ಗುರು ನಾನಕ ಪಬ್ಲಿಕ್ ಶಾಲೆಯ ಸಂಭ್ರಮದ 48 ನೇ ವಾರ್ಷಿಕೋತ್ಸವ

ಬೀದರ:ಜ.16:ನಗರದ ನೇಹರು ಸ್ಟೇಡಿಯಂ ಹತ್ತಿರವಿರುವ ಗುರು ನಾನಕ ಪಬ್ಲಿಕ್ ಶಾಲೆಯ ವಾರ್ಷಿಕೋತ್ಸವ ಸಡಗರ ಸಂಭ್ರಮದಿಂದ ಶಾಲೆಯ ಆವರಣದಲ್ಲಿ ಜರುಗಿತು.

ಪ್ರಿನ್ಸಿಪಲ್ ಡಿಸ್ಟ್ರಿಕ್ ಮತ್ತು ಸೆಷನ್ ಜಡ್ಜ್ ಬೀದರಿನ ಬಸವರಾಜ ಎಸ್. ಚೇಗಾರಡ್ಡಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತ ವಿದ್ಯಾರ್ಥಿಗಳು ಅಂಕಗಳನ್ನು ಗಳಿಸುವುದೆ ಮುಖ್ಯವಲ್ಲ ಅದರÀ ಜೊತೆಗೆ ವಿದ್ಯಾರ್ಥಿಗಳು ನೈತಿಕ, ಅಧ್ಯಾತ್ಮಿಕ, ಭೌದ್ದಿಕ ಮತ್ತು ಮಾನಸಿಕವಾಗಿ ಬೆಳೆದರೆ ಭವಿಷ್ಯ ರೂಪಿಸುವಲ್ಲಿ ಯಶಸ್ವಿಪಡೆದುಕೊಳ್ಳಲು ಸಾಧ್ಯವೆಂದು ಮಕ್ಕಳಿಗೆ ಕರೆಕೊಟ್ಟರು. ಭಾರತ ಒಂದು ಸನಾತನ ದೇಶ. ಇದು ಅನೇಕ ಮಹಾ ಕವಿಗಳು, ಋಷಿಮುನಿಗಳು ನೆಲೆಸಿದ ಪುಣ್ಯಭೂಮಿ, ಇಂತಹ ದೇಶದಲ್ಲಿ ಸ್ವಾಮಿ ವಿವೇಕಾನಂದರು ಜನಿಸಿ ಯುವ ಜನಾಂಗಕ್ಕೆ ಸ್ಪೂರ್ತಿಯ ಶಕ್ತಿಯಾಗಿದ್ದಾರೆ ಎಂದು ಹೇಳಿದರು. ಅವರಂತೆಯೇ ನಾವು ದೇಶದ ಏಳ್ಗೆಗಾಗಿ ಶ್ರಮಿಸಬೇಕೆಂದು ತಿಳಿಸಿದರು.

ಮಕ್ಕಳು ದೈನಂದಿನ ಚಟುವಟಿಕೆಗಳನ್ನು ತಪ್ಪದೆ ಪಾಲಿಸಿ ದೇಶ ಸೇವೆಗಾಗಿ ಸಿದ್ದರಾಗಬೇಕೆಂದು ಕರೆ ಕೊಟ್ಟರು. ಮಕ್ಕಳು ತಮ್ಮ ಶಿಕ್ಷಣದ ಜೊತೆಗೆ ಪಾಲಕರ ಆದೇಶವನ್ನು ಮೀರದೆ ನಡೆಯಬೇಕು. ಒಳ್ಳೆಯ ಫಲಿತಾಂಶದೊಂದಿಗೆ ಅವರ ಋಣವನ್ನು ತೀರಿಸಬೇಕು. ನಗರ ಹಾಗೂ ಗ್ರಾಮೀಣ ಪ್ರದೇಶಗಳ ಪ್ರಗತಿಗೆ ಶ್ರಮಿಸಬೇಕು ಎಂದು ನುಡಿದರು.

ಅಧ್ಯಕ್ಷರು ನಾಗರಿಕಾ ಅಭಿನಂದನಾ ಸಮಿತಿ ಬೀದರಿನ ಶ್ರೀ ಚೆನ್ನಬಸಪ್ಪಾ ಹಾಲಹಳ್ಳಿ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತ ಜಿಲ್ಲೆಯಲ್ಲಿ ಗುರು ನಾನಕ ಶಾಲೆಯು ಶಿಕ್ಷಣ ಕ್ಷೇತ್ರದಲ್ಲಿ ಗಣನೀಯ ಸೇವೆಯನ್ನು ಸಲ್ಲಿಸುತ್ತ ಮಕ್ಕಳ ಭವಿಷ್ಯವನ್ನು ನಿರ್ಮಿಸುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಕಾರ್ಯವೆಂದು ತಿಳಿಸುತ್ತ ಇದೊಂದು ಮಾದರಿ ಶಾಲೆಯಾಗಿದೆ ಎಂದು ಬಣ್ಣಿಸಿದರು. ಮಕ್ಕಳಿಗೆ ಶಿಕ್ಷಕರ ಮಾಗದರ್ಶನ ಅತ್ಯವಶ್ಯಕವಾಗಿದೆ. ಈ ಯುಗದಲ್ಲಿ ವಿದ್ಯಾಭ್ಯಾಸವು ಚೆನ್ನಾಗಿ ಕೊಡಿಸಬೇಕೆಂದು ಪಾಲಕರಿಗೆ ಕರೆಕೊಟ್ಟರು

ಪ್ರೊ. ಡಿ.ಬಿ.ಕಂಬಾರ ಅವರು ಮಾತನಾಡುತ್ತ ವಿದ್ಯಾರ್ಥಿಗಳು ತಮ್ಮ ಗುರಿಯನ್ನು ಮುಟ್ಟಲು ಶ್ರಮಪಟ್ಟು ಪ್ರಯತ್ನ ಮಾಡಬೇಕೆಂದು ಹೇಳಿದರು. ಆಧುನಿಕ ವಿಶ್ವದಲ್ಲಿ ಸಾಗಬೇಕಾದರೆ ಪುಸ್ತಕ ಹಾಗೂ ಎಲೆಕ್ಟ್ರಾನಿಕ್ಸ್ ಪ್ರಪಂಚಕ್ಕೆ ಮಹತ್ವ ಕೊಡಬೇಕೆಂದು ಕರೆಕೊಟ್ಟರು. ಮಕ್ಕಳು ಕಾಲಕ್ಕೆ ತಕ್ಕಂತೆ ಜ್ಞಾನ ಪಡೆದುಕೊಳ್ಳಲು ಪಾಲಕರು ಅವರಿಗೆ ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ಕೊಡಿಸಬೇಕು ಹಾಗೂ ಅವರ ಮೇಲೆ ನಿಗಾವಹಿಸಬೇಕು ಎಂದು ಕಿವಿ ಮಾತು ಹೇಳಿದರು. ಮಕ್ಕಳು ಹೆಚ್ಚು ಪುಸ್ತಕಗಳನ್ನು ಓದಿ ತಮ್ಮ ಜ್ಞಾನವನ್ನು ಬೆಳೆಸಿಕೊಳ್ಳಬೇಕು. ಭವಿಷ್ಯದಲ್ಲಿ ಎಲ್ಲರೂ ಕೈ ಬಿಟ್ಟರೂ ವಿದ್ಯೆಯು ಎಂದೂ ಕೈಬಿಡದು. ಅದು ಸದಾ ನಿಮ್ಮನ್ನು ಕಾಪಾಡುತ್ತದೆ ಎಂದು ಹೇಳಿದರು. ಮಕ್ಕಳಿಗೆ ಹೆಚ್ಚು ಸಮಯ ಮೀಸಲಿಡಿ ಮಕ್ಕಳ ಬೆಳವಣಿಗೆಯಲ್ಲಿ ಪಾಲಕರ ಪಾತ್ರ ಅತಿ ಮಹಯತ್ವದಾಗಿದೆ ನೈಜ್ಯ ಆಸ್ತಿ, ಪಾಲಕರು ಮಕ್ಕಳಿಗಾಗಿ ಆಸ್ತಿ ಮಾಡುವುದಕ್ಕಿಂತ ಹೆಚ್ಚಾಗಿ ಅವರಿಗೆ ಸಮಯ ಮೀಸಲಿಡಬೇಕು ಸದ್ಗುಣ ಬಿತ್ತಿ, ಸ್ವಾವಲಂಬಿಗಳನ್ನಾಗಿಸುವ ಶಿಕ್ಷಣ ನೀಡುವುದು ಇಂದಿನ ತುರ್ತು ಅಗತ್ಯವಾಗಿದೆ ಎಂದರು.

ಕಿತ್ತೂರ ರಾಣಿ ಚೆನ್ನಮ್ಮಾ ಮಹಿಳಾ ಸಂಘದ ಅಧ್ಯಕ್ಷೆ ಡಾ|| ಗುರುಮ್ಮಾ ಸಿದ್ದರಡ್ಡಿ ಮತ್ತು ಶ್ರೀ ಅಣ್ಣಾರಾವ ಪಾಟೀಲ ತಹಸಿಲ್ದಾರ ಬೀದರ ಇವರು ವಿವಿಧ ಸ್ಪರ್ಧೆಗಳಲ್ಲಿ ಪದಕ ಮತ್ತು ಪ್ರಮಾಣ ಪತ್ರ ಪಡೆದ ವಿದ್ಯಾರ್ಥಿಗಳಿಗೆ ವಿತರಣೆ ಮಾಡಿದರು.

ಶಾಲೆಯ ಆಡಳಿತ ಮಂಡಳಿಯ ಉಪಾಧ್ಯಕ್ಷೆಯಾಗಿರುವ ಡಾ|| ರೇಷ್ಮಾ ಕೌರ ಅವರು ವಾರ್ಷಿಕ ವರದಿ ವಾಚನ ಮಾಡಿ ಶಾಲೆಯ ನಾಲ್ಕು ದಶಕಗಳ ಸುಧೀರ್ಘ ಪಯಣದ ಸಾಹಸಗಾಥೆಯನ್ನು ತೆರೆದಿಟ್ಟರು. ಈ 48 ವಸಂತಗಳಲ್ಲಿ ಶಾಲೆಯ ಬೋಧಕ, ಬೋಧಕೇತರ ಸಿಬ್ಬಂದಿಗಳ ಕಠಿಣ ಪರಿಶ್ರಮದಿಂದಾಗಿ ಶಾಲೆಯು ಹಂತ ಹಂತವಾಗಿ ಬೆಳೆದು ಬಂದ ಬಗ್ಗೆ ವಿವರಿಸುತ್ತ ಇದರ ಶ್ರೇಯೋಭಿವೃದ್ಧಿಗೆ ಶ್ರಮಿಸಿದ ಎಲ್ಲಾ ಸಿಬ್ಬಂದಿ ವರ್ಗದವರಿಗೂ ಮತ್ತು ಸಹಕರಿಸಿದ ಪಾಲಕರಿಗೂ ಅಭಿನಂದಿಸಿದರು.

ಈ ಕಾರ್ಯಕ್ರಮದ ಅಧ್ಯಕ್ಷೆತೆಯನ್ನು ಡಾ|| ಎಸ್.ಬಲಬೀರ್ ಸಿಂಗ್ ಅವರು ವಹಿಸಿದ್ದರು.

ಇದೆ ಸಂದರ್ಭದಲ್ಲಿ ಶಾಲೆಯ ಪ್ರಂಶುಪಾಲರಾದ ಶ್ರೀ ಎನ್.ರಾಜು ಸ್ವಾಗತ ಭಾಷಣ ಮಾಡದರೆ ಶ್ರೀಮತಿ ಭಾಗ್ಯಶಾಲಿ ವಂದಿಸಿದರು. ಶ್ರೀ ಅಮಜದ ಅಲಿ, ಶ್ರೀಮತಿ ಆರೀಫಾ ಹಾದಿ ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.