ಗುರು ನಾನಕ ಪಬ್ಲಿಕ್ ಶಾಲೆ ಜನವಾಡಾ :ಮಕ್ಕಳಿಂದ ಸ್ವಚ್ಛತೆ ಕಾರ್ಯ

ಬೀದರ :ಅ.3:ತಾಲೂಕಿನ ಜನವಾಡಾ ಗ್ರಾಮದಲ್ಲಿ ನಡೆಯುತ್ತಿರುವ ಗುರು ನಾನಕ ಪಬ್ಲಿಕ್ ಶಾಲೆಯ ಮಕ್ಕಳು ಶ್ರಮದಾನ ಮಾಡಿದರು. ಈ ಸಂದರ್ಭದಲ್ಲಿ ಪ್ರಾಂಶುಪಾಲೆ ಶ್ರೀಮತಿ ಭಾಗ್ಯಶಾಲಿ ಖಾನಾಪೂರೆ ಮಾತನಾಡಿ ಮನೆ ಪರಿಸರ ಸ್ವಚ್ಛಗೊಳಿಸುವ ಮೂಲಕ ಗ್ರಾಮದ ಸುಂದರೀಕರಣಕ್ಕೆ ಆದ್ಯತೆ ನೀಡಬೇಕು. ಚರಂಡಿ ನೀರು ನಿಲ್ಲದಂತೆ ಕ್ರಮ ಅನುಸರಿಸಬೇಕು. ಇಲ್ಲವಾದರೆ ಡೆಂಗೂ ಸೇರಿ ಸಾಂಕ್ರಾಮಿಕ ರೋಗಗಳು ಹರಡುವ ಸಾದ್ಯತೆಗಳಿವೆ, ಇದು ಒಂದು ದಿವಸಕ್ಕೆ ಮಾತ್ರ ಸಿಮೀತ ಇರಬಾರದು, ತಮ್ಮ ಕೈಲಾದಷ್ಟು ಸೇವಾ ಮನೋಭಾವನೆ ಎಂದು ತಿಳಿದು ಸ್ಚಚ್ಛತೆ ಕಾಪಾಡಬೇಕು. ಆರೋಗ್ಯ ಸಂಪತ್ತು ತಮ್ಮದನ್ನಾಗಿಸಿರಿಕೊಳ್ಳುವ ಸಂಕಲ್ಪ ನಮ್ಮದಾಗಬೇಕು, ಸಾರ್ವಜನಿಕ ಸ್ಥಳಗಳ ಸ್ವಚ್ಛತೆ ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಹೇಳಿದರು.

ಮಕ್ಕಳು ಶಾಲೆ ಆವರಣ, ಗ್ರಾಮ ಪಂಚಾಯತ್ ಕಛೇರಿ, ಸಾರ್ವಜನಿಕ ಸ್ಥಳ, ಕಂದಾಯ ಇಲಾಖೆ ಕಛೇರಿ ಮತ್ತು ಗುರುದ್ವಾರಾಗಳ ಸ್ವಚ್ಛತೆ ಕೈಗೊಂಡಿದ್ದರು. ಈ ಸ್ವಚ್ಛತೆ ಕಾರ್ಯ ಸಂದರ್ಭದಲ್ಲಿ ಕಛೇರಿಯ ಸಿಬ್ಬಂದಿ ವರ್ಗದವರು ಮತ್ತು ಸಾರ್ವಜನಿಕರು ಕೈಜೋಡಿಸಿ ಗಮನ ಸೆಳೆದರು.

ಇದೇ ಸಂದರ್ಭದಲ್ಲಿ ಶಾಲೆಯಿಂದ ಶುರುವಾದ ರ್ಯಾಲಿ ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು. ಗಾಂಧಿಜಿ ಅವರ ತತ್ವ, ಸಿದ್ಧಾಂತ ಪಾಲಿಸಬೇಕು, ಎಂದಿಗೂ ಕೆಟ್ಟದಾಗಿ ಮಾತನಾಡಬೇಡಿ (ಕಬಿಭಿ ಬುರಾ ಮತಬೋಲೋ), ಎಂದಿಗೂ ಕೆಟ್ಟದಾಗಿ ಕೇಳಬೇಡಿ (ಬುರಾ ಮತಸುನೊ) ಮತ್ತು ಕೆಟ್ಟದಾಗಿ ಕಾಣಬೇಡಿ (ಬುರಾ ಮತದೇಖೋ) ಎಂಬ ಫಲಕ ಮತ್ತು ಘೋಷಣೆಯೊಂದಿಗೆ ಜನರಲ್ಲಿ ಜಾಗೃತಿ ಮೂಡಿಸಿದರು.