ಗುರುಶಿಷ್ಯ ಪರಂಪರೆ ತರಬೇತಿ ಉದ್ಘಾಟನೆ

ಬೀದರ:ಜ.5: ಕನ್ನಡ ಮತ್ತು ಸಂಸ್ಕøತಿ ಇಲಾಖೆ ಬೀದರ ಜಿಲ್ಲೆಯ ವತಿಯಿಂದ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆಯಡಿ ಗುರುಶಿಷ್ಯಪರಂಪರೆ ತರಬೇತಿ ಕಾರ್ಯಕ್ರಮ ಉದ್ಘಾಟನೆಯನ್ನು ನಾದಬ್ರಹ್ಮ ಸಂಗೀತ ಶಿಕ್ಷಣ ಸಂಸ್ಥೆ ಗುಂಪಾದಲ್ಲಿ ನೇರವೇರಿತು. ಗುರುಶಿಷ್ಯ ಪರಂಪರೆ ತರಬೇತಿಯು ದಿನಾಂಕ:11-12-2020ರಿಂದ ಪ್ರಾರಂಭವಾಗಿರುತ್ತದೆ. ಗುರುಶಿಷ್ಯ ಪರಂಪರೆಯ ಕುರಿತು ಸಿದ್ರಾಮ ಶಿಂಧೆ ಸಹಾಯಕ ನಿರ್ದೇಶಕರು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಬೀದರ ಅವರು ಮಾತನಾಡುತ್ತ ತರಬೇತಿಯು 3 ತಿಂಗಳ ಅವಧಿಯನ್ನು ಹೊಂದಿದ್ದು, ವಿಶೇಷ ಘಟಕ ಯೋಜನೆಯಡಿ 15 ವಿದ್ಯಾರ್ಥಿಗಳು ಹಾಗೂ ಗಿರಿಜನ ಉಪಯೋಜನೆಯಡಿ 05 ವಿದ್ಯಾರ್ಥಿಗಳು ತರಬೇತಿಯ ಲಾಭವನ್ನು ಪಡೆಯಲಿದ್ದಾರೆ. ಯೋಜನೆಯ ಮೂಲಕ ಯುವ ಕಲಾವಿದರಿಗೆ ಪ್ರೋತ್ಸಾಹಿಸುವುದು ಆಗಿದೆ ಎಂದರು.

ಕಾರ್ಯಕ್ರಮದ ಉದ್ಘಾಟಕರು ಆಗಿ ಆಗಮಿಸಿದ ಬೀದರ ಜಿಲ್ಲೆಯ ಹಿರಿಯ ಜಾನಪದ ಕಲಾವಿದರಾದ ಶಂಭುಲಿಂಗ ವಾಲ್ದೊಡ್ಡಿಯವರು ಮಾತನಾಡಿ ಸಂಗೀತದಿಂದ ನಾವು ಉತ್ತಮ ರೀತಿಯಲ್ಲಿ ವ್ಯಕ್ತಿತ್ವ ವಿಕಸನವನ್ನು ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಸಂಗೀತದಿಂದ ಜೀವನದಲ್ಲಿ ನಾವು ಶಾಂತತೆಯನ್ನು ಪಡೆಯಲು ಕೂಡ ಸಂಗೀತದಿಂದ ಸಾಧ್ಯವೆಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಹಿರಿಯ ಸಾಹಿತಿಗಳು ಆದ ಎಂ.ಜಿ. ಗಂಗನಪಳ್ಳಿಯವರು ಮಾತನಾಡಿ ಗುರುಗಳು ಮತ್ತು ಶಿಷ್ಯಂದಿರು ಇಬ್ಬರ ಸಂಬಂಧ ಆದಿ ಅನಾದಿ ಕಾಲದಿಂದಲೂ ಅನೋನ್ಯವಾಗಿರುವಂತಹದ್ದು, ಗುರುಗಳು ಮಕ್ಕಳಿಗೆ ಯಾವ ರೀತಿಯಲ್ಲಿ ಶಿಕ್ಷಣವನ್ನು ಕೊಡುತ್ತಾರೋ ಅದೇ ರೀತಿಯಲ್ಲಿ ಮಕ್ಕಳು ತಮ್ಮ ಜೀವನದಲ್ಲಿ ಸಂಗೀತವನ್ನು ಅಳವಡಿಸಿಕೊಳ್ಳುತ್ತಾರೆ. ನಿಸರ್ಗದಲ್ಲಿಯು ಕೂಡ ನಾವು ಪ್ರತಿಯೊಂದು ವಸ್ತುವಿನಲ್ಲಿಯು ಕೂಡ ಸಂಗೀತದ ನಾದಗಳನ್ನು ಆಲಿಸಬಹುದು ಎಂದು ತಿಳಿಸಿದರು.

ವಿಶೇಷ ಘಟಕ ಯೋಜನೆಯ ಗುರುಗಳಾದ ಶ್ರೀ ಮಲ್ಲಿಕಾರ್ಜುನ ಸ್ವಾಮಿ, ಗಿರಿಜನ ಉಪಯೋಜನೆಯ ಗುರುಗಳಾದಶ್ರೀ ಶಾಂತಕುಮಾರ ಸ್ವಾಮಿ ಬಾವಗಿಯವರು ಗಾಯನ ಪ್ರದರ್ಶನ ನೀಡಿದರು ಕಾರ್ಯಕ್ರಮದಲ್ಲಿ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಿಬ್ಬಂದಿಯಾದ ಗುರುಶಾಂತ ಮಾವುರ ಸುಧಾಕರ ಎಲ್ಲಾನೋರ ನಿರೂಪಣೆ ಮಾಡಿದರು.