ಗುರುವಿನ ಸೇವೆ ಮಾಡಿ ಮುಕ್ತಿ ಹೊಂದಿ: ಡಾ. ಬಸವಲಿಂಗ ಅವಧೂತರು

ಬೀದರ್:ಡಿ 20: ಮನುಷ್ಯ ಸಂಸಾರದಲ್ಲಿ ಇದುಕೊಂಡು ಗುರುವಿನ ಸೇವೆ ಮಾಡಿ ಜೀವನ ಸ್ವಾರ್ಥಕಮಾಡಿಕೊಳಬೇಕೆಂದು ನೆರೆಯ ತೆಲಂಗಾಣದ ಜಹೀರಾಬಾದ್ ತಾಲ್ಲೂಕಿನ ಮಲ್ಲಯ್ಯಗಿರಿ ಆಶ್ರಮದ ಡಾ. ಬಸವಲಿಂಗ ಅವಧೂತರು ನುಡಿದರು. ಅವರು ಭಾಲ್ಕಿ ತಾಲೂಕಿನ ಬ್ಯಾಲಹಳ್ಳಿ (ಕೆ) ಗ್ರಾಮದಲ್ಲಿ ಶನಿವಾರ ಶ್ರೀ ಶಿವಾನಂದ ಕೈಲಾಸ ಆಶ್ರವ್ಮದಲ್ಲಿ ಶ್ರೀ ಗುರುಲಿಂಗ ಮಹಾಸ್ವಾಮಿಗಳ ಪ್ರಥಮ ಪುಣ್ಯರಾಧನೆ ಕಾರ್ಯಕ್ರಮದ ದಿವ್ಯ ಸಾನಿಧ್ಯವಹಿಸಿ ಮತನಾಡಿದರು.

ಯಾದಗಿರಿ ಜಿಲ್ಲೆಯ ಸೈದಾಪೂರಿನ ಪೂಜ್ಯ ಶ್ರೀ ಸೋಮೇಶ್ವನಾಂದ ಮಾತನಾಡಿ ಪರಮಾತ್ಮನೊಂದಿಗೆ ಪ್ರೇಮ ಬೇರಿಸಿ ಮುಕ್ತಿಹೊಂದಿ, ಸಿದ್ಧರೂಢರ ವಾಣಿ ದೇವವಾಣಿಯಾಗಿತ್ತು ಎಂದರು.

ಈ ಕಾರ್ಯಕ್ರದ ಅಧ್ಯಕ್ಷತೆಯನ್ನು ನಾಗಲಿಂಗ ಮಹಾಸ್ವಾಮಿಗಳುವಹಿಸಿ ಮಾತನಾಡುತ್ತಾ ಮನುಷ್ಯ ಸಂತರ ದರ್ಶನ ಪಡೆದು ಜೀವನ ಪಾವನ ಪಡೆಯಬೇಕು ಎಂದು ನುಡಿದರು

ಪೂಜ್ಯ ಶ್ರೀ ನಿರ್ಮಾಲಾನಂದ ಸ್ವಾಮಿ, ಗುಂಡಪ್ಪ ಶರಣರು ಗುರುಗಳಾದ ಗುರುಲಿಂಗ ಮಹಾಸ್ವಾಮಿಗಳ ಸಾಧನೆ ಕುರಿತು ಮಾತನಾಡಿದರು. ಕಾರ್ಯಕ್ರಮದ ನಿರ್ವಹಣೆ ರಮೇಶ ಶ್ರೀಮಂಡಳ ಮಾಡಿದರು. ನೂರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದರು.