
ತಾಳಿಕೋಟೆ:ಮೇ.1: ಗುರುವಿಲ್ಲದೇ ಭಕ್ತಿಯಿಂದ ಇರಲು ಸಾಧ್ಯವೇ ಇಲ್ಲ. ಭಕ್ತಿಯಿಂದ ಇರಬಹುದು ಆದರೆ ವ್ಯರ್ಥ ಪ್ರಯತ್ನವಾಗುತ್ತದೆ. ಗುರುವಿನಿಂದ ದಿಕ್ಷೆ ಪಡೆದರೇ ಜಪಮಾಲೆ ಹಿಡಿದರೇ, ಜ್ಞಾನಮಾಡಿದರೇ ಅದು ಬರಿ ವ್ಯರ್ಥ. ನಿಮಗೆ ಸಂದೇಹವಿದ್ದರೇ ನಿಮ್ಮ ವೇದಗಳಲ್ಲಿ ಮತ್ತು ಪುರಾಣಗಳಲ್ಲಿ ಪ್ರಮಾಣ ನೋಡಿ ಎಂದು ಶ್ರೀ ಖಾಸ್ಗತೇಶ್ವರ ಮಠದ ಪಟ್ಟಾಧೀಶರಾದ ಶ್ರೀ ಸಿದ್ದಲಿಂಗ ದೇವರು ನುಡಿದರು.
ರವಿವಾರದಂದು ಶ್ರೀ ಎ.ಎಸ್.ವಠಾರ ಸಾಂಸ್ಕøತಿಕ ಕಲಾಸಂಘ ಇವರ ವತಿಯಿಂದ ಶ್ರೀ ಖಾಸ್ಗತೇಶ್ವರ ಮಠದಲ್ಲಿ ಏರ್ಪಡಿಸಲಾದ ಶ್ರೀ ಎ.ಎಸ್.ವಠಾರ ಗುರುಗಳ 5ನೇ ಪುಣ್ಯ ಸ್ಮರಣೋತ್ಸವ ಅಂಗವಾಗಿ ಜರುಗಿದ ಸಂಗೀತ ಕಾರ್ಯಕ್ರಮವನ್ನು ದೀಪ ಬೆಳಗಿಸುವುದರೊಂದಿಗೆ ಉದ್ಘಾಟಿಸಿ ಮಾತನಾಡುತ್ತಿದ್ದ ಅವರು ಸಂಗೀತ ಹಾಗೂ ಸಂಗೀತ ಕ್ಷೇತ್ರಕ್ಕೆ ಬಹಳೇ ತಾಕತ್ತಿದೆ ಸಂಗೀತದಿಂದ ಆಸ್ಥಾನ ಬೆಳಗಲಿದೆ ಎಂದರು. ಸಂಗೀತ ಕ್ಷೆತ್ರದಲ್ಲಿ ಶ್ರೀ ಖಾಸ್ಗತೇಶ್ವರ ಮಠದಲ್ಲಿ ಸಂಗೀತ ಕಲಿತು ಸಂಗೀತ ಶಿಕ್ಷಕನಾಗಿ ಶ್ರೀ ಮಠದ ಹೆಸರನ್ನು ಬೆಳಗಿಸುವ ಕಾರ್ಯ ಮಾಡಿದ ದಿ.ಎ.ಎಸ್.ವಠಾರ ಅವರ ಸೇವಾಕಾರ್ಯ ಮೆಚ್ಚುಗೆಗೆ ಪಾತ್ರವಾಗಿದೆ ಎಂದರು. ಸಂಗೀತ ಕ್ಷೇತ್ರದಲ್ಲಿ ಮುನ್ನುಗ್ಗಿದ ವಠಾರವರು ಅನೇಕ ಮಕ್ಕಳಿಗೆ ಸಂಗೀತದ ವಿದ್ಯಾಬುದ್ಧಿ ನೀಡಿ ದಾರಿ ದೀ¥ವಾಗಿದ್ದಾರೆ. ಅವರ ಸೇವಾಕಾರ್ಯ ಗುಣಗಾನಮಯವಾಗಿದೆ ಎಂದರು. ಇಂತಹ ಮಹಾನ ಸಾಧಕರ ಪುಣ್ಯಸ್ಮರಣೋತ್ಸವವನ್ನು ಏರ್ಪಡಿಸಿದ ಈ ಕಲಾಸಂಘದ ಅಧ್ಯಕ್ಷ ದೀಪಕ ಸಿಂಗ ಹಜೇರಿ ಹಾಗೂ ಆಡಳಿತ ಮಂಡಳಿಯ ಸೇವಾಕಾರ್ಯ ಮೆಚ್ಚುವಂತಹದ್ದಾಗಿದೆ ಎಂದ ಅವರು ಸಂಗೀತ ಕಲಿತ ಎಲ್ಲಾ ವಿದ್ಯಾರ್ಥೀಗಳು ತಮ್ಮ ಮಾತಾಪಿತರ ಹೆಸರನ್ನು ಹೇಳದೆ ಸಂಗೀತ ಕಲಿಸಿದವರ ಹಾಗೂ ಸಂಗೀತಶಾಲೆಯಾದ ಶ್ರೀ ಖಾಸ್ಗತ ಮಠದ ಹೆಸರು ಹೇಳುತ್ತಾ ಸಾಗಿರುತ್ತಾರಲ್ಲ ಇದಕ್ಕಿಂತ ಹೆಚ್ಚಿಗೆ ಏನುಬೇಕೆಂದು ಶ್ರೀಗಳು ಹರ್ಷವ್ಯಕ್ತ ಪಡಿಸಿದರು.
ಇನ್ನೋರ್ವ ಮುಖ್ಯಥಿತಿಗಳಾಗಿ ಆಗಮಿಸಿದ ಚಲನಚಿತ್ರ ನಟ ರಾಜು ತಾಳೀಕೊಟಿಯವರು ಮಾತನಾಡಿ ಜಾತಿ, ಮತ, ಪಂಥ ಎಣಿಸದಂತ ಮಠ ತಾಳಿಕೋಟೆಯ ಖಾಸ್ಗತ ಮಠವಾಗಿದೆ. ಇಂದು ಶ್ರೀ ಮಠದಲ್ಲಿ ಕಲಾಸಂಘದ ವತಿಯಿಂದ ನಮ್ಮ ಮಾವನವರಾಧ ದಿ.ಎ.ಎಸ್.ವಠಾರವರ ಸ್ಮರಣೆಯನ್ನು ಏರ್ಪಡಿಸಿರುವುದು ಸಂತಸದಾಯಕವಾಗಿದೆ ಈ ಕಾರ್ಯಕ್ಕೆ ಮುಂದಾದ ಸಂಸ್ಕøತಿಕ ಕಲಾಸಂಘದ ಅಧ್ಯಕ್ಷರಾದ ದೀಪಕಸಿಂಗ ಹಜೇರಿಅವರಿಗೆ ಕೃತಜ್ಞತೆ ಸಲ್ಲಿಸುತ್ತೆನೆಂದರು. ಇಂತಹ ಕಾರ್ಯಕ್ರಮಕ್ಕೆ ಕೈಲಾದ ಮಟ್ಟಿಗೆ ನಾನು ಸೇವೆ ಮಾಡುತ್ತೆನೆಂದು ಹೇಳಿದ ರಾಜು ಅವರು ಗುರು ಶಿಷ್ಯರ ಸಂಬಂದ ಹೆಗಿತ್ತು ಹೇಗಿರಬೇಕು ಎಂಬುದನ್ನು ಇಂದಿನ ಕಾರ್ಯಕ್ರಮ ನೋಡಿದರೇ ಎಲ್ಲರಿಗು ಅರ್ಥವಾಗುತ್ತದೆ ಎಂದರಲ್ಲದೇ ದೇಶವಿದೇಶಗಳಲ್ಲಿ ಸುತ್ತಾಡಿ ಬಂದವ ನಾನಾಗಿದ್ದರು ಶ್ರೀ ಖಾಸ್ಗತೇಶ್ವರರ ಆರ್ಶೀವಾದ ಫಲವೇ ಅದಕ್ಕೆ ಕಾರಣವಾಗಿದೆ ಎಂದು ಹೇಳಿದ ರಾಜು ಅವರು ಈ ಹಿಂದಿನಂತೆ ಎಲ್ಲರು ನನ್ನ ಮೇಲೆ ತೊರಿದ ಪ್ರೀತಿಗೆ ಅನಂತ ಕೃತಜ್ಞತೆಗಳನ್ನು ಸಲ್ಲಿಸುತ್ತೆನೆಂದರು.
ಇನ್ನೋರ್ವ ಅಥಿತಿ ಹಿರಿಯ ಪತ್ರಕರ್ತ ಜಿ.ಟಿ.ಘೋರ್ಪಡೆ ಅವರು ಮಾತನಾಡಿ ದಿ.ಅಮೀನಸಾಬ ವಠಾರವರೊಂದಿಗೆ ಒಡನಾಟ 1963ರಲ್ಲಿ ಪ್ರಾರಂಭವಾಗಿತ್ತು ಅಂದು ನಾನು 8ನೇ ತರಗತಿ ಓದುತ್ತಿದ್ದೆ ಆವಾಗ ನಮಗೆ ಸಂಗೀತ ಪಾಠವನ್ನು ಶಿಕ್ಷಕರಾದ ಇವರು ಹೇಳಿಕೊಡುತ್ತಿದ್ದರು ಬಡತನದ ಬೆಸೆಯಲ್ಲಿ ಬಂದಿದ್ದ ವಠಾರವರು ಅಂದು ಕೇವಲ ತಿಂಗಳಿಗೆ 60 ರೂಪಾಯಿ ವೇತನ ಪಡೆಯುತ್ತಿದ್ದರು. ಇವರಿಗೆ ನೋಡಲು ಕಣ್ಣುಗಳು ಇದ್ದಿದ್ದಿಲ್ಲ ಕುರುಡರಾದ ಇವರಿಗೆ ವಿದ್ಯಾರ್ಥಿಗಳೇ ಆಸರೆಯಾಗಿದ್ದರು ಬರಬರುತ್ತ ಅವರ ಧರ್ಮಪತ್ನಿ ಸಾಹಿರಾಬಾನು ಅವರ ಕೈಹಿಡಿದ ನಂತರ ಉತ್ತುಂಗಕ್ಕೆರಲಾರಂಭಿಸಿದರು. ಧರ್ಮಪತ್ನಿ ಯಾವುದೇ ಅರ್ಥೈಸಿಕೊಳ್ಳದೇ ಪತಿಸೇವೆ ಮುಂದಾಗಿ 2 ಮಕ್ಕಳನ್ನು ಹೆತ್ತ ಈ ತಾಯಿ ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡಿದ್ದರಿಂದ ಮಗ ಸೈಯ್ಯದಮುರತುಜಾ ಖಾದರಿ ಅವರು ಈಗ ಗುಲ್ಬುರ್ಗಾದ ಅರಣ್ಯ ಇಲಾಖೆಯಲ್ಲಿ ಅಧಿಕಾರಿಯಾಗಿ ಸೇವೆಸಲ್ಲಿಸುತ್ತಿದ್ದಾರೆ ಇವರ ಇನ್ನೋರ್ವ ಸಹೋದರಿಯು ಶಿಕ್ಷಕಿಯಾಗಿ ತಾಳಿಕೋಟೆ ಸಮೀಪದ ಸಾಲವಾಡಗಿ ಗ್ರಾಮದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇಂತಹ ಆದರ್ಶ ಕುಟುಂಬವನ್ನು ನಿರ್ಮಾಣಮಾಡಿದ ದಿ.ಎ.ಎಸ್.ವಠಾರವರ ಧರ್ಮಪತ್ನಿ ಸೆಹರಾಬಾನು ಅವರ ಸೇವಾಕಾರ್ಯ ಗುಣಗಾನವiಯವಾಗಿದೇ ಎಂದು ಶ್ರೀ ಎ.ಎಸ್. ವಠಾರ ಸಾಂಸ್ಕøತಿಕ ಕಲಾಸಂಘ ಏರ್ಪಡಿಸಿದ ಪುಣ್ಯಸ್ಮರಣೋತ್ಸವಕಾರ್ಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
ಇನ್ನೋರ್ವ ಸಂಗೀತ ಶಿಕ್ಷಕ ಮುರುಳಿದರ ಭಜಂತ್ರಿ ಹಾಗೂ ಕಲಾ ಸಂಘದ ಅಧ್ಯಕ್ಷ ದೀಪಕಸಿಂಗ ಹಜೇರಿ ಪ್ರಾಸ್ತಾವಿಕ ಮಾತನಾಡಿದರು.
ಮುಖ್ಯಗುರುಗಳಾದ ರಮೇಶ ಯರಕಿಹಾಳ ಅಧ್ಯಕ್ಷತೆಯನ್ನು ವಹಿಸಿದ್ದರು. ಗಣ್ಯರಾದ ಸಂಗಮೇಶ ಬಿರಾದಾರ, ಅರಣ್ಯಾಧಿಕಾರಿ ಸೈಯ್ಯದಮುರತುಜಾ ಖಾದ್ರಿ, ಎ.ಎಸ್.ವಠಾರವರ ಧರ್ಮಪತ್ನಿ ಸಾಯಿರಾಬಾನು, ಅಪ್ಪಾಸಾಬ ಹೊಸಮನಿ, ಖ್ಯಾತ ತಬಲಾ ವಾದಕರಾದ ಯಮನೇಶ ಯಾಳಗಿ, ಮಲ್ಲಿಕಾರ್ಜುನ ಹಿಪ್ಪರಗಿ ಮೊದಲಾದವರು ಉಪಸ್ಥಿತರಿದ್ದರು.
ಇದೇ ಸಮಯದಲ್ಲಿ ಶ್ರೀಗಳಿಗೆ ಹಾಗೂ ಅಥಿತಿಮಹೋದಯರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಕುಮಾರಿ ಶ್ವೇತಾ ಗುಂಡಪ್ಪ ಹಂದಿಗನೂರ ಹಾಗೂ ದೀಪಕಸಿಂಗ ಹಜೇರಿ, ದೇವಪ್ಪ ಗೋಪಾಳೇರ, ಪರಶುರಾಮ ಭಜಂತ್ರಿ, ಶ್ರೀನಿವಾಸ ಬಸವಂತಪೂರ, ಯಲ್ಲಪ್ಪ ಅಂಬಾಮಹೇಶ್ವರಿ, ಗೋವಿಂದಸಿಂಗ್ ಬಾಬುಸಿಂಗ ಹಜೇರಿ, ಮಲ್ಲಿಕಾರ್ಜುನ ನಾವಿ, ರಾಜು ಭಜಂತ್ರಿ, ವಿರೇಶ ಬಳಗಾರ, ಮಲ್ಲಪ್ಪಗೌಡ ಭಾವಿಮನಿ, ರಾಮಣ್ಣ ಭಜಂತ್ರಿ, ಸಾಯಬಣ್ಣ ಭಜಂತ್ರಿ, ಭವಾನಿ ಕುಲಕರ್ಣಿ, ಕಾವೇರಿ ಹೂಗಾರ, ಲಕ್ಷ್ಮಣಸಿಂಗ್ ವಿಜಾಪೂರ(ಸಂಗೀತ ಶಿಕ್ಷಕ) ಹಣಮಂತಕುಮಾರ ಬಳಗಾನೂರ, ಗುಂಡಣ್ಣ ಹಂದಗನೂರ, ನಾಗರಾಜ ಹೂಗಾರ, ಬಸನಗೌಡ ಬಿರಾದಾರ, ಪ್ರಶಾಂತ ಮುದ್ದೇಬಿಹಾಳ ಗುಂಡಣ್ಣ ಹಂದಿಗನೂರ ಹಾಗೂ 6ವರ್ಷದ ಬಾಲಕಿ ಕುಮಾರಿ ಶೈಲಾ ಹೀರೆಮಠ ಸಂಗೀತ ಕಾರ್ಯಕ್ರಮದಲ್ಲಿ ಸಂಗೀತವನ್ನು ಹಾಡಿ ಜನಮನ ರಂಜಿಸಿದರು.