ಗುರು ನಾನಕ ಪ್ರಥಮ ದರ್ಜೆ ಮಹಾವಿದ್ಯಾಲಯದ ಬೆಳ್ಳಿ ಹಬ್ಬ

ಬೀದರ:ಏ.6: ನಗರದ ಗುರು ನಾನಕ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ 25 ವರ್ಷ ಪೂರ್ಣಗೊಳಿಸಿದ ಪ್ರಯುಕ ವರ್ಷವಿಡಿ ಕಾರ್ಯಕ್ರಮದ ಉದ್ದಾಟನೆಗೆ ಚಾಲನೆ ನೀಡಲಾಯಿತು.
ಈ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಗಮಿಸಿದ ಕಲಬುರರ್ಗಿ ವಿಶ್ವವಿದ್ಯಾಲಯದ ಉಪ ಕುಲಪತಿರಾದ ಪೆÇ್ರ. ದಯಾನಂದ ಅಗಸ್ಸರ್, ಹಾಗೂ ಬೀದರ ವಿಶ್ವವಿದ್ಯಾಲಯದ ಕುಲಪತಿ ಪೆÇ್ರ. ಬಿ .ಎಸ್. ಬಿರಾದರ್ , ಕುಲಸಚಿವರಾದ ಪೆÇ್ರ. ಪರಮೇಶ್ವರ ನಾಯಕ್ ಹಾಗೂ ಗುರು ನಾನಕ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ.ಬಲಬೀರ್ ಸಿಂಗ್ ಜಿ, ಉಪಾಧ್ಯಕ್ಷರಾದ ಡಾ. ರೇಷ್ಮಾ ಜಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಗುರು ನಾನಕ್ ಪ್ರಥಮ ದರ್ಜೆ ಮಹಾವಿದ್ಯಾಲಯ 25 ವರ್ಷಗಳ ನಿರಂತರ ಸೇವೆ ನೀಡಿ ಇಂದು ಪದವಿ ಶಿಕ್ಷಣದ ಗುಣಮಟ್ಟ ಹೆಚ್ಚಿಸುವಲ್ಲಿ ಹಾಗೂ ತಂತ್ರಜ್ಞಾನ ಆಧಾರಿತ ಶಿಕ್ಷಣ ಮತ್ತು ಗುಣಮಟ್ಟದ ಶಿಕ್ಷಣ ನೀಡುವುದರ ಜೊತೆಗೆ ಗಡಿಭಾಗದ ವಿದ್ಯಾರ್ಥಿಗಳಲ್ಲಿ ಜ್ಞಾನದ ದಾಸೋಹ ಅನ್ನದಾಸೋಹ ನೀಡುವುದರ ಜೊತೆಗೆ ಗಡಿನಾಡಲ್ಲಿ ಶಿಕ್ಷಣದ ಕ್ರಾಂತಿ ಮೊಳಗಿಸಿದ್ದಾರೆ ಎಂದು ಕಾರ್ಯಕ್ರಮಕ್ಕೆ ಆಗಮಿಸಿದ ಅತಿಥಿಗಳು ಕಾಲೇಜಿನ ಕಾರ್ಯ ವೈಖರಿಯ ಬಗ್ಗೆ ಹರುಷ ವ್ಯಕ್ತಪಡಿಸಿದರು ಸಂಸ್ಥೆ ಮತ್ತು ಕಾಲೇಜಿನ ಕಾರ್ಯ ವೈಖರಿಯ ಬಗ್ಗೆ ಕೊಂಡಾಡಿದರು.
ಈ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರ ಶ್ಯಾಮಲಾ ವಿ ದತ್ತ ಅವರು ಐ ಕೂ ಎಸಿ ಕೋಆರ್ಡಿನೇಟರ್ ಆದ ಡಾ. ಸಂಜಯ್ ಮೈನಳ್ಳಿ ವಿವಿಧ ಕಾಲೇಜಿನ ಪ್ರಾಂಶುಪಾಲರು ಉಪನ್ಯಾಸಕರು ಸಿಬ್ಬಂದಿ ವರ್ಗದವರು ವಿದ್ಯಾರ್ಥಿಗಳು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿ ಬೆಳ್ಳಿ ಮಹೋತ್ಸವ ಕಾರ್ಯಕ್ರಮದ ಉದ್ಘಾಟನಾ ಕಾರ್ಯಕ್ರಮವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದರು