ಗುರು ನಾನಕ ಆಸ್ಪತ್ರೆಯಲ್ಲಿ ಮತ್ತೊಂದು ಯಶಸ್ವಿ ಶಸ್ತ್ರ ಚಿಕಿತ್ಸೆ2 ವರ್ಷಗಳಿಂದ ಕುತ್ತಿಗೆ ನೋವಿನಿಂದ ಬಳಲುತ್ತಿದ್ದ ಬರಕತ್ ಅಲಿ

ಬೀದರ್ ಸೆ. 18:ಕುತ್ತಿಗೆಯ ಸಿ-2 ಡೆನ್ಸ್ (ಅ2 ಆeಟಿs) ಸಮಸ್ಯೆಯಿಂದ ಕಳೆದ 2 ವರ್ಷಗಳಿಂದ ಬಳಲುತ್ತಿರುವ 45 ವರ್ಷದ ಭಾಲ್ಕಿಯ ರೋಗಿಗೆ ಇಲ್ಲಿನ ಗುರು ನಾನಕ ಆಸ್ಪತ್ರೆಯ ನರ ಮತ್ತು ಬೆನ್ನು ಮೂಳೆ ತಜ್ಞ ಡಾ. ಲಿಂಗರಾಜ ಕಾಡಾದಿ ಯಶಸ್ವಿ ಶಸ ಚಿಕಿತ್ಸೆ ಮಾಡಿದ್ದಾರೆ.

ರೋಗಿ ಬರಕತ್ ಅಲಿಗೆ ನಡೆದಾಡಲು ಹಾಗೂ ದಿನ ನಿತ್ಯದ ಕೆಲಸ ಮಾಡಲು ಆಗದೆ ಇರುವುದನ್ನು ಅರಿತ ಕುಟುಂಬಸ್ಥರು ಹೈದ್ರಾಬಾದ್, ಸೋಲಾಪೂರ ಆಸ್ಪತ್ರೆಗೆ ತೋರಿಸಿದ್ದರು ಆದರೆ ಬೀದರ್‍ನ ಗುರು ನಾನಕ ಆಸ್ಪತ್ರೆಯಲ್ಲಿಯೇ ಈ ರೋಗಕ್ಕೆ ತಜ್ಞ ವೈದ್ಯರಿದ್ದಾರೆ ಎಂಬ ಮಾಹಿತಿ ಪಡೆದು ವೈದ್ಯ ಡಾ. ಲಿಂಗರಾಜ ಕಾಡಾದಿ ಅವರನ್ನು ಭೇಟಿಯಾಗಿದ್ದರು.

ಡಾ. ಕಾಡಾದಿ ಅವರು ಈ ಪ್ರಕರಣವನ್ನು ಚ್ಯಾಲೆಂಜ್ ಆಗಿ ಸ್ವೀಕರಿಸಿ ಶಸ ಚಿಕಿತ್ಸೆ ಮಾಡಿ ಸಿ1-ಸಿ2 (ಅ1-ಅ2) ಸರಿಪಡಿಸಲಾಯಿತು. ಹೈದ್ರಾಬಾದ್-ಕನಾಟಕ ಭಾಗದಲ್ಲಿಯೇ ಇಂತಹ ಶಸ್ತ್ರ ಚಿಕಿತ್ಸೆ ನಡೆದಿದ್ದು ಬಹಳ ವಿರಳ ಎನ್ನಬಹುದು.

ರೋಗಿಯ ಶಸ ಚಿಕಿತ್ಸೆ ಸಂದರ್ಭದಲ್ಲಿ ಎನಾದರು ಏರು ಪೇರಾದರೆ ರೋಗಿಯ ಪ್ರಾಣ ಹೊಗಬಹುದು ಅಥವಾ ಪಾಶ್ರ್ವವಾಯು (ಪ್ಯಾರಾಲೆಸೆಸ್) ಆಗುವ ಸಂಭವ ಹೆಚ್ಚಾಗಿರುತ್ತದೆ. ಆದರೆ ಡಾ. ಲಿಂಗರಾಜ ಕಾಡಾದಿ ಶಸ ಚಿಕಿತ್ಸೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಈಗ ರೋಗಿ ಚೆನ್ನಾಗಿದ್ದು ಕೆಲ ದಿನಗಳಲ್ಲಿ ಆರಾಮಾಗಿ ಓಡಾಡಬಹುದು ಎಂದು ವೈದ್ಯರು ತಿಳಿಸಿದರು.

ಶಸ ಚಿಕಿತ್ಸೆಯ ಸಂದರ್ಭದಲ್ಲಿ ವೈದ್ಯರೊಂದಿಗೆ ಡಾ. ನೀಶಾ ಕೌರ್, ಸಿಬ್ಬಂದಿಗಳಾದ ಸುನೀಲ, ರೋಜ್, ಪ್ರಕಾಶ, ರಂಜೀತ್, ಭೀಮಣ್ಣ, ಜಯಶ್ರೀ, ಮಹೇಬೂಬ್, ಆಸ್ಪತ್ರೆಯ ಆಡಳಿತಾದಿಕಾರಿ ಡಾ. ಶಾಂತಿಸಿಂಗ್ ಇದ್ದರು. ಆಸ್ಪತ್ರೆಯ ವೈದ್ಯರ ಈ ಯಶಸ್ವಿ ಶಸ ಚಿಕಿತ್ಸೆಗೆ ಆಸ್ಪತ್ರೆಯ ನಿರ್ದೇಶಕರಾದ ರೇಷ್ಮಾ ಕೌರ್ ಡಾ. ಲಿಂಗರಾಜ ಕಾಡಾದಿ ಅವರ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.