ಗುರುಸಣಿಗಿ:ಶ್ರೀ ಸಿದ್ಧಲಿಂಗೇಶ್ವರ ದೇವಸ್ಥಾನದಲ್ಲಿ ಭಕ್ತಾಧಿಗಳಿಂದ ನಿತ್ಯಾ ದೀಪೋತ್ಸವ

ಯಾದಗಿರಿ:ನ.30:ಜಿಲ್ಲೆಯ ವಡಿಗೇರಾ ತಾಲೂಕಿನ ಗುರುಸಣಿಗಿ ಶ್ರೀ ಸಿದ್ಧಲಿಂಗೇಶ್ವರ ದೇವಾಸ್ಥಾನದಲ್ಲಿ ಕಾರ್ತಿಕ ಮಾಸದ ಅಂಗವಾಗಿ ಭಕ್ತಾಧಿಗಳು ದೀಪ ಬೆಳಗಿ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ.
ಕುಟಂಬ ಸಮೇತ ಮಕ್ಕಳು, ಮಹಿಳೆಯರು ದೇವಸ್ಥಾನಕ್ಕೆ ಭೇಟಿ ಪುನಿತರಾಗುತ್ತಿದ್ದಾರೆ. ಕಾರ್ತಿಕ ಮಾಸವು ಶ್ರೇಷ್ಠವಾಗಿರುವುದರಿಂದ ಈ ಸಮಯದಲ್ಲಿ ಮಾಡಿದ ಪುಣ್ಯ ಕಾರ್ಯಗಳು ಹೆಚ್ಚಿನ ಫಲಗಳನ್ನು ನೀಡುತ್ತವೆ. ದೀಪೋತ್ಸವ ದೇವರನ್ನು ಆರಾಧಿಸುವ ಮಾರ್ಗವಾಗಿ ಕಂಡು ಬಂದರೂ ನಮ್ಮ ಮನಸ್ಸು ಲೌಕಿಕ ಚಿಂತನೆಗಳಿಂದ ದೂರವಿರಿಸಿ ಮನಸ್ಸಿಗೆ ಮದ ನೀಡಿ ಶಾಂತತೆಗೆ ಕಾರಣವಾಗುತ್ತದೆ ಎಂಬುವುದು ಭಕ್ತರದ್ದಾಗಿದೆ.