ಗುರು ನಾನಕ ಕಾಲೇಜ್ : ನೀಟ್ ಸಾಧನೆ

ಬೀದರ:ಜೂ.15:2022-23 ನೇ ಸಾಲಿನ ಪದವಿ ಪೂರ್ವ ನೀಟ್ (ನೀಟ್ ಯುಜಿ) ಫಲಿತಾಂಶ ಪ್ರಕಟಗೊಂಡಿದೆ. ನಗರದ ಸ್ಟೇಡಿಯಂ ಹತ್ತಿರ ವಿರುವ ಗುರು ನಾನಕ ಪದವಿ ಪೂರ್ವ ಕಾಲೇಜ್‍ನ ವಿದ್ಯಾರ್ಥಿ ರಾಜೇಶ್ ಮೊಳಕೇರೆ ತಂದೆ ಅಜಯ ಮೊಳಕೆರೆ ಅಖಿಲ ಭಾರತ ವೈದ್ಯಕೀಯ ವಿಜ್ಞಾನದಲ್ಲಿ 650 ಅಂಕಗಳು ಪಡೆಯುವ ಮೂಲಕ ನೀಟ್ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ.

ಈ ಸಾಧನೆ ಮಾಡಿದ ರಾಜೇಶ ಮೊಳಕೇರೆ ಅವರಿಗೆ ಇಂದು ಕಾಲೇಜಿನಲ್ಲಿ ಸನ್ಮಾನಿಸಲಾಯಿತು. ಕಾಲೇಜಿನ ಪ್ರಾಂಶುಪಾಲರಾದ ಡಾ|| ವಿಕ್ರಮ ಸಿಂಗ್ ತೋಮರ್ ಅವರು ಮಾತನಾಡುತ್ತ ವಿದ್ಯಾರ್ಥಿಯ ಈ ಅದ್ಭುತ ಸಾಧನೆಗೆ ಅವರ ಸತತವಾದ ಕಠಿಣ ಪರಿಶ್ರಮ, ಪೋಷಕರ ಸಹಕಾರ ಹಾಗೂ ಶಿಕ್ಷಕರ ಪರಿಣಾಮಕಾರಿ ಬೋಧನೆ ಮತ್ತು ಆಡಳಿತ ಮಂಡಳಿಯ ಸುವ್ಯವಸ್ಥಿತ ಮಾರ್ಗದರ್ಶನದಿಂದ ಸಾಧ್ಯವಾಗಿದೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.

ವಿದ್ಯಾರ್ಥಿ ರಾಜೇಶ್ ಈ ಸಂದರ್ಭದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತ ಈ ಸಾಧನೆಗೆ ಪೋಷಕರ, ಶಿಕ್ಷಕರ ಹಾಗೂ ತನ್ನ ಕಠಿಣ ಪರಿಶ್ರಮ ಕಾರಣವಾಗಿದೆ. ತಮ್ಮ ಈ ಸಾಧನೆಗೆ ಸನ್ಮಾನಿಸಿ ಗೌರವಿಸುತ್ತಿರುವುದು ನಮಗೆ ಮತ್ತಷ್ಟು ಪ್ರೇರಣೆ ನೀಡಿದಂತಾಗಿದೆ. ಈ ಕಾಲೇಜಿನ ಉಪನಸ್ಯಾಸಕರು ನೀಡುತ್ತಿರುವ ಗುಣಮಟ್ಟದ ಶಿಕ್ಷಣವೆ ಇದಕ್ಕೆ ಸಾಕ್ಷಿಯಾಗಿದೆ ಎಂದರು.

ಈ ಸಂದರ್ಭದಲ್ಲಿ ಕಾಲೇಜಿನ ಉಪ ಪ್ರಾಂಶುಪಾಲೆ ಶ್ರೀಮತಿ ಹೇಮಾ ಸುಲ್ತಾನಪೂರೆ ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.