ಮುನವಳ್ಳಿ,ಜೂ12: ಪಟ್ಟಣದ ಶ್ರೀ ಸೋಮಶೇಖರ ಮಠದ ಸಭಾಭವನದಲ್ಲಿ ಶ್ರೀ ಮುರುಘೇಂದ್ರ ಶ್ರೀಗಳ ಜನ್ಮದಿನದ ಅಂಗವಾಗಿ ಗುರುವಂದನೆ ಹಾಗೂ ಪುರೋಹಿತರ ಗುರುರಕ್ಷೆ ನೀಡುವ ಕಾರ್ಯಕ್ರಮ ಜರುಗಿತು.
ಶಾಸಕ ವಿಶ್ವಾಸ ವೈದ್ಯ ಶ್ರೀಗಳಿಗೆ ಸನ್ಮಾನಿಸಿ ಮಾತನಾಡಿದರು, ಮಠ ಮಂದಿರಗಳು ಹಾಗೂ ಧಾರ್ಮಿಕ ಕೇಂದ್ರಗಳಿಗೆ ಆದ್ಯತೆ ಮೇರೆಗೆ ಮೂಲಭೂತ ಸೌಕರ್ಯಕ್ಕಾಗಿ ಅನುದಾನ ಹಾಗೂ ಇತರೆ ಅಭಿವೃದ್ದಿ ಕಾರ್ಯಗಳಿಗೆ ಮಹತ್ವ ನೀಡಿ ಯಲ್ಲಮ್ಮ ಮತಕ್ಷೇತ್ರವನ್ನು ಸರ್ವಾಂಗೀಣ ಅಭಿವೃದ್ದಿ ಮಾಡಿ ಮಾದರಿ ಕ್ಷೇತ್ರವನ್ನಾಗಿ ಮಾಡಲು ಶ್ರಮಿಸುತ್ತೇನೆ ಎಂದರು.
ಉಪ್ಪಿನಬೆಟಗೇರಿಯ ಶ್ರೀಗಳು, ಗೊರವನಕೊಳ್ಳದ ಶ್ರೀ ಶಿವಾನಂದ ಶ್ರೀಗಳು, ಆಶೀರ್ವಚನ ನೀಡಿದರು. ತಾರೀಹಾಳದ ಶ್ರೀ ಅಡವೀಶ ದೇವರು, ಚಂದ್ರಯ್ಯ ಸ್ವಾಮಿಗಳು ಉಪಸ್ಥಿತರಿದ್ದರು.
ಅರಣ್ಯ ಇಲಾಖೆ ಸಹಯೋಗದೊಂದಿಗೆ ಶ್ರೀ ಅನ್ನದಾನೇಶ್ವರ ಎರೆಹುಳು ಗೊಬ್ಬರ ಉತ್ಪಾದನಾ ಘಟಕದಿ ಂದ ಸಸಿ ವಿತರಣೆ, ಬಡಮಕ್ಕಳಿಗೆ ಶಾಲಾ ಶುಲ್ಕ ವಿತರಣೆ, ಪುರೋಹಿತರಿಗೆ ಗುರುರಕ್ಷೆ ನೀಡಿದರು. ಮುರುಘರಾಜೇಂದ್ರ ಯೋಗ ವಿದ್ಯಾ ಕೇಂದ್ರ, ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಸಮಿತಿ, ಸಹಜ ಸ್ಥಿತಿ ಯೋಗ ಸತ್ಸಂಗ ಬಳಗ, ಭಗವದ್ಗೀತಾ ಉತ್ಸವ ಸಮಿತಿ, ಅಕ್ಕನ ಬಳಗ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳಿಂದ ಶ್ರೀಗಳಿಗೆ ಗುರುವಂದನೆ ಜರುಗಿತು.
ರವೀಂದ್ರ ಯಲಿಗಾರ, ಡಿ.ಡಿ.ಟೋಪೋಜಿ, ಅಂಬರೀಷ ಯಲಿಗಾರ, ಚಂದ್ರು ಜಂಬ್ರಿ, ಎಮ್.ಆರ್.ಗೊಪಶೆಟ್ಟಿ, ಪುರಸಭೆ ಸದಸ್ಯರಾದ ಸಿ.ಬಿ.ಬಾಳಿ, ಈಶ್ವರ ಕರಿಕಟ್ಟಿ, ಸುಭಾಸ ಗೀದಿಗೌಡರ, ಶ್ರೀಕಾಂತ ಮಲಗೌಡರ ಹಾಗೂ, ಶಂಕರ ಗಯ್ಯಾಳಿ, ಅಶೋಕ ಗೋಮಾಡಿ, ಪುಂಡಲಿಕ ಬಾಳೋಜಿ, ತಾನಾಜಿರಾವ ಮುರಂಕರ, ವಾಯ್.ಬಿ ಕಡಕೋಳ, ಬಿ.ಬಿ,ಹುಲಿಗೊಪ್ಪ, ಗಂಗಾಧರ ಗೊರಾಬಾಳ, ಮಂಜುನಾಥ ಭಂಡಾರಿ, ಬಾಳು ಹೊಸಮನಿ, ರಮೇಶ ಮುರಂಕರ, ಡಾ. ಎಂ ಬಿ ಅಷ್ಟಗಿಮಠ, ಜಗದೀಶ ಹಿರೇಮಠ, ಶ್ರೀಶೈಲ ಗೋಪಶೆಟ್ಟಿ, ಹಲವಾರು ಸಂಘ ಸಂಸ್ಥೆಗಳ ಪದಾಧಿಕಾರಿಗಳು ಇತರರು ಉಪಸ್ಥಿತರಿದ್ದರು.