ಗುರು ನಾನಕ ಶಾಲೆಯಲ್ಲಿ ರಾಷ್ಟ್ರೀಯ ಕ್ಯಾಡೆಟ್ ಕಾಪ್ರ್ಸ್ ಉದ್ಘಾಟನೆ

ಬೀದರ:ಜ.1: ನಗರದ ನೇಹರು ಸ್ಟೇಡಿಯಂ ಹತ್ತಿರ ವಿರುವ ಗುರು ನಾನಕ ಶಾಲೆಯ ಆವರಣದಲ್ಲಿ ಇಂದು ದಿನಾಂಕ 29-12-2020 ರಂದು ರಾಷ್ಟ್ರೀಯ ಕ್ಯಾಡೆಟ್ ಕಾಪ್ರ್ಸ್ ಫೂಲ್ ಟ್ರೂಪ ಉದ್ಘಾಟನೆ ನೇರವೇರಿತು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಗುರು ನಾನಕ ಆಡಳಿತ ಮಂಡಳಿಯ ಉಪಾಧ್ಯಕ್ಷೆ ರೇಷ್ಮಾ ಕೌರ್ ಉದ್ಘಾಟನೆ ಮಾಡಿ ಮಾತನಾಡಿ, ಇದು ಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಸ್ವಯಂ ಪ್ರೇರಿತ ಆಧಾರದ ಮೇಲೆ ತೆರೆದಿರುತ್ತದೆ. ನ್ಯಾಷನಲ್ ಕ್ಯಾಡೆಟ್ ಕಾಪ್ರ್ಸ್ ತ್ರಿ-ಸೇವೆಗಳ ಸಂಘಟನೆಯಾಗಿದ್ದು, ಸೈನ್ಯ, ನೌಕಾಪಡೆ ಮತ್ತು ವಾಯುಪಡೆಯನ್ನು ಒಳಗೊಂಡಿದ್ದು, ದೇಶದ ಯುವಕರನ್ನು ಶಿಸ್ತುಬದ್ದ ಮತ್ತು ದೇಶಭಕ್ತಿಯ ನಾಗರಿಕರನ್ನಾಗಿ ರೂಪಿಸುವಲ್ಲಿ ತೊಡಗಿದೆ. ಶಾಲಾ, ಕಾಲೇಜು ಮತ್ತು ವಿಶ್ವವಿದ್ಯಾಲಯಗಳಿಂದ ಕೆಡೆಟ್‍ಗಳನ್ನು ನೇಮಿಸಿಕೊಂಡು ಕೆಡೆಟ್‍ಗಳಿಗೆ ಸಣ್ಣ ಶಾಸ್ತ್ರಾ ಮತ್ತು ಮೂಲಭೂತ ಮಿಲಿಟರಿ ತರಬೇತಿ ನೀಡಲಾಗುತ್ತದೆ. ವಿದ್ಯಾರ್ಥಿಗಳು ಎನ್.ಸಿ.ಸಿ.ಯಲ್ಲಿ (ಎ,ಬಿ, ಮತ್ತು ಸಿ) ಸರ್ಟಿಫಿಕೆಟ್ ಕೋರ್ಸ್‍ನ್ನು ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಸಾಧನೆಗಳ ಆಧಾರದ ಮೇಲೆ ಆಯ್ಕೆಗಳ ಸಮಯದಲ್ಲಿ ಸಾಮಾನ್ಯ ಅಭ್ಯಾರ್ಥಿಗಳಿಗಿಂತ ಅವರಿಗೆ ಆದ್ಯತೆ ನೀಡಲಾಗುತ್ತದೆ ಎಂದು ತಿಳಿಸಿದರು.

ಶಾಲಾ ಮಟ್ಟದಲ್ಲಿ ತರಬೇತಿ ಹೊಂದಿದ ವಿದ್ಯಾರ್ಥಿಗಳು ಎನ್.ಸಿ.ಸಿ. ಎ-ಪ್ರಮಾಣ ಪತ್ರ ಹೊಂದಿರುವವರಿಗೆ ಪರೀಕ್ಷೆಯ ಗರಿಷ್ಠ ಅಂಕಗಳಲ್ಲಿ ಶೆಕಡಾ 2% ಬೊನಸ್ ಅಂಕಗಳಾಗಿ ಮತ್ತು ಕಾಲೇಜ್ ಮಟ್ಟದಲ್ಲಿನ ವಿದ್ಯಾರ್ಥಿಗಳಿಗೆ ಎನ್.ಸಿ.ಸಿ. ಬಿ-ಪ್ರಮಾಣ ಪತ್ರ ಹೊಂದಿರುವವರಿಗೆ ಪರೀಕ್ಷೆಯ ಗರಿಷ್ಠ ಅಂಕಗಳಲ್ಲಿ ಶೆಕಡಾ 3% ಬೊನಸ್ ಹಾಗೂ ಎನ್.ಸಿ.ಸಿ. ಸಿ-ಪ್ರಮಾಣ ಪತ್ರ ಹೊಂದಿರುವವರಿಗೆ ಪರೀಕ್ಷೆಯ ಗರಿಷ್ಠ ಅಂಕಗಳಲ್ಲಿ ಶೆಕಡಾ 5% ಬೊನಸ್ ಅಂಕಗಳಾಗಿ ನೀಡಲಾಗುತ್ತದೆ ಎಂದು ತಿಳಿಸಿದರು. ಆದ್ದರಿಂದ ವಿದ್ಯಾರ್ಥಿಗಳು ಎನ್.ಸಿ.ಸಿ. ತರಬೇತಿಯಲ್ಲಿ ಪಾಲ್ಗೊಂಡು ತಮ್ಮ ಭವಿಷ್ಯ ರೂಪಿಸಿಕೊಳ್ಳುವಲ್ಲಿ ಯಶಸ್ವಿಯಾಗಬೇಕು ಎಂದು ಕರೆ ಕೊಟ್ಟರು.

ಶಾಲೆಯ ಪ್ರಾಚಾರ್ಯ ಎನ್.ರಾಜು ಅವರು ಪ್ರಮಾಣ ವಚನ ಭೋಧಿಸಿದರು.

ಈ ಸಂದರ್ಭದಲ್ಲಿ ಮುಖ್ಯ ಗುರು ಆರೀಫ್ ಹಾದಿ, ಸಹಾಯಕ ಎನ್.ಸಿ.ಸಿ. ಅಧಿಕಾರಿ ಶೇಖ್ ಬಶೀರ ಅಹ್ಮದ, ಪಿ.ಯು. ಕಾಲೇಜಿನ ಪ್ರಾಂಶುಪಾಲೆ ಶ್ರೀಮತಿ ಅಪರಂಜಿನಿ, ಆಡಳಿತಾಧಿಕಾರಿ ಜಯಪ್ರಕಾಶ ಮತ್ತು ಗುರು ನಾನಕ ಸಂಸ್ಥೆಯ ಡೀನರಾದ ಶ್ರೀ ವಿ.ಬಿ. ವರಪ್ರಸಾದ ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.