ಗುರುಸಿದ್ದಾಪುರದಲ್ಲಿ ಪ್ರೀತಿ ಆರೈಕೆ ಟ್ರಸ್ಟ್ ನಿಂದ ಆರೋಗ್ಯ ಶಿಬಿರ

ಸಂಜೆವಾಣಿ ವಾರ್ತೆ

ಜಗಳೂರು.ಮೇ.೨೪; ತಾಲೂಕಿನ  ಗುರುಸಿದ್ದಾಪುರ ಗ್ರಾಮದಲ್ಲಿ ಪ್ರೀತಿ ಆರೈಕೆ  ಟ್ರಸ್ಟ್ ಹಾಗು ಆರೈಕೆ ಆಸ್ಪತ್ರೆಯ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಯಿತುಪ್ರೀತಿ ಆರೈಕೆ ಟ್ರಸ್ಟ್ ನ ಅಧ್ಯಕ್ಷರು ಜಗಳೂರು ಮಾಜಿ ಶಾಸಕರು ಆದ  ಗುರುಸಿದ್ದನಗೌಡ್ರು ಹಾಗೂ ಶಾಸಕರಾದ ದೇವೇಂದ್ರಪ್ಪ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು ಶಿಬಿರವನ್ನು ಉದ್ದೇಶಿಸಿ  ಮಾತನಾಡಿದ ಶಾಸಕರು  ಗುರುಸಿದ್ದನಗೌಡ ಅವರ ಸಾಧನೆಗಳು ಬಗ್ಗೆ ನೆನೆದರು ಹಾಗೂ ತಮಗೆ ಜಗಳೂರಿನಲ್ಲಿ ಮಾಡಿರುವ ಸಹಾಯ ಹಾಗೂ ರಾಜಕೀಯವಾಗಿ ಬೆಳೆಯಲು ಮಾಡಿರುವ ಆಶೀರ್ವಾದಗಳನ್ನು ಕೂಡ ನೆನೆದರು ಹಾಗೂ ಡಾ. ಟಿ ಜಿ ರವಿಕುಮಾರ್ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಮನೆಯ ಬಾಗಿಲಿಗೆ ವೈದ್ಯರನ್ನು ಕರೆತಂದು ರೋಗಿಗಳನ್ನು ತಪಾಸಣೆ ಮಾಡುವ ಆರೈಕೆ ಆಸ್ಪತ್ರೆಯ ಉದ್ದೇಶಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು ಡಾ. ಟಿ.ಜಿ ರವಿಕುಮಾರ್  ಮಾತನಾಡಿ ಆಧುನಿಕ ರೋಗಗಳಾದ  ರಕ್ತದೊತ್ತಡ, ಹೃದಯ ರೋಗ ಮತ್ತು ಸಕ್ಕರೆ ಕಾಯಿಲೆಗಳು ಇಂದು ಗ್ರಾಮೀಣ ಭಾಗದಲ್ಲೂ ಹೆಚ್ಚುತ್ತಿವೆ ಆದ್ದರಿಂದ ಆರೋಗ್ಯದ ಬಗ್ಗೆ ಅರಿವು ಮೂಡಿಸುವ ಅವಶ್ಯಕತೆ ಇದೆ, ಇದರಿಂದ ಆರೋಗ್ಯವಂತ ಸಮಾಜ ನಿರ್ಮಾಣ ಸಾಧ್ಯ ಎಂದು ತಿಳಿಸಿದರು