ಗುರುವಂದನಾ’ ಹೆಸರಿನಲ್ಲಿ   ವಿಶೇಷ ಸೇವೆ

ಸಂಜೆವಾಣಿ ವಾರ್ತೆ

ದಾವಣಗೆರೆ.ಸೆ.6 : ಹಿಂದೆ ಗುರು, ಮುಂದೆ ಗುರಿ ಇದ್ದರೆ ಏನು ಬೇಕಾದರೂ ಸಾಧನೆ ಮಾಡಬಹುದೆಂದು ಗಾದೆ ಹೇಳುತ್ತದೆ.‌‌.‌ಅಂತೆಯೇ ಗುರುವಿನಿಂದ ನಾನಾ ವಿದ್ಯೆಗಳನ್ನು ಕಲಿತು ಸಾಧನೆ ಮಾಡಿದವರ ಸಾಲಿನಲ್ಲಿ ಅನೇಕರು ಇದ್ದಾರೆ..ಹಾಗಾದ್ರೆ ಇಂತಹ ಗುರುವಿಗೆ ಕೊನೆ ಪಕ್ಷ ವಂದನೆ ಸಲ್ಲಿಸದೇ ಹೋದರೆ ಬೆಲೆಯೇ ಇರೋದಿಲ್ಲ.ಅದಕ್ಕಾಗಿಯೇ ಅಂಚೆ ಇಲಾಖೆ ಒಂದು ವೇದಿಕೆ ಸೃಷ್ಟಿಸಿದೆ.ಸೆ.5 ಕ್ಕೆ ಶಿಕ್ಷಕರ ದಿನಾಚರಣೆ ಇದ್ದು, ಅಂಚೆ ಇಲಾಖೆ ಶಿಕ್ಷಕರ ದಿನಾಚರಣೆ ನಿಮಿತ್ತ ಅಂಚೆ  ‘ಗುರುವಂದನಾ’ ಹೆಸರಿನಲ್ಲಿ ವಿಶೇಷ ಸೇವೆಯನ್ನು ಆರಂಭಿಸಿದೆ. ಗ್ರಾಹಕರು ಈ ಸೇವೆ ಮೂಲಕ ತಮ್ಮ ಅಚ್ಚುಮೆಚ್ಚಿನ ಶಿಕ್ಷಕರಿಗೆ ವಿಶೇಷ ಕೊಡುಗೆಗಳನ್ನು ಕಳುಹಿಸಬಹುದುಅಥವಾ ಶುಭಾಶಯ ಕೋರಬಹುದಾಗಿದೆ.ನಾಗರಿಕರು ತಮ್ಮ ಶಿಕ್ಷಕರಿಗೆ ಆನ್‌ಲೈನ್‌ ಮೂಲಕ ಸಂದೇಶಗಳನ್ನು ಕಳುಹಿಸಬಹುದು ಅಥವಾ ಪೆನ್‌, ಪೆನ್ಸಿಲ್‌ ಮತ್ತು ಬುಕ್‌ಮಾರ್ಕ್‌ಗಳನ್ನು ವಿಶೇಷ ಲಕೋಟೆಗಳ ಮೂಲಕ ಸ್ಪೀಡ್‌ಪೋಸ್ಟ್‌ ಮೂಲಕ ಕಳುಹಿಸಬಹುದು. ಇದಕ್ಕೆ ₹140 ನಿಗದಿಪಡಿಸಲಾಗಿದ್ದು, ಆನ್‌ಲೈನ್‌ ಮೂಲಕ ಪಾವತಿಸಬೇಕು. ಗುರುವಂದನಾ ಸೇವೆಯನ್ನು https://www.karnatakapost.gov.in/Guruvandana ವೆಬ್‌ಸೈಟ್‌ ಮೂಲಕ ಪಡೆಯಬಹುದು ಜಗತ್ತಿನಾದ್ಯಂತ ಇರುವ ಗ್ರಾಹಕರು ಭಾರತದ ಯಾವುದೇ ಭಾಗದಲ್ಲಿರುವ ಶಿಕ್ಷಕರಿಗೆ ಕೊಡುಗೆಗಳನ್ನು ಕಳುಹಿಸಲು ಈ ಸೇವೆಯನ್ನು ಪಡೆಯಬಹುದು.  ಉತ್ಪನ್ನಗಳು ಮುಗಿಯುವವರೆಗೆ ಮಾತ್ರ ಬಳಸಿಕೊಳ್ಳಬಹುದು ಎಂದು ದಾವಣಗೆರೆ ಅಂಚೆ ಅಧೀಕ್ಷಕ ಚಂದ್ರಶೇಖರ್ ಹೇಳುತ್ತಾರೆ.ಪ್ರತಿಯೊಬ್ಬರ ಜೀವನದಲ್ಲಿಯೂ ನೆಚ್ಚಿನ ಗುರು ಇರುತ್ತಾರೆ. ಅವರನ್ನು ನೆನೆಯಲು ಇಲಾಖೆ ಇಂತಹ ಕಾರ್ಯಕ್ರಮ ಹಮ್ಮಿಕೊಂಡಿದೆ. ನಾವು ಚಿಕ್ಕವರಾಗಿದ್ದ ಪೆನ್ಸಿಲ್, ಪೇನ್ ಬಳಸುತ್ತಿದ್ದು, ಅದನ್ನು ಪುನಃ ಗುರುಗಳಿಗೆ ನೀಡಬಹುದಾಗಿದೆ. ಈ ಮೂಲಕ ಹಳೆ ನೆನಪನ್ನು ಮತ್ತೊಮ್ಮೆ ಮೆಲುಕು ಹಾಕಬಹುದಾಗಿದೆ.ಸೆಪ್ಟೆಂಬರ್ 5 ರಂದು ಆಚರಿಸಲಾಗುವ  ಶಿಕ್ಷಕರ ದಿನಾಚರಣೆಯ ಅಂಗವಾಗಿ ಶಿಕ್ಷಕರಿಗೆ ಕೃತಜ್ಞತೆ ಸಲ್ಲಿಸಲು ಕರ್ನಾಟಕ ಅಂಚೆ ಇಲಾಖೆ ‘ಗುರುವಂದನಾ’ ಎನ್ನುವ ಸೇವೆಯನ್ನು ಪರಿಚಯಿಸಿದ್ದು, ಸದುಪಯೋಗ ಪಡಿಸಿಕೊಳ್ಳಬೇಕಿದೆ. ಆಯ್ದ ಸಂದೇಶ ಮತ್ತು ಕಿರುಕಾಣಿಕೆಯನ್ನು ಸ್ಪೀಡ್ ಪೋಸ್ಟ್‍ನ ವಿಶೇಷ ಲಕೋಟೆಯಲ್ಲಿ ಕಳುಹಿಸಲಾಗುತ್ತದೆ. ಆನ್‍ಲೈನ್‍ನಲ್ಲಿ  140ರೂ ಪಾವತಿಸಬೇಕಾಗಿದ್ದು, ದೇಶದ ಯಾವುದೇ ಭಾಗದಿಂದ ದೇಶದ ಯಾವುದೇ ಸ್ಥಳದಲ್ಲಿ ವಾಸಿಸುವ ಶಿಕ್ಷಕರಿಗೆ ಕಳುಹಿಸಬಹುದಾಗಿದೆ.