ಗುರುರಾಜ್ ನಾಗಲಾಪುರ ಬಿಜೆಪಿ ಸೇರ್ಪಡೆ

ಮಾನ್ವಿ,ಏ.೨೬- ಪಟ್ಟಣದ ಚಲವಾದಿ ಸಮಾಜದ ಯುವ ಮುಖಂಡರಾದ ಗುರುರಾಜ್ ನಾಗಲಾಪುರ ಹಾಗೂ ಅವರ ಗೆಳೆಯರ ಜೊತೆಗೆ ಬಿಜೆಪಿ ಪಕ್ಷದ ಅಭ್ಯರ್ಥಿಯಾದ ಬಿ ವಿ ನಾಯಕ ಸಮ್ಮುಖದಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರು.
ಬಿಜೆಪಿ ಪಕ್ಷದ ಸಿದ್ಧಾಂತ ಹಾಗೂ ಪ್ರಧಾನಮಂತ್ರಿ ಮೋದಿ, ಹಾಗೂ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರ ಜನಪರಕಾಳಜಿಯುಳ್ಳ ಆಳ್ವಿಕೆ, ಮಾನ್ವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಾಜಿ ಸಂಸದ ಬಿ ವಿ ನಾಯಕ ಅವರ ಸ್ವಭಾವ ಮೆಚ್ಚುವಂತಹದು ಹಾಗಾಗಿ ಬಿಜೆಪಿ ಪಕ್ಷಕ್ಕೆ ಸೇರಿದ್ದೇನೆ ಎಂದು ಗುರುರಾಜ್ ತಿಳಿಸಿದರು.
ಈ ಸಂದರ್ಭದಲ್ಲಿ ಶ್ರೀಕಾಂತ್ ಗೂಳಿ,ಅಯ್ಯಪ್ಪ ಮ್ಯಾಕಲ್,ಗುರುಗೌಡ,ಕೆ. ಶಿವಕುಮಾರ್, ತಿಪ್ಪಣ್ಣ, ಶಂಕರ್, ಶಿವು, ಯಲ್ಲಪ್ಪ, ನರಸರೆಡ್ಡಿ, ಮಂಜು, ಇನ್ನಿತರ ಇದ್ದರು.