ಗುರುವಂದನಾ ಕಾರ್ಯಕ್ರಮ ಯಶಸ್ವಿಗೊಳಿಸಲು ಸಹಕಾರ: ಶಾಸಕ ಗುತ್ತೇದಾರ

ಕಲಬುರಗಿ:ನ.19:ಡಿ. 2ರಂದು ಆಳಂದ ತಾಲೂಕಿನ ಜಿಡಗಾ ಗ್ರಾಮದಲ್ಲಿ ಮುರುಘರಾಜೇಂದ್ರ ಸ್ವಾಮೀಜಿಗಳ ಜನ್ಮ ದಿನದ ನಿಮಿತ್ಯ ಹಮ್ಮಿಕೊಂಡಿರುವ ಗುರುವಂದನಾ ಕಾರ್ಯಕ್ರಮ ಯಶಸ್ವಿಗೊಳಿಸಲು ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದು ಆಳಂದ ಶಾಸಕ ಸುಭಾಷ್ ಆರ್ ಗುತ್ತೇದಾರ ತಿಳಿಸಿದ್ದಾರೆ.

ಇತ್ತೀಚಿಗೆ ಭಕ್ತರ ಜೊತೆ ಜಿಡಗಾ ಮುಗುಳಖೋಡ ಮಠದ ಪೀಠಾಧಿಪತಿ ಮುರುಘರಾಜೇಂದ್ರ ಶಿವಯೋಗಿಗಳನ್ನು ಭೇಟಿಯಾಗಿ ಆಶೀರ್ವಾದ ಪಡೆದು ಕಾರ್ಯಕ್ರಮದ ಕುರಿತು ಪೂಜ್ಯರ ಜೊತೆ ಚರ್ಚಿಸಿದ ಶಾಸಕರು, ಜಿಡಗಾ ಗ್ರಾಮದಲ್ಲಿ ಜರುಗುತ್ತಿರುವ ಕಾರ್ಯಕ್ರಮವು ತಾಲೂಕಿನಲ್ಲಿಯೇ ಐತಿಹಾಸಿಕ ಕಾರ್ಯಕ್ರಮವಾಗಿದ್ದು ಇದರ ಯಶಸ್ಸಿಗೆ ತಾವು ಎಲ್ಲ ರೀತಿಯ ಸಹಕಾರ ನೀಡಲು ಸಿದ್ಧ ಅದಕ್ಕಾಗಿ ಬೇಕಾದ ತಯಾರಿಯ ಮಾಹಿತಿ ಪಡೆದುಕೊಂಡರು ಅಲ್ಲದೇ ಕಾರ್ಯಕ್ರಮದ ಸಂಪೂರ್ಣ ಯಶಸ್ಸುಗಾಗಿ ತಾವು ಮತ್ತು ಭಕ್ತರು ಸೇರಿ ಶ್ರಮಿಸುತ್ತೇವೆ ಎಂದು ತಿಳಿಸಿದ್ದಾರೆ.

ಕಾರ್ಯಕ್ರಮದಲ್ಲಿ ಪುನೀತರಾಜಕುಮಾರಗೆ ಮರಣೋತ್ತರ ರಾಷ್ಟ್ರಮಟ್ಟದ ಸಿದ್ಧಶ್ರೀ ಪ್ರಶಸ್ತಿ ಪ್ರದಾನ ಹಮ್ಮಿಕೊಳ್ಳಲಾಗಿದೆ. ಸಾಯಂಕಾಲ ಜರುಗುವ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಖ್ಯಾತ ಗಾಯಕರಾದ ವಿಜಯಪ್ರಕಾಶ, ರಾಜೇಶ ಕೃಷ್ಣನ್, ನಿರೂಪಕಿ ಅನುಶ್ರೀ ಸೇರಿದಂತೆ ಖ್ಯಾತನಾಮರು ಪಾಲ್ಗೊಳ್ಳಲಿದ್ದಾರೆ ಅದರ ಯಶಸ್ಸಿಗಾಗಿ ತಾವು ಸಂಪೂರ್ಣ ಸಹಕಾರ ನೀಡುತ್ತೇವೆ ಎಂದು ಮಾಹಿತಿ ನೀಡಿದ್ದಾರೆ.

ಭೇಟಿಯಾದ ನಿಯೋಗದಲ್ಲಿ ಜಿ.ಪಂ ಮಾಜಿ ಸದಸ್ಯ ಹರ್ಷಾನಂದ ಎಸ್ ಗುತ್ತೇದಾರ, ಶರಣು ಲಾವಣಿ, ಗುರು ಲಾವಣಿ ಸೇರಿದಂತೆ ಅನೇಕ ಭಕ್ತರಿದ್ದರು.