ಸಂಜೆವಾಣಿ ವಾರ್ತೆ
ಸಂಡೂರು ಜು:23 ಸಮಾಜಕ್ಕೆ ಏನಾದರು ಕೊಡುಗೆಯನ್ನು ಕೊಡಬೇಕೆನ್ನುವ ಬಯಕೆ ನಮ್ಮದಾಗಬೇಕಾಗಿದೆ ಆಸೆಯೆನ್ನುವ ದುರ್ಬಲ ಮಾಹೆಯಿಂದ ಹೊರಬರಬೇಕಾಗಿರುವುದು ಅತೀ ಅವಶ್ಯ ಅಂತಕರಣದ ಪೂಜೆ ಇಲ್ಲದವನಿಗೆ ಪರಮಾತ್ಮನ ಸಾಕ್ಷತ್ಕಾರವಾಗಲು ಸಾಧ್ಯವೇ ಇಲ್ಲ. ಗುರುವಿನ ಕೀರ್ತಿಗೆ ಹುಲ್ಲನ್ನು ತರದೇ ಹೂವನ್ನು ತಂದವಳು 12ನೇ ಶತಮಾನದ ಶಿವಶರಣೆ ಅಕ್ಕಮಹಾದೇವಿ ಎಂದು ಬನ್ನಿಹಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರೌಢಶಾಲಾ ಮುಖ್ಯೋಪಾಧ್ಯಯ ಪ್ರದೀಪ್ ಕುಮಾರ್ ರವರು ಮನದಾಳದ ಮಾತುಗಳನ್ನಾಡಿದರು.
ಅ.ಭ.ಶ.ಸ. ಮೈಸೂರು, ಬಳ್ಳಾರಿ ಜಿಲ್ಲಾ ಮತ್ತು ಸಂಡೂರು ತಾಲೂಕು ಶರಣ ಸಹಿತ್ಯಪರಿಷತ್ತುಗಳ ಸಂಯುಕ್ತಾಶ್ರಯದಲ್ಲಿ 50ನೇ ಮಹಾಮನೆ ಕಾರ್ಯಕ್ರಮ ಬಳ್ಳಾರಿ ಜಿಲ್ಲಾ ಕದಳಿ ಮಹಿಳಾ ವೇದಿಕೆ ಉದ್ಘಾಟನಾ ಸಮಾರಂಭ ಶೈಲಾವರಣದ ಶ್ರೀಶೈಲೇಶ್ವರ ವಿದ್ಯಾಕೇಂದ್ರದಲ್ಲಿ ಅದ್ಧೂರಿಯಾಗಿ ನೆರವೇರಿತು. ಸಮಾರಂಭದಲ್ಲಿ ವೈರಾಗ್ಯ ನಿಧಿ ಅಕ್ಕನ ಅನುಭಾವ ಕುರಿತು ಮಾತನಾಡಿದರು ಅವರು ಮುಂದುವರೆದು ಅಸಮಾನ್ಯ ಚೇತನಶಕ್ತಿ ಅಕ್ಕಮಹಾದೇವಿ ಶ್ರೇಷ್ಠ ವಚನಗಾರ್ತಿ ಕನ್ನಡ ಸಾಹಿತ್ಯದ ಮೊದಲನೆ ಕವಿಯಾತ್ರಿ. ಅಲ್ಲಮಪ್ರಭು, ಬಸವಣ್ಣ, ಚನ್ನಬಸವಣ್ಣನವರು ಅಕ್ಕಮಹಾದೇವಿಯನ್ನು ಕೊಂಡಾಡಿದರು ಸಹಜ ಸುಂದರಿ ಅಪ್ರತಿಮ ಬುದ್ಧಿವಂತೆ ಅಕ್ಕಮಹಾದೇವಿ ಸಾವ ತರುವ ಗಂಡನನ್ನು ದಿಕ್ಕರಿಸಿ ಶ್ರೀಶೈಲ ಚನ್ನಮಲ್ಲಿಕಾರ್ಜುನನ್ನು ವಿವಾಹವಾದಳು ಅಕ್ಕಮಹಾದೇವಿಯ ವಿವಾಹ ಅಲೈಕಿಕದಿಂದ ಕೂಡಿದ್ದು ಲೌಖಿಕವಾಗಿ ಚನ್ನಮಲ್ಲಿಕಾರ್ಜುನನ್ನೆ ಮದುವೆ ಯಾದಳು ಮಹಿಳಾ ಹೋರಾಟಕ್ಕೆ ನಾಂದಿಯಾಡಿ ಆಧ್ಯಾತ್ಮ ಚಿಂತನೆಯನ್ನು ಮೈಗೂಡಿಸಿಕೊಂಡವಳಲ್ಲಿ ಒಬ್ಬಳು ಅಕ್ಕಮಹಾದೇವಿಗೆ ವೈರಾಗ್ಯನಿಧಿ ಎನ್ನುವ ಬಿರುದನ್ನು ಅಲ್ಲಮಪ್ರಭುಗಳು ನೀಡಿದರು. ವಚನ ಸಾಹಿತ್ಯದ ಉಜ್ವಲ ನಕ್ಷತ್ರ ಅಕ್ಕಮಹಾದೇವಿ. 354 ವಚನಗಳು ಮಾತ್ರ ಲಭ್ಯವಾಗಿವೆ ಎಂದು ತಿಳಿಸಿದರು.
ಶ್ರೀಶೈಲೇಶ್ವರ ವಿದ್ಯಾಕೇಂದ್ರ ಆಡಳಿತಾಧಿಕಾರಿ ಕುಮಾರ ಎಸ್. ನಾನಾವಟೆಯವರು ಮಾತನಾಡಿ ಅನುಭವಕಿಂತ ಅನುಭಾವ ಬಹಳ ಮುಖ್ಯ ಕಲೆ ಎನ್ನುವುದು ಒಂದು ತಪಸ್ಸು ಇದ್ದಹಾಗೆ ಆಧುನಿಕ ಜೀವನದಲ್ಲಿ ಸುಖ ಎನ್ನುವುದು ಮಹಾಮರಿಚಿಕೆ ಇದ್ದಾಗೆ ಜಗತ್ತಿಗೆ ಜ್ಯೋತಿಯಾಗಿ ಬೆಳಗಿದವರು ಬಸವಣ್ಣನವರು ಮೌಲ್ಯದ ಸ್ವರೂಪಗಳನ್ನು ಇಂದು ನಾವು ಮರೆತಿದ್ದೇವೆ ಮೂಲ ತಳಹದಿಯಲ್ಲಿ ಆಧ್ಯಾತ್ಮ ಚಿಂತನೆ ಮುಖ್ಯ ಸಿದ್ದೇಶ್ವರ ಸ್ವಾಮಿಗಳು, ಶಿವಕುಮಾರ ಸ್ವಾಮಿಗಳು, ಪ್ರಭುಮಹಾ ಸ್ವಾಮಿಗಳು ಆನಂದ ಜೀವನ ನಡೆಸಲು ಆಧ್ಯಾತ್ಮ ಜೀವನ ಕಾರಣ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಕೆ.ಬಿ. ಸಿದ್ಧಲಿಂಗಪ್ಪನವರ ಶರಣಸಾಹಿತ್ಯವನ್ನು ಪುನಃರುತ್ತಾನ ಮಾಡಿದವರು ಸುತ್ತೂರು ಶ್ರೀಗಳು ಮಾನವನ ಮೌಲ್ಯ ಆದಪತನವಾಗಲು ಮಾರುಕಟ್ಟೆಯ ಬೆಲೆಯೇ ಕಾರಣ ಶರಣಸಾಹಿತ್ಯವನ್ನು ಇಂದು ನಾವು ಅಧ್ಯಾಯನ ಮಾಡಬೇಕಾಗಿದೆ ವ್ಯಕ್ತಿಯ ಬೆಳವಣಿಗೆಗೆ ತಾಯಿಗೆ ಕಾರಣ ತನ್ನ ಸಂಕೂಚಿತ ಮನೋಭಾನೆಯನ್ನು ಬಿಟ್ಟು ಕರ್ಪೂರದಂತೆ ಉರಿದು ಉಜ್ವಲ ಭವಿಷ್ಯಕ್ಕೆ ಕಾರಣರಾದವರು ತಾಯಿ ಕದಳಿ ವೇದಿಕೆ ಒಂದು ಕುಟುಂಬ ಇದ್ದಾಗೆ ಅಕ್ಕನ ಬಳಗ ಹಾಗೂ ಕದಳಿ ವೇದಿಕೆ ಎರಡು ಕಣ್ಣುಗಳಿದ್ದಂತೆ ಎಂದು ತಿಳಿಸಿದರು. ಸಮಾರಂಭವನ್ನು ಉದ್ಘಾಟಿಸಿದ ಹಗರಿಬೊಮ್ಮನಹಳ್ಳಿ ಕದಳಿ ವನ ವೇದಿಕೆಯ ಅಧ್ಯಕ್ಷರಾದ ಸವಿತಾ ಆನಂದ ಮಾತನಾಡಿ ತಾಯಿ ಮನಸ್ಸು ಮಾಡಿದರೆ ಸಮಾಜ ಜಾಗೃತಿಯಾಗಲು ಸಾಧ್ಯ ಸಂಚಾರಿ ರೂಪಕದಿಂದ ಕದಳಿ ವೇದಿಕೆ ಪ್ರಾರಂಭವಾಯಿತು. ಕದಳಿ ವೇದಿಕೆ ಶ.ಸ.ಪ. ಒಂದು ಅಂಗ ಎಂದು ತಿಳಿಸಿದರು. ಪ್ರಸ್ತಾವಿಕ ನುಡಿಗಳನ್ನಾಡಿದ ವಾಣಿಜ್ಯ ವಿಭಾಗದ ವೀರಭದ್ರಪ್ಪ ಮಾತನಾಡಿ ಚಿಂತಕರ ಬಗ್ಗೆ ಚಿಂತನೆ ಮಾಡುವುದು ಇಂದು ತಾಪತ್ರೆಯವಾಗಿದೆ ಶರಣದ ಸುಖಿ ಜೀವನ ಬಿತ್ತರಿಸುವುದು ಉತ್ತಮ ಶರಣ ಸಾಹಿತ್ಯದ ಉಪನ್ಯಾಸಕರು ಇಡೀ ರಾಜ್ಯದಲ್ಲೇ ಪ್ರಚಾರ ವಾಗಬೇಕಾಗಿರುವುದು ಅತೀ ಅವಶ್ಯ ಎಂದು ತಿಳಿಸಿದರು ಚಿತ್ರಕಲಾವಿದ ವಿ.ಟಿ. ಕಾಳೆಯವರು ಮಾತನಾಡಿ 12ನೇ ಶತಮಾನದಲ್ಲಿ ಸಾಕಷ್ಟು ಮಹಿಳೆಯವರು ಶರಣೆಯರಾಗಿದ್ದಾರೆ ಅವರಲ್ಲಿ ಅಕ್ಕಮಹಾದೇವಿ ಒಬ್ಬರು ಸರ್ವಧರ್ಮದವರು ಜಾತಿ, ಮತ, ಭೇದವಿಲ್ಲದೆ ಸಮ ಸಮಾಜವನ್ನು ಕಟ್ಟುವುದಕ್ಕೆ ಸಂಕಲ್ಪ ಮಾಡಿದರು ಶರಣರ ಕಾಲಕ್ಕೆ ಜಾತ್ಯಾತೀತ ರಾಷ್ಟ್ರವಾಗಿತ್ತು ಆದರೆ ಇಂದು ಜಾತಿಯತೆ ರಾಷ್ಟ್ರವಾಗಿರುವುದು ನೊವಿನ ಸಂಗತಿ ಎಂದರು
ಸಂಡೂರಿನ ಶ್ರೀ ಪ್ರಭುದೇವರ ಸಂಸ್ಥಾನ ವಿರಕ್ತ ಮಠದ ಪರಮಾ ಪೂಜ್ಯ ಶ್ರೀ ಪ್ರಭುಮಹಾಸ್ವಾಮಿಗಳು ಮಾತನಾಡಿ ಬಳ್ಳಾರಿ ಜಿಲ್ಲೆ ವಿಶೇಷವಾಗಿದ್ದು ವಿಶ್ವಕ್ಕೆ ಸ್ಪೂರ್ತಿಯಾಗಿದೆ 1956ರಲ್ಲಿ ಏಕಿಕರಣ ಪ್ರಾರಂಭವಾದಗ ಅಖಂಡ ಬಳ್ಳಾರಿ ಜಿಲ್ಲೆ ಹಂಪಿಯಲ್ಲಿ ಆಚಾರಣೆ ಮಾಡಿತ್ತು ಗಡಿ ಭಾಗದ ಜನತೆ ಭಾಷೆಯ ಆತಂಕದಲ್ಲಿದ್ದಾರೆ ವಚನ ಸಾಹಿತ್ಯವನ್ನು ದೊಡ್ಡಮಟ್ಟದಲ್ಲಿ ಪ್ರೌಢ ದೇವರಾಯ ಕಾಲದಲ್ಲಿ ನಡೆದದ್ದು ಬಳ್ಳಾರಿ ಜಿಲ್ಲೆ ಅಕ್ಕನ ಬಳಗ ಕದಳಿ ವೇದಿಕೆ ಎರಡು ಕಣ್ಣುಗಳಿದ್ದಂತೆ. ಆತ್ಮವಿಶ್ವಾಸವನ್ನು ಶರಣ ಸಾಹಿತ್ಯ ಸಂಸ್ಥೆಯ ಮೂಲಕ ಹುಟ್ಟು ಹಾಕಿದರು ಸುತ್ತೂರು ಶ್ರೀಗಳು. ಇಂದು ನಮಗೆ ಸಮಾನ್ಯ ಜ್ಞಾನವಿಲ್ಲದಂತಾಗಿದೆ ಇದರಿಂದ ನಾವುಗಳು ಮೂಡನಂಬಿಕೆಯಿಂದ ಹೊರಬರಲು ಸಾಧ್ಯವಿಲ್ಲದಂತಾಗಿದೆ ಎಂದು ತಿಳಿಸಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ ಬಿ. ನಾಗನಗೌಡ್ರು ಮಾತನಾಡಿದರು ಶಿರುಗುಪ್ಪ, ಕುರುಗೋಡು, ಹ.ಬೊ.ಹಳ್ಳಿ, ಬಳ್ಳಾರಿ, ಹಲವಾರು ಕಡೆಯಿಂದ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಸಮಾರಂಭದಲ್ಲಿ ಭಾಗವಹಿಸಿ ಶ್ರೀಶೈಲವಿದ್ಯಾಕೇಂದ್ರದಿಂದಲೂ, ಶರಣಸಾಹಿತ್ಯ ಪರಿಷತ್ತಿನಿಂದಲೂ ಸನ್ಮಾನಕ್ಕೆ ಭಜನಾರಾದರು ಬಳ್ಳಾರಿ ಜಿಲ್ಲೆ ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ನಿಲಾಂಭಿಕೆ ಪ್ರೇಮಲೀಲಾ ಶಿಕ್ಷಕಿ ಸುಮಿತ್ರಮ್ಮ ಹೊಳಗುಂದಿ, ಸವಿತ್ರ ಚಿತ್ರಿಕಿ ಬಂಡೆ ಮಾಗಳ ಆಶಾ ಹಲವಾರು ಮಹಿಳೆಯವರು ಅಲ್ಲದೆ ಶ್ರೀಶೈಲೇಶ್ವರ ವಿದ್ಯಾಕೇಂದ್ರ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ನಾಡಗೀತೆ, ಪ್ರಾರ್ಥನೆಯನ್ನು ಭುಜಂಗನಗರದ ತಾಯಪ್ಪ, ಭರತ್‍ರೆಡ್ಡಿ, ಸಂಗಡಿಗರು ನಡೆಸಿಕೊಟ್ಟರೆ ಕುಮಾರಸ್ವಾಮಿಯವರು ತಬಲ ಸಾಥ್ ನೀಡಿದರು.