ಗುರುವಿಗೆ ಪಾದಪೂಜೆ ಸಲ್ಲಿಸಿ ನಮನ

ಕಲಬುರಗಿ:ಜು.16: ಮಹಾನಗರದಲ್ಲಿ ಗುರು ಪೂರ್ಣಿಮೆಯ ಅಂಗವಾಗಿ ಎಕ್ಸಲೆಂಟ್ ಟ್ಯೂಟೋರಿಯಲ್‍ನಲ್ಲಿ ನಡೆದ ಗುರುವಿಗೆ ನೆನೆದು ಹೊಗಳಿ ಪಾದ ಪೂಜೆ ಕಾರ್ಯಕ್ರಮ ವಿಭಿನ್ನವಾಗಿ ಗೌರವದಿಂದ ಸತ್ಕರಿಸಲಾಯಿತು. ಈ ಕಾರ್ಯಕ್ರಮಕ್ಕೆ ಸಂಸ್ಥೆಯ ಅಧ್ಯಕ್ಷರಾದ ಡಾ.ಮನೋಜಕುಮಾರ ಬುರಬುರೆ ಅವರ ತಾಯಿಯವರಾದ ಮಂಜುಳಾ ಬಾಯಿ ಬುರಬುರೆ ಮೊದಲ ಗುರು ಮುಖ್ಯ ಅತಿಥಿಯಾಗಿದ್ದರು. ಮುಖ್ಯ ಅತಿಥಿಗಳು ಶ್ರೀಮತಿ ಜ್ಯೋತಿ ಬಾಸುತ್ಕರ ಅವರು ಮಾತನಾಡಿ “ಮಾತೃ ದೇವೋಭವ ಪಿತೃ ದೇವೋಭವ ಆಚಾರ್ಯ ದೇವೋಭವ” ಎಂಬ ಉಕ್ತಿಯಂತೆ ತಾಯಿಯೇ ಮೊದಲ ಗುರು ಆಗಿ ಮಗುವಿಗೆ ಮಾತನಾಡಲು ಕಲಿಸಿದರೆ ತಂದೆ ವಿದ್ಯೆಯನ್ನು ನೀಡಲು ಹಣವನ್ನು ವ್ಯಯಿಸಿದರೆ ಆಚಾರ್ಯವೆಂಬ ಗುರುವಿನ ಸ್ಥಾನ ಅತ್ಯಂತ ಮಹತ್ವದು. “ಗುರುವಿನ ಗುಲಾಮನಾಗುವತನಕ ದೊರೆಯದಣ್ಣ ಮುಕುತಿ” ಎಂಬ ನಾಣ್ನುಡಿಯಂತೆ ಗುರುವಿನ ಎಲ್ಲಾ ವಿದ್ಯಾರ್ಜನೆಯನ್ನು ತನ್ನ ಶಿಷ್ಯನಿಗೆ ಧಾರೆಯೆರೆದು ತನ್ನನ್ನೇ ಮೀರಿಸುವ ಶಿಷ್ಯನನ್ನು ತಯಾರಿಸುತ್ತಾನೆ. ಹಾಗಾಗಿ ಗುರುವಿನ ಮಹತ್ವ ಅತ್ಯಂತ ಮಹತ್ವದು ಎನ್ನು ಉದಾಹರಣೆ ನನ್ನ ವಿದ್ಯಾರ್ಥಿಯಾದ ಚಿ.ಡಾ.ಮನೋಜ್ ಕುಮಾರನಲ್ಲಿ ಇರುವುದನ್ನು ಕಂಡು ನನಗೆ ಸಂತೋಷವಾಗಿದೆ. ನನ್ನ ಪಾದ ಪೂಜೆ ಮಾಡಿ ಸನ್ಮಾನ ಮಾಡಿದ್ದಕ್ಕೆ ಕೃತಜ್ಞತೆ ಹೇಳಲು ಬಯಸುತ್ತೇನೆ. ಮನೋಜ್ ಕುಮಾರನಂತೆ ಪ್ರತಿಯೊಬ್ಬ ಗುರುವಿಗೆ ಶಿಷ್ಯ ಸಿಕ್ಕರೆ ಗುರುವಿನ ಜನ್ಮ ಸಾರ್ಥಕವಾದಂತೆ ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ ಸಂಸ್ಥೆಯ ಮುಖ್ಯಸ್ಥರಾದ ಡಾ.ಮನೋಜ್ ಕುಮಾರ ಬುರಬುರೆ ಅವರು “ಗುರುಬ್ರಹ್ಮ ಗುರುವಿಷ್ಣು ಗುರುದೇವೋ ಮಹೇಶ್ವರ” ಎಂದು ಗುರುವಿನ ಮಹತ್ವ ತಿಳಿಸಿದರು. ಪ್ರತಿಯೊಬ್ಬರಿಗೂ ತನ್ನ ಜೀವನದಲ್ಲಿ ತಾಯಿಯೇ ಮೊದಲ ಗುರುವಾಗುತ್ತಾಳೆ ಹಾಗೂ ಎರಡನೇ ಗುರು ಎಂದರೆ ಶಿಕ್ಷಕರು ಎಂಬ ಮಾತನ್ನು ವಿದ್ಯಾರ್ಥಿಗಳಿಗೆ ಪಾಲಕರಿಗೂ ವಿವರಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಗುರುಗಳಿಗೆ, ಪೋಷಕರಿಗೆ ಪಾದ ಪೂಜೆ ಮಾಡಿ ಸಿಹಿ ಹಾಗೂ ಹೂವು ಕೊಟ್ಟು ಗೌರವಿಸಲಾಯಿತು. ಶಿವರಾಜ್ ಹಿಲಾಲಪೂರ ಅವರು ವಂದನಾರ್ಪಣೆ ಮಾಡಿದರು.