ಗುರುಸ್ವಾಮಿಗಳ ಆರೋಗ್ಯದಲ್ಲಿ ಸ್ಥಿತಿ ತೀರಾ ಬಿಗಡಾಯಿಸಿದೆ

ಹನೂರು:ಮೇ.21: ತಾಲ್ಲೂಕಿನ ಮಲೆಮಹದೇಶ್ವರ ಬೆಟ್ಟ ಸಾಲೂರು ಬೃಹನ್ಮಠದ ಹಿರಿಯ ಶ್ರೀಗಳಾದ ಗುರುಸ್ವಾಮಿಗಳ ಆರೋಗ್ಯ ಸ್ಥಿತಿ ತೀರಾ ಬಿಗಡಾಯಿಸಿದೆ. ಸದ್ಯ ಅವರು ಮೈಸೂರಿನ ರಿಂಗ್ ರಸ್ತೆ ಆಲನಹಳ್ಳಿಯ ಸಾಲೂರು ಮಠದಲ್ಲಿದ್ದಾರೆ ಎಂದು ಮ.ಮ.ಬೆಟ್ಟ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ತಿಳಿಸಿದ್ದಾರೆ.
ಕಳೆದ ಎರಡು ವಾರದ ಹಿಂದೆ ಕೊರೊನಾ ಸೋಂಕು ಧೃಢಪಟ್ಟಿದ್ದು ಚಿಕಿತ್ಸೆ ಪಡೆಯುತ್ತಿದ್ದರು.ಆಕ್ಸಿಜನ್ ಲೆವಲ್ 50-60ರ ಆಸುಪಾಸಿನಲ್ಲಿದ್ದು, ಹೊಸ ಆಕ್ಸಿಜನ್ ಕಾನ್ಸೆಂಟ್ರೇಟರ್ ಖುದ್ದು ತರಿಸಿ ಹಾಕಿಸಲಾಯಿತು. ಈಗ ಸ್ಪಲ್ಪ ಸುಧಾರಿಸಿದ್ದರೂ ಪರಿಸ್ಥಿತಿ ಉತ್ತಮವಾಗಿಲ್ಲ ಎಂದಿರುವ ಕಾರ್ಯದರ್ಶಿಗಳು ಶ್ರೀಗಳಿಗೆ ಹೃದಯ ಸಂಬಂಧಿ ಖಾಯಿಲೆ, ಕಿಡ್ನಿ ಸಮಸ್ಯೆ, ಮತ್ತು ವಿಪರೀತಡಯಾ ಬಿಟಿಸ್ ಇರುವುದರಿಂದ ಸೋಂಕು ತಹಬದಿಗೆ ಬರುತ್ತಿಲ್ಲ.
ಆಸ್ಪತ್ರೆಯಿಂದ ಮೈಸೂರಿನ ಶಾಖಾ ಮಠಕ್ಕೆ ಬಂದಿದ್ದಾರೆ. ಊಟ ತಿಂಡಿ ಬಹುಶಃ ಬಿಟ್ಟಿದ್ದಾರೆ. ಶ್ರೀಗಳಿಗೆ ಕೊವೀಡ್ ಇರುವುದರಿಂದ ಭಕ್ತಾಧಿಗಳ ಬೇಟಿಗೆ ಅವಕಾಶವಿಲ್ಲ. ಹಲವಾರು ಸ್ವಾಮಿಜಿಗಳು ಅವರಆರೈಕೆ ಮಾಡುತ್ತಿರುವರು. ಅವರ ಶೀಘ್ರ ಗುಣಮುಖರಾಗಲೆಂದು ಮಲೆಮಹದೇಶ್ವರರಲ್ಲಿ ಪ್ರಾರ್ಥಿಸೋಣ ಎಂದು ತಿಳಿಸಿದ್ದಾರೆ.