ಗುರು ಕರುಣೆಯಿಂದ ಜೀವನ ಪಾವನ

ಆಳಂದ:ಎ.22: ಜೀವನದಲ್ಲಿ ಗುರುವಿನ ಕರುಣೆಯೊಂದಿದ್ದರೆ ಎಂಥಹ ಕಷ್ಟಗಳನ್ನಾದರೂ ಎದುರಿಸಬಹುದು ಎಂದು ಮಾಜಿ ಸಚಿವ ರೇವೂನಾಯಕ ಬೆಳಮಗಿ ಹೇಳಿದರು.
ಅವರು ತಾಲೂಕಿನ ನರೋಣಾ ಮಹಾಂತೇಶ್ವರ ಮಠದಲ್ಲಿ ಹಮ್ಮಿಕೊಂಡಿದ್ದ ಡಾ.ಗುರುಮಹಾಂತ ಸ್ವಾಮಿಗಳ ಗುರುವಂದನಾ ಕಾರ್ಯಕ್ರಮದಲ್ಲಿ ಮುಖ್ಯಅಥಿತಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು. ಧರ್ಮದ ಮಾರ್ಗದಲ್ಲಿ ನಿತ್ಯ ಶುದ್ದ ಕಾಯಕ ಮಾಡುತ್ತ ದೇಶದ ಸಂಸ್ಕøತಿಯ ಪ್ರತೀಕವಾದ ದೇವರು, ಹಬ್ಬಗಳು, ಉತ್ಸವಗಳು, ಜನಪದ ಆಚರಣೆಗಳನ್ನು ನಮ್ಮ ಮಕ್ಕಳಲ್ಲಿ ಬೆಳೆಸೋಣ ಆಧುನಿಕತೆಯ ಭರಾಟೆಯಲ್ಲಿ ಎಲ್ಲವನ್ನು ಮರೆಯುತ್ತಿದ್ದೇವೆ ಗುರು ನಮ್ಮ ಜೀವನಕ್ಕೆ ಮಾರ್ಗದರ್ಶಕರಾಗಿ ತಮಗಾಗಿರುವ ಕಷ್ಟಗಳನ್ನು ಸಹಿಸಿಕೊಳ್ಳುತ್ತಾ ಎಲ್ಲರೂ ತಮ್ಮ ಮಕ್ಕಳೆಂಬ ಭಾವದಿಂದ ಆಶಿರ್ವದಿಸುವಂತಹ ಗುರುವಿಗೆ ಇಂದು ತುಲಾಭಾರದಂತಹ ಸೇವೆಯನ್ನು ಮಾಡುವ ಮೂಲಕ ಅವರಿಗೆ ಗೌರವ ಸಲ್ಲಿಸುತ್ತಿರುವದು ತುಂಬ ಸಂತಸ ತಂದಿದೆ ಎಂದರು. ಕಾರ್ಯಕ್ರಮದಲ್ಲಿ ಅಕ್ಕಲಕೋಟದ ಬಸವಲಿಂಗ ಸ್ವಾಮೀಜಿ ಸಾನಿಧ್ಯವಹಿಸಿ ಮಾತನಾಡಿ ಗುರುಗಳ ಭಕ್ತರ ಮನ ಒಂದಿದ್ದರೆ ಇಂಥ ಕಾರ್ಯಕ್ರಮಗಳ ನಡೆಯಲು ಸಾದ್ಯ ಗುರುಗಳಿಗೆ ಭಕ್ತರ ಏಳ್ಗೆಯೇ ಮುಖ್ಯವಾಗಿರುತ್ತದೆ ಅವರಿಗಾಗಿಯೇ ಜೀವನವನ್ನು ಸವೆಸುತ್ತಾರೆ ಅವರಿಗೆ ಭಕ್ತರೆ ನಿಜವಾದ ಆಸ್ತಿ ಎಂದರು. ಇದೇ ಸಂದರ್ಭದಲ್ಲಿ ಮಠದ ಪೀಠಾಧಿಪತಿಗಳಾದ ಡಾ.ಗುರುಮಹಾಂತಸ್ವಾಮಿಗಳಿಗೆ 21 ಜನ ಭಕ್ತರಿಂದ ತುಲಾಭಾರ ಸೇವೆ ನಡೆದವು ಮುಖಂಡರಾದ ಬಾಬು ವಾಲಿ, ಪ್ರಭುಲಿಂಗ ಹೀರಾ, ಸೂರ್ಯಕಾಂತ ಗುತ್ತೇದಾರ, ವೇ.ಬಂಡಯ್ಯ ಮಠಪತಿ, ಸಿದ್ದಲಿಂಗಯ್ಯ ಶಾಸ್ತ್ರಿ ಗಣಾಚಾರಿ, ಬಸವರಾಜ ಲಾಡವಂತಿ, ಶಿವಾನಂದ ಬೇಲೂರ, ಪುಣ್ಯ ಸ್ಮರಣೋತ್ಸವ ಸಮೀತಿ ಅಧ್ಯಕ್ಷ ಶಿವಾನಂದ ವಾಲಿ, ಶಿವಪುತ್ರ ಸಾವಳಗಿ, ಸುಭಾಷ ಹರಸೂರ, ಚನ್ನಪ್ಪ ಸಾವಳಗಿ, ಸಿದ್ದಪ್ಪ ಬೇಲೂರ, ಪತ್ರಕರ್ತ ಗುರು ಹಿರೇಮಠ, ರೇವಣಯ್ಯ ಬಾಳಿ, ಶ್ರೀಶೈಲ ಹಿರೇಮಠ ಮಹಾರುದ್ರ ಉಪ್ಪಿನ, ನೀಲಕಂಠ ಬುಕ್ಕಾ, ಪ್ರಭು ಕಣಮಸ್ ಇದ್ದರು. ಗುರುರಾಜ ಮಹಾಗಾಂವ ನಿರೂಪಿಸಿ ವಂದಿಸಿದರು. ಗವಾಯಿಗಳಾದ ಮಾರುತಿ ಕಾಸಾರ, ಶರಣು ಹಿತ್ತಲಶಿರೂರ, ಅಶೋಕ ಆಳಂದ, ರವಿ ಸ್ವಾಮಿ ಗುಟೂರ ಸಂಗೀತ ನಡೆಸಿಕೊಟ್ಟರು.