ಗುರುರಾಯರ ಮಠದಲ್ಲಿ ಶ್ರೀ ವಾದಿರಾಜರ ಆರಾಧನೆ

ಚಾಮರಾಜನಗರ:ಏ:01: ನಗರದ ಶಂಕರಪುರ ದಲ್ಲಿರುವ ಶ್ರೀ ಗುರು ರಾಘವೇಂದ್ರ ಸ್ವಾಮಿ ಮಠದಲ್ಲಿ ಇಂದು ಶ್ರೀ ವಾದಿರಾಜರ ಹಾಗೂ ವ್ಯಾಸರಾಜರ ಮಧ್ಯಾರಾಧನೆ ಮಹೋತ್ಸವವು ನಡೆಯಿತು.
ಮಠದ ಆವರಣದಲ್ಲಿ ವಾದಿರಾಜರ ರಥೋತ್ಸವವು ಸರಳವಾಗಿ ನಡೆಯಿತು.
ಭಕ್ತಾದಿಗಳು ಬೆಳಿಗ್ಗೆಯಿಂದಲೇ ಕೊರೊನಾ ಸುರಕ್ಷತಾ ಕ್ರಮಗಳೊಂದಿಗೆ ಗುರು ಸಾರ್ವಭೌಮರನ್ನು ಸ್ಮರಿಸಿ ಇμÁ್ಟರ್ಥ ಸಿದ್ದಿಗೆ ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ಶ್ರೀ ಮಠದ ಅರ್ಚಕರಾದ ಪವನ್‍ಆಚಾರ್, ಶ್ರೀಧರ್‍ಆಚಾರ್, ರಾಮಚಂದ್ರ, ವಾಸುದೇವರಾವ್, ನಾರಾಯಣ ಹೆಬ್ಬಾರ್, ಮ್ಯಾನೇಜರ್‍ನಂಜುಂಡಸ್ವಾಮಿ, ವಾಸುದೇವಮೂರ್ತಿ, ರುದ್ರಭೂಮಿ ಸತೀಶ್ ,ರಾಮಕೃಷ್ಣ ಭಾರಧ್ವಜ್ ,ಲಕ್ಷ್ಮಿ ವಾಸುದೇವರಾವ್, ಶ್ರೀನಿಧಿ, ಶ್ರೀಧರ್ ರಮ್ಯ, ಸಹನಾ, ಪವನ್, ಕಾರ್ತಿಕ್ ಭಾರದ್ವಾಜ್ ಇದ್ದರು.