ಗುರು ನಾನಕ ಪಿಯುಸಿ ಕಾಲೇಜಿನ ಉತ್ತಮ ಫಲಿತಾಂಶಅಗ್ರಶ್ರೇಣಿಯಲ್ಲಿ ತೆರ್ಗಡೆಯಾದ ವಿದ್ಯಾರ್ಥಿಗಳಿಗೆ ಸನ್ಮಾನ

ಬೀದರ:ಎ.22:ಪ್ರತಿಷ್ಠಿತ ಗುರು ನಾನಕ ಸ್ವತಂತ್ರ ಪದವಿ ಪೂರ್ವ ಕಾಲೇಜಿನ 2022-2023 ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಉತ್ತಮ ಸಾಧನೆ ಮಾಡಿದ್ದು, ವಿಜ್ಞಾನ ವಿಭಾಗ ಅಗ್ರಶ್ರೇಣಿಯಲ್ಲಿ 36 ವಿದ್ಯಾರ್ಥಿಗಳು, 138 ವಿದ್ಯಾರ್ಥಿಗಳು ಪ್ರಥಮ ದರ್ಜೇಯಲ್ಲಿ, 27 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ವಿಶೇಷವೆಂದರೆ ಕಾಲೇಜಿನ ಒಟ್ಟು ಫಲಿತಾಂಶ 97.5% ಆಗಿರುತ್ತದೆ.

ಕಾಲೇಜಿನ ರಾಜೇಶ್ ಮೊಳಕೇರಿ ಪಿಸಿಎಂಬಿ ಯಲ್ಲಿ 98.25% ಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಭೌತಶಾಸ್ತ್ರದಲ್ಲಿ 3 ವಿದ್ಯಾರ್ಥಿಗಳು 100 ಕ್ಕೆ 100 ಅಂಕವನ್ನು ಪಡೆದು ಕೀರ್ತಿ ತಂದಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ ವಿದ್ಯಾರ್ಥಿನಿ ಸೃಷ್ಠಿ ರಾಜಕುಮಾರ 99.75 (ಬೇಸ್) ಫಲಿತಂಶ ಪಡೆದು ವಾಣಿಜ್ಯ ವಿಭಾಗದಲ್ಲಿ ಪ್ರಥಮ ರ್ಯಾಂಕ್ ಪಡೆದಿರುತ್ತಾಳೆ.

ಈ ಸಂದರ್ಭದಲ್ಲಿ ವಿಜ್ಞಾನ ವಿಭಾಗದಲ್ಲಿ ನರೇಶ್ 97.5%, ಸಾಯಿನಾಥ 97.25%, ಅರಬಾಜ್ 96.5%, ಶಾಹೀಲ್ ಪಾಂಡೆ 94.00%, ಪ್ರದೀಪ 94.00%, ನಿಕಿತಾ 94.00%, ಎಂ.ಗಣೇಶ್ 93.75, ಆದಿತ್ಯ ವರ್ಮಾ 93.5%, ಮನೀಶ್ 93.5%, ಸಾಯಿನಾಥ ಬೆಲ್ಲೂರೆ 93.00%, ರಕ್ಷೀತಾ 93.00%, ಗೌರಮ್ಮಾ 92.75%, ನಿಖಿಲ್ ರಡ್ಡಿ 92.25%, ನಾಗರಾಜ 92.25%, ಪ್ರಥ್ವಿರಾಜ 92.00%, ವಿಜ್ಞೇಶ್ ಕಟ್ಟೆ 91.75%, ನಿಕಿತಾ ಡಿ. 91.5%, ವಿಜಯಲಕ್ಷ್ಮಿ 91.5%, ಮಹೇಶ್ 91.25%, ಸಾನಿಯಾ ನಾಜ್ 91.25%, ನಿಮಾ ಹೆಚ್. 91.25%, ವಿನಯ 91.25%, ಜಸಿಂಟಾ 91.00%, ಪ್ರಜ್ವಲ್ 90.75%, ಆದಿತ್ಯ 90.74%, ಇಶಾನ್ ಯು.ಪಿ. 90.5%, ಭವಾನಿ ಜಿ. 90.00%, ಅದಿಬಾ ಖಾನ್ 89.5%, ಸ್ನೇಹಾ 88.75, ಸಂಗಿತಾ ಕಲಬುರಗೆ 87.75%, ಪ್ರತಿಭಾ 87.5%, ಸಾಕ್ಷಿ 87.00%, ಸುಜನಾ 86.00%, ಸುಪ್ರಿಯಾ 85.5%, ರಷಿ ಮೈಲೂರಕರ್ 85.00%.

ವಾಣಿಜ್ಯ ವಿಭಾಗದಲ್ಲಿ : ವೈ.ಕಾವ್ಯಶ್ರೀ 99.25%, ಬಿಪಿನ್ ಸಂದೇಶ್ 98.00%, ಗೌರಿ ಮಲಾನಿ 95.5%, ಪಿ.ತೇಜಶ್ರೀ 90.50%, ಕಾವ್ಯಂಜಲಿ 93.00%, ಯಾಸಿರೋದ್ದಿನ್ 91.00%, ಗಿರಿಷ್ 91.5%, ವೈಶಾಲಿ 87.25%, ಆದಿತ್ಯ 96.00%, ಮದಿಹಾ ಫತಿಮಾ 85.16%. ಈ ವಿದ್ಯಾರ್ಥಿಗಳಿಗೆ ಹಾಗೂ ಪಾಲಕರಿಗೆ ಕಾಲೇಜಿನ ಆವರಣದಲ್ಲಿ ಉಪಾಧ್ಯಕ್ಷೆ ಶ್ರೀಮತಿ ರೇಷ್ಮಾ ಕೌರ ಅವರು ಸನ್ಮಾನಿಸಿದರು.

ಈ ಮಕ್ಕಳ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರು ಡಾ|| ಸರದಾರ ಬಲಬೀರ ಸಿಂಗ್ ಉಪಾಧ್ಯಕ್ಷೆ ಡಾ|| ರೇಷ್ಮಾ ಕೌರ್, ಪ್ರಾಂಶುಪಾಲರಾದ ಡಾ|| ವಿಕ್ರಮಸಿಂಗ್ ತೋಮರ್, ಉಪಪ್ರಾಂಶುಪಾಲೆ ಶ್ರೀಮತಿ ಹೇಮಾ ಸುಲ್ತಾನಪೂರೆ, ಉಪನ್ಯಾಸಕರು ಮತ್ತು ಸಿಬ್ಬಂದಿ ವರ್ಗದವರು ಮೆಚ್ಚುಗೆ ವ್ಯಕ್ತಪಡಿಸಿ ಅತ್ಯುತ್ತಮ ಸಾಧನೆ ಮಾಡುವ ಮೂಲಕ ಕಾಲೇಜಿಗೆ ಕೀರ್ತಿ ತಂದಿದ್ದಕ್ಕಾಗಿ ಹೃದಯಪೂರ್ವಕವಾಗಿ ಅಭಿನಂದಿಸಿದ್ದಾರೆ.