ಗುರು ಇಲ್ಲದೇ ಗುರಿ ಇಲ್ಲ : ರವಿರಾಜ್ ಎಸ್

ಹುಬ್ಬಳ್ಳಿ,ಜು13 : ನಗರದ ಕುಸುಗಲ್ ರಸ್ತೆಯಲ್ಲಿರುವ ಡಾ.ಆರ್.ಬಿ. ಪಾಟೀಲ್ ಮಹೇಶ್-ಆಕ್ಸ್ ಪರ್ಡ್ ಪಿಯು ಕಾಲೇಜು ನಲ್ಲಿ ಗುರು ಪೂರ್ಣಿಮಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಈ ವೇಳೆ ಮಾತನಾಡಿ ಕಾಲೇಜಿನ ಪ್ರಾಶುಂಪಾಲರಾದ ರವಿರಾಜ್ ಎಸ್. ಮಾತನಾಡಿ, ವಿದ್ಯಾರ್ಥಿಗಳು ಗುರಿ ಸಾಧಿಸಬೇಕಾದರೇ ಗುರುಗಳ ಮಾರ್ಗದರ್ಶನ ಅಗತ್ಯವಿದೆ. ಗುರು ಇಲ್ಲದೇ ಗುರಿ ಇಲ್ಲ ಎಂದರು.
ಇದೇ ವೇಳೆ ಅವರು ಕಾಲೇಜಿನ ಅಧ್ಯಾಪಕರಿಗೆ ಕೃತಜ್ಞತೆ ಸಲ್ಲಿಸಿ ಎಲ್ಲಾ ಶಿಕ್ಷಕ ವೃಂದಕ್ಕೆ ಯಶಸ್ಸು ಸಿಗಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಉಪನ್ಯಾಸಕರಾದ ಮುತ್ತಪ್ಪ, ವಿರೇಶ್, ಅನಿಲ್ ಕದಂ, ಮಮತಾ ಕೆ, ಸೌಮ್ಯ ಶಾಂತಗಿರಿ, ಒಲಿವಿಯಾ ಫರ್ನಾಂಡೀಸ್, ರಾಜಣ್ಣ ಗುಡಿಮನಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.