ಗುರು ನಾನಕ ಪಬ್ಲಿಕ್ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ: ಸಸಿ ವಿತರಣೆ

ಬೀದರ:ಜೂ.6:ನೆಹರು ನಗರದ ನೆಹರು ಸ್ಟೇಡಿಯಂ ಹತ್ತಿರ ವಿರುವ ಗುರು ನಾನಕ ಪಬ್ಲಿಕ್ ಶಾಲೆಯಲ್ಲಿ ಶನಿವಾರದಂದು ವಿಶ್ವ ಪರಿಸರ ದಿನಾಚಾರಣೆ ನಿಮಿತ್ಯ ಶಾಲೆಯ ಆವರಣದಲ್ಲಿ ಸಸಿಗಳನ್ನು ನೆಡಲಾಯಿತು.
ಈ ಸಂದರ್ಭದಲ್ಲಿ ಗುರು ನಾನಕ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷೆ ರೇಷ್ಮಾ ಕೌರ ಮಾತನಾಡಿ, ಗಿಡಗಳನ್ನು ಬೆಳೆಸಿ ನಾಡನ್ನು ಉಳಿಸಬೇಕು. ಯಾಂತ್ರಿಕ ಜೀವನ ಕ್ರಮದಿಂದಾಗಿ ವಹಾನಗಳ ಹೊಗೆದಟ್ಟಿನಿಂದ ಉಸಿರುವ ಗಟ್ಟುವಂತಹ ಪರಿಸರ ನಿರ್ಮಾಣವಾಗಿದೆ. ಮನುಷ್ಯ ತನ್ನ ಸ್ವರ್ಥಕ್ಕಾಗಿ ಗಿಡಮರಗಳನ್ನು ತುಂಡರಿಸಿ ಇಂತಹ ಅನಾಹುತಕ್ಕೆ ಎಡೆಮಾಡಿಕೊಟ್ಟಿದ್ದಾನೆ. ಮುಂದಿನ ಪಿಳಿಗೆ ಸ್ವಚ್ಛ ಪರಿಸರಕ್ಕಾಗಿ ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣ ವಾಗಬಹುದು. ಇದಕ್ಕೆ ಏಕೈಕ ಉಪಾಯವೆಂದರೆ ಪರಿಸರದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ ತಲೆಗೊಂದು ಮರ, ಊರಿಗೊಂದು ವನ ಎಂಬ ನೀತಿ ಅನುಸರಿಸಿ ಅದರಂತೆ ನಡೆದರೆ ಮಾತ್ರ ಭಾವಿ ಪೀಳಿಗೆಗೆ ಉಡಿಗಾಲವಿದೆ ಎಂದು ಅಭಿಪ್ರಾಯಪಟ್ಟರು. ಜನರಿಗೆ ಜಾಗೃತಿ ಮೂಡಿಸಿ ಹಸಿರು ಕ್ರಾಂತಿಗೆ ಒಂದು ಅಳಿಲು ಸೇವೆಯಂದು ಭಾವಿಸಿ ಇದು ಕೇವಲ ತೋರಿಕೆಯ ಕ್ರಮವಾಗದೆ ನಾವೆಲ್ಲರು ಹಸಿರನ್ನು ಉಳಿಸಿ ಬೆಳೆಸಿಕೊಂಡು ಹೋಗುವಂತಾಗಬೇಕು ಎಂದು ಕರೆ ನೀಡಿದರು.
ಶಾಲೆಯ ಪ್ರಾಚಾರ್ಯೆ ಎನ್.ರಾಜು, ಕಾಲೇಜಿನ ಪ್ರಾಚಾರ್ಯರು, ಸಿಬ್ಬಂದಿ ಈ ಸಂದರ್ಭದಲ್ಲಿದ್ದರು.