ಬೀದರ:ಜು.8:ನಗರದ ನೆಹರು ಸ್ಟೇಡಿಯಂ ಹತ್ತಿರ ವಿರುವ ಗುರು ನಾನಕ ಪಬ್ಲಿಕ್ ಶಾಲೆಯಲ್ಲಿ ಇಂದು ವಿದ್ಯಾರ್ಥಿ ಪ್ರತಿನಿಧಿಗಳ ಪ್ರತಿಜ್ಞಾ ಸ್ವೀಕಾರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ದೀಪ ಬೆಳೆಗಿಸುವುದರ ಮೂಲಕ ಆರಂಭವಾಯಿತು. ಮಕ್ಕಳಿಂದ ಪಥ ಸಂಚಲನ ನಡೆಯಿತು. ನಂತರ ಹೊಸದಾಗಿ ಆಯ್ಕೆಯಾದ ಹೆಡ್ ಬಾಯ್, ಹೆಡ್ ಗರ್ಲ್ ಮತ್ತು ಉಪ ಹೆಡ್ ಬಾಯ್ ಮತ್ತು ಉಪ ಹೆಡ್ ಗ್ರಲ್ ಪ್ರತಿನಿಧಿಗಳಿಗೆ ಸಂಸ್ಥೆಯ ಉಪಾಧ್ಯಕ್ಷೆಯರಾದ ಶ್ರೀಮತಿ ರೇಷ್ಮಾ ಕೌರ ಅವರು ಪ್ರತಿಜ್ಞೆಯನ್ನು ಭೋಧಿಸಿದರು.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಡಾ|| ಹೆಚ್.ಭರಶೆಟ್ಟಿ ಅವರು ಆಗಮಿಸಿ ವಿದ್ಯಾರ್ಥಿಗಳಿಗೆ ಒಳ್ಳೆಯ ನಾಗರಿಕರಾಗುವಂತೆ, ಜೀವದನದಲ್ಲಿ ಶಿಸ್ತನ್ನು ಪಾಲಿಸಬೇಕು. ನೀವುಗಳು ದೇಶದ ನಿಜ ಸಂಪತ್ತು, ದೇಶಕ್ಕಾಗಿ ಸೇವೆ ಮಾಡಲು ಸದಾಸಿದ್ದರಿರಬೇಕು ಎಂದು ಕರೆ ಕೊಟ್ಟರು.
ಕಾಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ|| ರೇಷ್ಮಾ ಕೌರ ಅವರು ಮಾತನಾಡಿ ಮಕ್ಕಳು ಶ್ರಮ ಜೀವಿಗಳಾಗಬೇಕು. ಉತ್ತಮ ಗುರಿಯನ್ನು ಹೊಂದಿರಬೇಕು ಗುರಿಯಿಲ್ಲದೆ ಮುಂದೆ ಸಾಗಲು ಸಾಧ್ಯವಿಲ್ಲ. ಪಾಲಕರ ಕನಸನ್ನು ನೆನಸಾಗಿಸಲು ಒಳ್ಳೆ ರೀತಿಯಲ್ಲಿ ಅಭ್ಯಾಸ ಮಾಡಬೇಕು. ವಿದ್ಯಾರ್ಥಿಗಳು ಶಿಸ್ತಿನ ದಾರಿಯಲ್ಲಿ ಸಾಗಬೇಕು. ಪರೋಪಕಾರದ ಮನೋಭಾವನೆಯನ್ನು ಹೊಂದಿರಬೇಕು. ಮಕ್ಕಳು ತಮ್ಮಲ್ಲಿ ಶಿಸ್ತನ್ನು ಅಳವಡಿಸಿಕೊಳ್ಳಬೇಕು. ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಸುತ್ತಲಿನ ವಾತಾವರಣವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು ಮತ್ತು ಗುರು ಹಿರಿಯರನ್ನು ಗೌರವಿಸಬೇಕು ಎಂದು ಕರೆ ಕೊಟ್ಟರು.
ಈ ಸಂದರ್ಭದಲ್ಲಿ ಶಾಲೆಯ ಪ್ರಾಂಶುಪಾಲರಾದ ಶ್ರೀ ಎನ್.ರಾಜು, ಶ್ರೀ ಅಮಜದ ಅಲಿ, ಡೀನರಾದ ಶ್ರೀ ಹನುಮಾನ, ಮುಖ್ಯ ಗುರುಗಳಾದ ಶ್ರೀಮತಿ ಆರೀಫ್ ಹಾದಿ ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.