಕೊಂಡು ಮುನ್ನಡೆಬೇಕು. ಹಿಂದೆ ಗುರು ಮತ್ತು ಮುಂದೆ ಗುರಿ ಇದ್ದರೆ ನಿಮ್ಮ ಕನಸು ನನಸಾಗುತ್ತದೆ ಎಂದರು.

ಶಾಲೆಯ ಪ್ರಾಂಶುಪಾಲೆ ಶ್ರೀಮತಿ ಕವಿತಾ ಅವರು ಮಾತನಾಡುತ್ತ ಶಾಲೆಯ ದೈಹಿಕ ಶಿಕ್ಷಕ ಶ್ರೀ ಪ್ರವೀಣ ಕುಮಾರ ಅವರ ಸತತ ಪ್ರಯತ್ನ ಮತ್ತು ಅವರ ಮಾರ್ಗದರ್ಶನ ಈ ಸಾಧನೆಗೈಯಲು ಸಾಧ್ಯವಾಗಿದೆ ಎಂದರು.

ವಿದ್ಯಾರ್ಥಿಗಳ ವಿವರ :

ಓಟದ ಸ್ಪರ್ಧೇಯಲ್ಲಿ ಅದಿತ್ಯ,

ರಿಲೆ ರೇಸ್‍ನಲ್ಲಿ ವೀರಶೆಟ್ಟಿ ಎಸ್.

ಶಟಲ್ ಬ್ಯಾಡಮಿಂಟನ್‍ನಲ್ಲಿ ಮಹಿಳೆ ಸ್ಪರ್ಧೇ : ಪೂರ್ವಿ, ಅಮೂಲ್ಯ ಎಸ್, ದಿವ್ಯ, ಶಾಂಭವಿ ಎಂ. ಮತ್ತು ಶೃದಾ ವಿಜೇತರು

ಶಟಲ್ ಬ್ಯಾಡಮಿಂಟನ್‍ನಲ್ಲಿ ಹುಡುಗಡ ಸ್ಪರ್ಧೇ : ಆದಿತ್ಯ ಎ.ಡ್ಬ್ಯು, ಅನಿಕೇತ ಆರ್.ವಿ., ಆದಿತ್ಯ ಎನ್., ಅಮಿತಕುಮರ ವಿಜೇತರು

ಕರಾಟೆ ಸ್ಪರ್ಧೇಯಲ್ಲಿ ನಮರತಾ ಎಲ್.

ಚೆಸ್ ಸ್ಪರ್ಧೇಯಲ್ಲಿ ದಿವ್ಯಾ ಎಸ್., ವಚನಾಶ್ರೀ, ಶಾಂಭವಿ ಎಂ., ಸಂಜನಾ ಮತ್ತು ಪೂರ್ವಿ ವಿಜೇತರು