ಗುರುರಾಜ್ ಶೆಟ್ಟಿ ಎಪಿಎಂಸಿ ವ್ಯಾಪಾರ ಪರವಾನಿಗೆ ರದ್ದು-ಕೊಡ್ಲಿ

ಮಾನ್ವಿ.ಅ.೧೯- ಪಡಿತರ ಆಹಾರಕ್ಕೆ ರಾಸಾಯನಿಕ ಮಿಶ್ರಿಣ ಮಾಡಿ ಅಕ್ರಮ ಮಾರಾಟ ಹಾಗೂ ಸಂಗ್ರಹ ಮಾಡುತ್ತಿದ್ದ ಹಾಗೂ ಪರವಾನಿಗೆ ಪಡೆದ ಸಮಯದಿಂದ ಇಲ್ಲಿಯವರೆಗೆ ಯಾವುದೇ ವ್ಯಾಪಾರಕ್ಕೆ ಸಂಬಂಧಿಸಿದಂತೆ ದಾಖಲೆ ನೀಡದಿರುವ ಹಿನ್ನೆಲೆಯಲ್ಲಿ ಪೋತ್ನಾಳ ಗ್ರಾಮದ ಗುರುರಾಜ ಶೆಟ್ಟಿಯ ಪವನ್ ಟ್ರೇಡರ್ಸ್ ವ್ಯಾಪಾರ ಪರವಾನಿಗೆಯನ್ನು ತಾಲೂಕ ಎಪಿಎಂಸಿ ಇಲಾಖೆ ರದ್ದು ನೀಡಿ ಆದೇಶವನ್ನು ನೀಡಿದೆ ಎಂದು ಪ್ರಭುರಾಜ ಕೊಡ್ಲಿ ಹೇಳಿದರು.
ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತಾನಾಡಿದ ಅವರು ನಾವು ಕಳೆದ ಹಲವಾರು ತಿಂಗಳಿನಿಂದ ಜನಶಕ್ತಿ ಕೇಂದ್ರ ಹಾಗೂ ಮೇಜರ್ ಶಾಹನಾವಜ್ ಕಲ್ಯಾಣ ಕರ್ನಾಟಕ ಮತ್ತು ದಲಿತಪರ ಸಂಘಟನೆ ಮೂಲಕ ಇದಕ್ಕೆ ಸಂಬಂಧಿಸಿದಂತೆ ಹೋರಾಟ ಹಾಗೂ ಮನವಿ ಪತ್ರವನ್ನು ಪರಿಶೀಲನೆ ಮಾಡಿದ ಜಿಲ್ಲಾಧಿಕಾರಿಗಳು ಹಾಗೂ ಆಹಾರ ಇಲಾಖೆಯ ಅಧಿಕಾರಿಗಳು ಜಿಲ್ಲಾ ಉಸ್ತುವಾರಿ ಸಚಿವರ ಸೂಚನೆಯಂತೆ ಪರಿಶೀಲನೆ ಮಾಡಿ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಶಹನವಾಜ್, ನರಸಪ್ಪ ಜೂಕೂರು, ಮೈನುದ್ದೀನ್, ಜಯರಾಜಕೊಡ್ಲಿ, ಶ್ಯಾಮ್ ಸಿಂಗ್ ಇದ್ದರು.