ಗುರುವಂದನ ಕಾರ್ಯಕ್ರಮ

ಧಾರವಾಡ, ಜು.16: ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಅಕಾಡೆಮಿ ಮತ್ತು ಪ್ರಾದೇಶಿಕ ವಿಜ್ಞಾನ ಕೇಂದ್ರದ ವತಿಯಿಂದ ಇತ್ತೀಚೆಗೆ ಭೌತಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಪ್ರೊ.ಬಿ.ಜಿ.ಮೂಲಿಮನಿ ಮತ್ತು ಪ್ರೊ.ಎನ್. ಉಮಾಕಾಂತ ಅವರಿಗೆ ಗುರುವಂದನೆ ಸಲ್ಲಿಸಿ ಸನ್ಮಾನಿಸಲಾಯಿತು.

ಪ್ರೊ.ಎನ್.ಎಮ್ ಬಡಿಗೇರ ಮಾತನಾಡಿ, ಭೌತಶಾಸ್ತ್ರ ಸಂಶೋಧನಾ ವಿದ್ಯಾರ್ಥಿಯಾಗಿ, ಪ್ರಾಧ್ಯಾಪಕರಾಗಿ ಪ್ರೊ.ಎನ್.ಉಮಾಕಾಂತ ಅವರು ಭೌತಶಾಸ್ತ್ರ ವಿಭಾಗದ ಯಶಸ್ಸಿಗಾಗಿ ಪ್ರಾಶಸ್ತ್ಯ ನೀಡುತ್ತಾ ಹಗಲಿರುಳೆನ್ನದೆ ಶ್ರಮಿಸಿದ್ದಾರೆ. ವೃತ್ತಿ ಜೀವನದಲ್ಲಿ ವಿದ್ಯಾರ್ಥಿಗಳ ಕಲಿಕೆಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದರು ಎಂದರು.

ಡಾ. ಜಗದೀಶ ಟೊಣ್ಣನವರ ಮಾತನಾಡಿ, ಭೌತಶಾಸ್ತ್ರ ವಿಷಯದ ವಿದ್ಯಾರ್ಥಿಯಾಗಿ, ಸಂಶೋಧಕರಾಗಿ, ಬೋಧಕರಾಗಿ ಹಾಗೂ ಗುಲ್ಬರ್ಗಾ ಮತ್ತು ಬಿಎಲ್‍ಡಿಇ ವಿಶ್ವವಿದ್ಯಾಲಯದಲ್ಲಿ ಕುಲಪತಿಗಳಾಗಿ ಪ್ರೊ.ಬಿ.ಜಿ.ಮೂಲಿಮನಿಯವರು ಮಾಡಿದ ಅಪಾರ ಸೇವೆ ಹಾಗೂ ಭೌತಶಾಸ್ತ್ರ ವಿಷಯ ಮತ್ತು ಶಿಕ್ಷಣಕ್ಕೆ ಅವರು ನೀಡಿದ ಅಪಾರ ಕೊಡುಗೆ ಮಹತ್ವದ್ದಾಗಿದೆ ಎಂದರು.

ಕರ್ನಾಟಕ ವಿಶ್ವವಿದ್ಯಾಲಯದ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಎಲ್.ಆರ್.ನಾಯಕ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಅಕಾಡೆಮಿಯ ನಿರ್ದೇಶಕ ಪ್ರೊ. ಎಸ್.ಎಂ.ಶಿವಪ್ರಸಾದ ಸ್ವಾಗತಿಸಿದರು. ಪ್ರಾದೇಶಿಕ ವಿಜ್ಞಾನಕೇಂದ್ರ ನಿರ್ದೇಶಕ ಡಾ.ವಿ.ಆರ್.ಬೊಳಶೆಟ್ಟಿ ವಂದಿಸಿದರು.