ಗುರುಮಠಕಲ್ ಶ್ರೀ ವೀರಭದ್ರೇಶ್ವರ ಉತ್ಸವದಲ್ಲಿ ಭಕ್ತರಿಂದ ಅಗ್ನಿ ಹಾಯ್ದು ಧನ್ಯತೆ

ಗುರುಮಠಕಲ್:ಸೆ.7:ಪಟ್ಟಣದ ನಾರಾಯಣಪೂರ ಬಡಾವಣೆಯ ಪುರಾತನ ಇತಿಹಾಸ ಹೊಂದಿರುವ ಪ್ರಸಿದ್ಧ ಶ್ರೀ ವೀರಭದ್ರೇಶ್ವರ ಉತ್ಸವವು ಶ್ರದ್ಧಾಭಕ್ತಿಯಿಂದ ಭಕ್ತರ ಸಮ್ಮುಖದಲ್ಲಿ ಅತಿ ವಿಜ್ರಂಭಣೆ ಜರುಗಿತು. ಪ್ರತಿವರ್ಷ ಶ್ರಾವಣ ಮಾಸದ ನಂತರ ಬರುವ ಮಂಗಳವಾರ ದಂದು ನಡೆಯುವ ಈ ಉತ್ಸವದ ಅಂಗವಾಗಿ ಬೆಳಗ್ಗೆ ಯಿಂದಲೆ 6 ಗಂಟೆಗೆ ಪುರಾತನ ದೇವಾಲಯ ಶ್ರೀ ನಗರೇಶ್ವರ ದೇವಾಲಯದ ಆವರಣದಲ್ಲಿರುವ ಬಾವಿಯಿಂದ ಗಂಗಾಜಲವಂ ತೆಗೆದುಕೊಂಡು ಮಂಗಳ ವಾದ್ಯಗಳ ಮೂಲಕ ಹಾಗೂ ಪುರವಂತರ ಸೇವೆಯೊಂದಿಗೆ ಭಕ್ತರ ಸಮ್ಮುಖದಲ್ಲಿ ಶ್ರೀ ವೀರಭದ್ರೇಶ್ವರ ದೇವರಿಗೆ ಶ್ರದ್ಧಾ ಭಕ್ತಿಯಿಂದ ಮಹಾ ರುದ್ರಾಭಿಷೇಕ ಜರುಗಿತು ತದನಂತರ ದೇವರಿಗೆ ಅಲಂಕಾರ ಸೇವೆ ಹಾಗೂ ಮಹಾ ಮಂಗಳಾರತಿ ನಡೆಯಿತು.
ತದನಂತರ ಶ್ರೀ ವೀರಭದ್ರೇಶ್ವರ ಉತ್ಸವ ಮೂರ್ತಿ ಯನ್ನು ಮುಖ್ಯ ಬೀದಿಗಳ ಮೂಲಕ ಪಲ್ಲಕ್ಕಿಯಲ್ಲಿ ಜಯಘೋಷ ಗಳಿಂದ ಮೆರವಣಿಗೆಯು ರಸ್ತೆ ಗಳ ಉದ್ದಕ್ಕೂ ಸಾಕ್ಷಾತ್ ಶಿವನ ಅಂಶದಿಂದ ಅಗ್ನಿಯಲ್ಲಿ ಉದ್ಭವಿಸಿದ ಶ್ರೀ ವೀರಭದ್ರೇಶ್ವರನು ದಕ್ಷಬ್ರಹ್ಮ ಪ್ರಜಾಪತಿಯ ಯಜ್ಞವನ್ನು ಧ್ವಂಸ ಗೊಳಿಸಿದ ಪೌರಾಣಿಕ ಹಿನ್ನೆಲೆಗಳ ವಡಬುಗಳ ಉಧ್ಘಾರದಿಂದ ಖಡ್ಗವಂ ಝಳಪಿಸುತ್ತಾ ಶಸ್ತ್ರಗಳಂ ಹಾಕಿಕೊಳ್ಳುತ್ತ ಪುರವಂತರು ಭಕ್ತಿಯಿಂದಲ್ಲಿ ಪಾವಡಗಳಂ ತೊರಿಸುತ್ತ ಪುರವಂತರು ಕುಣಿತವು ನೋಡುಗರ ಮನಸೆಳೆಯಿತು. ಭಕ್ತರು ತಮ್ಮ ತಮ್ಮ ಹಲವಾರು ನಂಬಿಕೆಗಳಿಂದ ಪಲ್ಲಕ್ಕಿ ಜೋತೆಗೆ ಅಗ್ನಿಯಲ್ಲಿ ಭಕ್ತಿಯಿಂದಲ್ಲಿ ನಡೆಯು ವದರ ಮೂಲಕ ಉತ್ಸವವು ಸಂಪನ್ನಗೊಂಡಿತು. ಶ್ರೀ ವೀರಭದ್ರೇಶ್ವರ ದೇವಾಲಯದ ವಿಶೇಷತೆಯೆನಂದರೆ ಪುರಾತನ ಕಾಲದಲ್ಲಿ ವೀರಭದ್ರೇಶ್ವರ ದೇವರ ಎದುರಿಗೆ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ ವಿದೆ ಆಂಜನೇಯ ಸ್ವಾಮಿ ದೇವಸ್ಥಾನ ದಲ್ಲಿ ನಿಂತರೆ ಶ್ರೀ ವೀರಭದ್ರೇಶ್ವರ ದರುಶನ ಪಡೆಯಬಹುದು ಮತ್ತು ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ನಿಂತರೆ ಶ್ರೀ ಆಂಜನೇಯ ಸ್ವಾಮಿ ದೇವರ ದರುಶನ ಪಡೆಯಬಹುದು ಇದು ಪುರಾತನ ಕಾಲದಲ್ಲಿ ವಿದ್ವಾಂಸರು ಭಕ್ತಿ ಶ್ರದ್ಧೆ ಯಿಂದ ಕಟ್ಟಿರುವ ದೇವಾಲಯಗಳನ್ನು ನಾವು ಇಲ್ಲಿ ಕಾಣಬಹುದು ಇಂತಹ ಪವಿತ್ರ ಧಾರ್ಮಿಕ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ನಾವು ಭಕ್ತಿ ಶ್ರದ್ಧೆ ಯಿಂದ ಉಳಿಸಿಕೊಂಡು ಹೊಗುವದು ನಮ್ಮೆ ಲ್ಲರ ಅಧ್ಯಕರ್ತವೆ ವೆಂದು ಭಕ್ತರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಬಂದಭಕ್ತರಿಗೆ ಮಹಾ ಪ್ರಸಾದ ಅನ್ನ ಸಂತರ್ಪಣೆ ನಡೆಯಿತು ಬಿಜೆಪಿ ಮುಖಂಡರಾದ ನಾಗರತ್ನ ಕುಪ್ಪಿ. ಮತ್ತು ಬಾಬುರಾವ್ ಚಿಂಚನಸೂರ ದಂಪತಿಗಳು ದೇವರ ದರುಶನ ಪಡೆದರು ಸಾಮಾಜದ ಮುಖಂಡರು ಸೇರಿದಂತೆ ಅಪಾರ ಭಕ್ತಜನರು ಉತ್ಸವದಲ್ಲಿ ಪಾಲ್ಗೊಂಡಿದ್ದರು ಪೆÇೀಲಿಸ್ ಸಿಬ್ಬಂದಿಯ ವರು ಇದ್ದರು.