ಗುರುವಿನ ಮಕ್ಕಳಾಗದವರಿಗೆ ಮೋಕ್ಷವಿಲ್ಲ- ಶಿವಾನಂದ ಶಿವಾಚಾರ್ಯರು


ಸಂಜೆವಾಣಿ ವಾರ್ತೆ
ಸಂಡೂರು: ಮಾ: 25: ಪುರಾಣದ ಸನ್ನಿವೇಶದಲ್ಲಿ ಮಕ್ಕಳಾಗದವರಿಗೆ ಮೋಕ್ಷವಿಲ್ಲ ಎನ್ನುವುದನ್ನು ತಪ್ಪಾಗಿ ಭಾವಿಸಿದ್ದೇವೆ, ಎಡೆಯೂರು ಸಿದ್ದಲಿಂಗೇಶ್ವರರು, ಸಿದ್ದರಾಮೇಶ್ವರರು, ಸಿದ್ದರಾಮೇಶ್ವರರು ಸಂಡೂರಿನ ಪ್ರಭುಮಹಾಸ್ವಾಮಿಗಳು ಇವರಿಗೆ ಮೋಕ್ಷವಿಲ್ಲವೇನು? ಇದು ತಪ್ಪು ಕಲ್ಪನೆ, ಗುರುವಿನ ಮಕ್ಕಳಾಗದವರಿಗೆ ಮೋಕ್ಷವಿಲ್ಲ ಎನ್ನುವುದು ವಾಡಿಕೆ ಎಂದು ಹಾವೇರಿ ಗದಗ, ಸಿಂದಗಿ ಮಠದ ಪೂಜ್ಯ ಷ.ಬ್ರ.ಶಿವಾನಂದ ಶಿವಾಚಾರ್ಯರು ತಿಳಿಸಿದರು.
ಅವರು ಸಂಡೂರು ತಾಲೂಕಿನ ಯಶವಂತನಗರದ ರ್ಶರೀ ಗುರು ಸಿದ್ದರಾಮೇಶ್ವರ ಸಂಸ್ಥಾನ ವಿರಕ್ತಮಠದಲ್ಲಿ ದ್ಯಾಮಪುರದ ಕವಿ ಕಲ್ಲಿನಾಥ ಶಾಸ್ತ್ರಿಗಳು ವಿರಚಿತ ಕಲಬುರ್ಗಿ ಶರಣ ಬಸವೇಶ್ವರ ಮಹಾಪುರಾಣದ ಸಂದರ್ಭದಲ್ಲಿ ಷಟಸ್ಥಳ ರ್ಧವಜಾರೋಹಣ ನೆರವೇಋಇಸಿ ಮಾತನಾಢಿದರು. ಯಶವಂತನಗರದ ಪರಮಪೂಜ್ಯ ಶ್ರೀ ಸಿದ್ದರಾಮ ಮಹಾಸ್ವಾಮಿಗಳು ಮಾತನಾಡಿ ಪುರಾಣಗಳಿಂದ ಶಾಂತಿ, ನೆಮ್ಮದಿ ಸಿಗಲು ಸಾಧ್ಯ ಧಾರ್ಮಿಕ ಕಾರ್ಯಕ್ರಮಗಳು ಭಾವೈಕ್ಯತೆಯ ಸಂಕೇತ, ಧಾರ್ಮಿಕ ಕಾರ್ಯಕ್ರಮಗಳಿಂದ ನಾವೆಲ್ಲರೂ ಒಂದೇ ಎನ್ನುವ ಮನೋಭಾವನೆಯು ಬರಲು ಸಾಧ್ಯ, ಮಹಾತ್ಮರ, ಶರಣರ ಪುರಾಣಗಳು ಇಂದಿಗೂ ಪ್ರಸ್ತುತ ಎಂದು ತಿಳಿಸಿದರು.
ಬಸವಲಿಂಗಯ್ಯ ಶಾಸ್ತ್ರಿಗಳು ಹಿರೇಮಠದಿದ್ದಿಗಿ ಸಮಾಜ ಸೇವೆಗಾಗಿಯೇ ತಮ್ಮ ಸೇವೆಯನ್ನು ಮುಡುಪಾಗಿಟ್ಟವರು ಹಾನಗಲ್ಲ ಕುಮಾರಸ್ವಾಮಿಗಳೂ, ದೀನದಲಿತರ ಮಕ್ಕಳಿಗೆ ತಮ್ಮ ಸೇವೆಯನ್ನು ಮುಡುಪಾಗಿಟ್ಟವರು ಪುಟ್ಟರಾಜ ಗವಾಯಿಗಳು ಇವರ ತ್ಯಾಗ ಮಯ ಜೀವನದ ಬದುಕು ಆದರ್ಶಮಯವಾಗಿದೆ. ಯಾವುದೇ ಪುರಾಣವಿರಲಿ ಪುರಾಣದ ಹಿಂದೆ ಒಬ್ಬ ಕವಿಗಿದ್ದಾರೆ. ಹಿಂದಿನ ಕವಿಗಳಿಗೂ ಇಂದಿನ ಕವಿಗಳಿಗೂ ಅಜಗಜಾಂತರ ವ್ಯತ್ಯಾಸವಿದೆ. ಹಿಂದಿನ ಕಾಲದ ಕವಿಗಳು ಗುರುವಿನ ನಾಮಸ್ಮರಣೆಯಿಂದ ಬರೆಯುವುದು ವಾಡಿಕೆ, ಗುರು ಎನ್ನುವ ಎರಡಕ್ಷರದಲ್ಲಿ ದೊಡ್ಡ ಶಕ್ತಿಯಿದೆ, ಈಗಿನ ಕವಿಗಳಿಗೆ ಬರೆಯಲು ಸ್ವಂತ ಶಕ್ತಿ ಇಲ್ಲ, ಮಾಯಾಮೋಹಿತ ಪ್ರಪಂಚದಿಂದ ನಾವು ಗೆದ್ದು ಬರಬೇಕಾಗಿದೆ. ನಮ್ಮ ಜೀವನ ಸಾರ್ಥಕವಾಗದರೆ ಮಾಥ್ರ ಬಾಳು ಬಂಗಾರವಾಗಲು ಸಾಧ್ಯ, ತಂದೆ ತಾಯಿಗಳಿಗೆ ಹೆಸರನ್ನು ತರುವ ಮಕ್ಕಳಾಗಬೇಕು ಹುಟ್ಟಿಗೆ ಕಳಂಕ ಬಂದರೆ ನಮ್ಮ ಜೀವನ ಸಾರ್ಥಕವಾಗಲು ಸಾಧ್ಯವಿಲ್ಲ ಅಕ್ಕಮಹಾದೇವಿಯಕ್ಕನ ವಚನಗಳೇ ಅದ್ಭುತ ಶಕ್ತಿ ನಮಗೆ ಸಂಸ್ಕಾರದ ಮಾತುಗಳು ಮುಖ್ಯ ಎಂದರು ತಿಳಿಸಿದರು.
ಅಕ್ಕನಬಳಗದ ಅಧ್ಯಕ್ಷೆ ಸುಮಂಗಲಮ್ಮ, ಉಪಾಧ್ಯಕ್ಷೆ ಅಂಕಮನಾಳ್ ಪಲ್ಲೇದ ನಾಗರತ್ನಮ್ಮ, ಗ್ರಾ.ಪಂ. ಅಧ್ಯಕ್ಷೆ ಸರೋಜಮ್ಮ, ಕೆ.ಎಸ್. ದಇವಾಕರ್, ಕರಡಿ ಯರ್ರಿಸ್ವಾಮಿ ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಸಇಂದಗಿ ಮಠದ ಉತ್ತರಾಧಿಕಾರಿಗಳಾದ ಪೂಜ್ಯ ಶ್ರೀ ಲಿಂಗದೇವರು ಪುರಾಣ ಪ್ರವಚನವನ್ನು ಉದ್ಘಾಟಿಸಿದರು. ಪ್ರೌಢಶಾಲೆಯ ಶಿಕ್ಷಕರ ತಿಪ್ಪೇಸ್ವಾಮಿ ಹಾಗೂ ಕುರುಗೋಡಪ್ಪ ಚಿತ್ರಿಕಿ ನಿರ್ವಹಿಸಿದರು, ಮಾರುತಿ ಶಾಂತಾಪುರ ಗವಾಯಿಗಳು ಸಂಗೀತ ಕಾರ್ಯಕ್ರಮ , ಶಿವಕುಮಾಋ ಭಂಟನಾನೂರು ಇವರಿಂದ ತಬಲಾ ಸಾಥ್ ನಡೆಯಿತು. ಚಿತ್ರಕಿ ಮೃತ್ಯೂಂಜಯಪ್ಪ, ಅಂಕಮನಾಳ್ ಪಲ್ಲೇದ ನಾಗಲಿಂಗಪ್ಪ ಮೇಕೆ ಈರಣ್ಣ ಹಡಪದ ಸಿದ್ದರಾಮಪ್ಪ ಚಿತ್ರಿಕಿ ಚಂದ್ರಮೌಳಿ ಈರಣ್ಣ ಶಿಕ್ಷಕ ಅಕ್ಕನಬಳಗದ ಸರ್ವ ಮಾತೆಯರು, ಅಂಕಮನಾಳ್ ಪಲ್ಲೇದ ಈರಣ್ಣ ಅಲ್ಲದೆ ಹಲವಾರು ಗಣ್ಯಮಾನ್ಯರು ಉಪಸ್ಥಿತರಿದ್ದರು