ಗುರುರಾಯರಿಗೆ ಲಕ್ಷ ಪುಷ್ಪಾರ್ಚನೆ

ಕಲಬುರಗಿ,ಸ 2: ನಗರದ ಸತ್ಯಾನಂದ ಪಾರಾಯಣ ಸಂಘದ ಮತ್ತು ವೆಂಕಟೇಶ ಕುಲಕರ್ಣಿಯವರ ಅವರ ಸಂಯುಕ್ತ ಆಶ್ರಯದಲ್ಲಿ ನ್ಯೂ ರಾಘವೇಂದ್ರ ಕಾಲೋನಿಯಲ್ಲಿ ರಾಘವೇಂದ್ರ ಗುರು ಸಾರ್ವಭೌಮರ 352ನೇ ಮಧ್ಯಾರಾಧನೆಯ ಪ್ರಯುಕ್ತ ಲಕ್ಷ ಪುಷ್ಪಾರ್ಚನೆ ಮತ್ತು ಅಷ್ಟೋತ್ತರ ಕಾರ್ಯಕ್ರಮ ಹಾಗೂ ಪಂಡಿತ ಪ್ರಸನ್ನಾಚಾರ್ಯ ಜೋಶಿ ಅವರಿಂದ ಪ್ರವಚನ ಜರುಗಿತು.ಈ ಸಂದರ್ಭದಲ್ಲಿ ವೆಂಕಟೇಶ ಕುಲಕರ್ಣಿ, ಭೀಮಭಟ್ಟ ಜೋಶಿ,ಲಕ್ಷ್ಮೀಕಾಂತರಾವ, ಸತ್ಯನಾರಾಯಣಚಾರ್ಯ ಆಡಕಿ ,ಭಗವಾನರಾವ, ವಸಂತರಾವ, ದಾಮೋದರರಾವ, ರಾಘವೇಂದ್ರ ದೇಸಾಯಿ,ರವೀಂದ್ರ,ಪ್ರಾಣೇಶ ಟೇಂಗಳಿ,ರಾಘವೇಂದ್ರಚಾರ್ಯ, ದೀಪಾ ಸಾವಳಗಿ, ಶ್ರೀನೀವಾಸ ಉಪಾಧ್ಯಾಯ, ಮನೋಹರರಾವ ,ಪಾರಾಯಣ ಸಂಘದ ಅಧ್ಯಕ್ಷ ಶ್ರೀನಿವಾಸಾಚಾರ್ಯ ಕೆ ಜೋಶಿ ನೆಲೊಗಿ ಹಾಗೂ ಸದಸ್ಯರು ಉಪಸ್ಥಿತರಿದ್ದರು.