ಗುರು ಚನ್ನಬಸವಣ್ಣ ಪುತ್ಥಳಿ ಲೋಕಾರ್ಪಣೆ


ಹುಬ್ಬಳ್ಳಿ ಏ. 10 : ಹುಬ್ಬಳ್ಳಿ ಸಮೀಪದ ಬೂದ್ದನಗುಡ್ಡದಲ್ಲಿ ಶ್ರೀ ಗುರು ಚನ್ನಬಸವಣ್ಣನವರ ಪುತ್ಥಳಿಯನ್ನು ಹುಬ್ಬಳ್ಳಿಯ ರುದ್ರಾಕ್ಷಿಮಠದ ಬಸವಲಿಂಗ ಮಹಾಸ್ವಾಮಿಜೀ ಹಾಗೂ ಅತ್ತಿವೇರಿ ಬಸವರಾಜೇಶ್ವರಿ ಮಾತಾಜೀ ಲೋಕಾರ್ಪಣೆ ಮಾಡಿದರು.
ಈ ವೇಳೆ ಮಾತನಾಡಿದ ರುದ್ರಾಕ್ಷಿಮಠದ ಬಸವಲಿಂಗ ಮಹಾಸ್ವಾಮಿಯವರು ಬಸವಣ್ಣನವರ ವಚನ ತತ್ವಗಳಿಗಾಗಿ ದೇಶ ವಿದೇಶದಿಂದ ಬಂದು ಭಾಗವಹಿಸುತ್ತಿದ್ದ ಶರಣ ವಚನ ತತ್ವಗಳಿಗಾಗಿ ದೇಶ ವಿದೇಶದಿಂದ ಬಂದು ಭಾಗವಹಿಸುತ್ತಿದ್ದ ಶರಣರಿಗೆ ಕಲ್ಯಾಣದ ಮಾಹಿತಿಯನ್ನು ಸಮಗ್ರವಾಗಿ ವಚನಗಳಲ್ಲಿ ದಾಖಲಿಸಿದ ಕೀರ್ತಿ ಚಿನ್ಮಯ ಜ್ಞಾನಿ ಚನ್ನಬಸವಣ್ಣನವರಿಗೆ ಸಲ್ಲುತ್ತದೆ ಎಂದ ಅವರು 21 ನೇ ವರ್ಷದಲ್ಲಿ ಸೊಲ್ಲಾಪುರದ ಸಿದ್ದರಾಮೇಶ್ವರರಿಗೆ ಇಷ್ಠಲಿಂಗ ದೀಕ್ಷೆಯನ್ನು ನೀಡಿ ಲಿಂಗಾಯತ ಧರ್ಮದ ತತ್ವವನ್ನು ಬೆಳಗಿಸಿದವರು ಚಿನ್ನಯ್ಯ ಚನ್ನಬಸವಣ್ಣನವರು ಎಂದು ಶ್ರೀಗಳು ತಿಳಿಸಿದರು.
ಅತ್ತಿವೇರಿ ಬಸವರಾಜೇಶ್ವರಿ ತಾಯಿಯವರು ಅನುಭವದ ನುಡಿಗಳನಾಡಿ ಅಕ್ಕಮಹಾದೇವಿಯವರು ಉಡತಡಿಯಿಂದ ಅನುಭವ ಮಂಟಪಕ್ಕೆ ಬಂದಾಗ ಅವರ ದಿವ್ಯತ್ವವನ್ನು ಅನುಭವ ಮಂಟಪಕ್ಕೆ ಪರಿಚಯಿಸಿದ ಚನ್ನ ಬಸವಣ್ಣನವರು ತಮ್ಮೊಡನೆ ಹನ್ನೆರಡು ಶರಣರನ್ನು ಕರೆದುಕೊಂಡು ಉಳವಿಗೆ ಹೋಗುವ ಮೊದಲು ಬೂದನಗುಡ್ಡದ ಮೇಲೆ ಕೆಲವು ದಿನಗಳವರೆಗೆ ವಾಸವಿದ್ದು, ಮುಂದೆ ಉಳುವಿಗೆ ಸಾಗಿದರೆಂದು ಮಾತಾಜಿಯವರು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಮಿತಿಯ ಉಪಾಧ್ಯಕ್ಷ ಈರಪ್ಪ ಕೆ. ಎಮ್ಮಿ ಅವರು ತಮ್ಮ ಆಸೆಯಂತೆ 51 ಫೂಟ್ ಎತ್ತರದ ಚಿನ್ಮಯ ಜ್ಞಾನಿ ಚನ್ನಬಸವಣ್ಣನವರ ಪುತ್ಥಳಿಯನ್ನು ಮಾಡಿಸುವ ಮೊದಲೇ ಕಲಘಟಗಿ ಶರಣಾರಾದ ಶೀಲವಂತ ಮನೆತನದ ಶರಣರಾದ ಅಶೋಕ ಶೀಲವಂತ ಅವರ. ಕುಟುಂಬ ಪರಿವಾರದವರು ಮೂರ್ತಿಯನ್ನು ಕೊಡಿಸಿದ್ದು ಸಂತೋಷಕರವಾಗಿದ್ದು, ಅಲ್ಲದೇ ಕಾರವಾರ ರಸ್ತೆಗೆ ಹೊಂದಿಕೊಂಡಿರುವ ದೊಡ್ಡ ದ್ವಾರ ಬಾಗಿಲನ್ನು ಮಾಡಿಸುವುದಿದೆ ಎಂದರು.
ದೇವಸ್ಥಾನದ ಅಭಿವೃದ್ಧಿಗೆ ಭಕ್ತಾಧಿಗಳು ಹಾಗೂ ಶರಣರು ಸಹಾಯ ಹಸ್ತ ಮಾಡಬೇಕು. ಈ ಕ್ಷೇತ್ರವನ್ನ ಪ್ರೇಕ್ಷಣೀಯ ಸ್ಥಳವನ್ನಾಗಿ ಮಾಡೋಣ. ಈಗಾಗಲೇ ಸಮುದಾಯ ಭವನಕ್ಕೆ ಪ್ರವಾಸ ಇಲಾಖೆಯ ಉದ್ಯಮಿಯ ಇಲಾಖೆಯಿಂದ ಹಣ ಕೂಡ ಮಂಜೂರಾಗಿದೆ. ಆದರೆ ಅರಣ್ಯ ಇಲಾಖೆಯಿಂದ ತಡೆಯಾಗಿರುವುದರಿಂದ ಕೆಲಸ ನಿಂತಿದೆ. ಸರ್ಕಾರದ ಇಲಾಖೆಯಿಂದ ಸಹಕಾರ ಸಿಗುತ್ತಿದೆ. ಆದರೇ ಸ್ಥಳೀಯ ಹಾಗೂ ಉಸ್ತುವಾರಿ ಸಚಿವರಿಂದ ನಮಗೆ ಸಹಕಾರ ಸಿಗುತ್ತಿಲ್ಲ. ಆದ್ದರಿಂದ ಶರಣರೇ ಮುಂದೆ ನಿಂತು ಈ ಕಾರ್ಯವನ್ನು ಮಾಡಬೇಕು ಎಂದರು.
ಕ್ಷೇತ್ರ ಸದಸ್ಯರಾದ ಪ್ರಭು ಶೆಟ್ಟರ್, ಮನೋಹರ ಜಮಖಂಡಿ, ಕೋರಿಶೆಟ್ಟರ್, ಕುರಲಟ್ಟಿ, ತಿಪ್ಪಣ್ಣ ಕುಂದರಗಿ, ಬಸವರಾಜ ಶಿವಶಿಂಪರ, ನೀಲಪ್ಪ ಮುತಗಿ, ಬಸವರಾಜ ಕೆಲಗೇರಿ, ನೀಲಪ್ಪ ಹಿರೇಗುಂಜಳ, ಗುರುಲಿಂಗಪ್ಪ ಉಣಕಲ್, ಶಿವಾನಂದ, ರಾಜಶೇಖರ ಶೀಲವಂತರ, ಅನಸೂಯ ಅರಕೇರಿ, ಪ್ರಭಾವತಿ ಯರೇಶಿಮೆ, ಬಸವನ ಹುಳ್ಳಲಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.