
ಕೊಟ್ಟೂರು ಡಿ 28: ಪಟ್ಟಣದ ಗುರು ಕೊಟ್ಟೂರೇಶ್ವರ ಸ್ವಾಮೀಯ ಕಾರ್ತಿಕೋತ್ಸವಕ್ಕೆ ಸೋಮವಾರ ಸಂಜೆ ಅದ್ದೂರಿ ಚಾಲನೆ ನಿಡಲಾಯಿತು. ಸೂರ್ಯ ಪಶ್ಚಿಮ ದಿಕ್ಕಿನಲ್ಲಿ ಸಾಗುತ್ತಿದ್ದಂತೆ ಆವರಿಸುತ್ತಿರುವ ಸಣ್ಣ ಕತ್ತಲೆಯನ್ನು ಹೊಡೆದೋಡಿಸುವಂತೆ ದೇವಸ್ಥಾನದ ಮುಂಭಾಗದ ಆವರಣದಲ್ಲಿ ಸಾಲಾಗಿ ಜೋಡಿಸಿಟ್ಟಿದ್ದ ಮಣ್ಣಿನ ಹಣತೆಗಳಲ್ಲಿ ಎಣ್ಣೆ ಯಿಂದ ನೆನಸಿದ ಬತ್ತಿಗಳನ್ನು ದೇವಸ್ಥಾನದ ಕ್ರಿಯಾಮೂರ್ತಿ ಶಂಕರ ಸ್ವಾಮಿಗಳು , ಪ್ರಧಾನ ಧರ್ಮಕರ್ತ ಸಿ.ಹೆಚ.ಎಂ.ಗಂಗಾಧರಯ್ಯ
ಧಾರ್ಮಿಕ ಇಲಾಖೆಯ ಸಹಾಯಕ ಆಯುಕ್ತ ಪ್ರಕಾಶ್ ರಾವ್, ಧಾರ್ಮಿಕ ಇಲಾಖೆಯ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಗಂಗಪ್ಪ, ಸೇರಿದಂತೆ ಆನೇಕರು ದೀಪ ಬೆಳಗಿಸುವ ಮೂಲಕ ಕಾರ್ತಿಕೋತ್ಸವಕ್ಕೆ ಚಾಲನೆ ನೀಡಿದರು. ವಿದ್ಯುತ ದೀಪಗಳಿಂದ ಅಲಂಕಾರ ಗೊಂಡಿದ್ದ ದೇವಸ್ಥಾನದ ಮುಂಭಾಗದಲ್ಲಿ ಭಕ್ತರ ಸಮ್ಮುಖದಲ್ಲಿ ನೂರಾರು ದೀಪಗಳು ಬೆಳಗಿದವು.