
ಬೀದರ:ಸೆ.16:ದೇಶದಲ್ಲಿ ಮಾತ್ರವಲ್ಲ ವಿಶ್ವದಲ್ಲಿ ಹಿಂದಿಯ ಪ್ರಚಾರವು ವೇಗವಾಗಿ ಸಾಗುತ್ತಿದೆ. ಆನ್‍ಲೈನ್ ಜಗತ್ತಿನಲ್ಲಿಯೂ ಹಿಂದಿಯ ಮೇಲಿನ ಪ್ರೀತಿ ನಿರಂತರವಾಗಿ ಹೆಚ್ಚುತ್ತಿದೆ. ಹಿಂದಿ ನಮ್ಮ ರಾಷ್ಟ್ರಭಾಷೆ, ಹಿಂದಿಯನ್ನು ಎಲ್ಲಾ ಕ್ಷೇತ್ರಗಳಲ್ಲಿ ಉತ್ತೇಜಿಸಬೇಕು, ಹಿಂದಿಯ ಅಸ್ತಿತ್ವ ಎಂದಿಗೂ ಮುಗಿಯಲಾರದು ಹಿಂದಿಯನ್ನು ಅರ್ಥ ಮಾಡಿಕೊಳ್ಳುವವರಿಗೆ ಸೆಂಪ್ಟೆಂಬರ್ 14 ಕೇವಲ ಹಿಂದಿ ದಿನವಲ್ಲ, ಅದೊಂದು ಹಬ್ಬದಂತೆ, ನೀವು ಹಿಂದಿ ದಿವಸ ಬಗ್ಗೆ ಹೆಮ್ಮೆ ಪಡಬೇಕು ಎಂದು ಮುಖ್ಯ ಅತಿಥಿಯಾಗಿ ಭಾಗವಹಿಸಿದ ಸಂಸ್ಥೆಯ ಉಪಾಧ್ಯಕ್ಷೆ ಡಾ.ರೇಷ್ಮಾ ಕೌರ್ ಅವರು ವಿದ್ಯಾರ್ಥಿಗಳಿಗೆ ತಿಳಿಹೇಳಿದರು.
ಮನ್ನಹಳ್ಳಿ ರಸ್ತೆಯಲ್ಲಿರುವ ಗುರು ನಾನಕ ಪ್ರಥಮ ದರ್ಜೆ ಪದವಿ ಕಾಲೇಜ್‍ನಲ್ಲಿ ಹಮ್ಮಿಕೊಂಡಿದ್ದ ಹಿಂದಿ ದಿವಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳ ರೈತ ಪೋಷಕರಿಗೆ ಕರೆದು ಸನ್ಮಾನಿಸಿ ರೈತರು ನಮ್ಮ ದೇಶದ ಜೀವನಾಳಿ, ರೈತರು ಇದ್ದರೆ ನಾವು ಬದುಕಲು ಸಾಧ್ಯ ಎಂದು ಹೇಳಿದರು.
ಶಾಲೆಯ ಹಿಂದಿ ಶಿಕ್ಷಕಿ ಶ್ರೀಮತಿ ಇಂದಿರಾ ಠಾಕೂರ ಅವರು ಸ್ವಾಗತ ಭಾಷಣ ಮಾಡಿ ಹಿಂದಿ ದಿವಸದ ಶೂಭಕೋರುತ್ತ ಹಿಂದಿಯು ಸಾಹಿತ್ಯಕಾರರಾದ ವ್ಯೋಹಾರ ರಾಜೇಂದ್ರ ಸಿಂಹಾ ಅವರ ಕೊಡುಗೆ ಅಪಾರ ಮತ್ತು ರಾಷ್ಟ್ರೀಯ ಭಾಷೆ ಮಾಡಲು ಅತಿ ಹೆಚ್ಚು ಶ್ರಮಪಟ್ಟರು. ಸ್ವಾತಂತ್ರಯ ಸಿಕ್ಕನಂತರ ಹಿಂದಿಗೆ ರಾಷ್ಟ್ರ ಭಾಷೆಯನ್ನಾಗಿಸಲು ಅನೇಕ ಸಾಹಿತ್ಯಕಾರರು ಒಳಗೊಂಡು ಪ್ರಯತ್ನಪಟ್ಟರು ಎಂದು ಹೇಳಿದರು.
ಕಾಲೇಜಿನಲ್ಲಿ ಭಾಷಣ ಸ್ಪರ್ಧೇ, ಚಿತ್ರಕಲಾ ಸ್ಪರ್ದೆ ಮತ್ತು ರಸಪ್ರಶ್ನೆ ಸ್ಪರ್ದೇ ಹಮ್ಮಿಕೊಳ್ಳಲಾಗಿತ್ತು. ಗೆದ್ದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಮತ್ತು ಟ್ರೋಪಿ ನೀಡಿ ಸನ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ ಗುರು ನಾನಕ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಶಾಮಲಾ ವಿ.ದತ್ತಾ, ಪಿಯು ಕಾಲೇಜಿನ ಪ್ರಾಂಶುಪಾಲೆ ಶ್ರೀಮತಿ ಹೇಮಾ ಸುಲ್ತಾನಪೂರೆ, ವಿಲಾಸರಾವ ಕುಲಕರ್ಣಿ, ಸಂಜಯ್ ಮೈನಳ್ಳಿ, ಇಂದಿರಾ ಠಾಕೂರ್, ಕವಿತಾ ವಿ, ರಾಣಿ, ಲಕ್ಷ್ಮೀ ಮತ್ತು ಹಿಂದಿ ಡಿಪಾರ್ಟಮೆಂಟ್‍ನ ಎಲ್ಲಾ ಶಿಕ್ಷಕ-ಶಿಕ್ಷಕಿಯರು ಉಪಸ್ಥಿತರಿದ್ದರು.