ಗುರುಮಠಕಲ್ ನಲ್ಲಿ ಹಮ್ಮಿಕೊಂಡ ರಾಷ್ಟ್ರೀಯ ಜಂತು ಹುಳು ನಿವಾರಣಾ ದಿನ

ಗುರುಮಠಕಲ್:ನ.24:ವಿದ್ಯಾರ್ಥಿ ಗಳು ಮಕ್ಕಳು ಹಾಗೂ ಯುವ ಜನರು ಪೌಷ್ಟಿಕಾಂಶದ ಆಹಾರದ ಪದಾರ್ಥಗಳನ್ನು ಸೇವಿಸಬೇಕು ವಯಕ್ತಿಕ ಸ್ವಚ್ಛತೆಗೆ ಒತ್ತು ನೀಡುವುದರ ಜೊತೆಗೆ ಕುಡಿಯಲು ಶುದ್ಧ ವಾದ ನೀರನ್ನು ಬಳಸಬೇಕು.ಜಂತುಹುಳು ಸೊಂಕಿನಿಂದ ರಕ್ತಹೀನತೆ. ಪೌಷ್ಟಿಕಾಂಶದ ಕೊರತೆ ನಿಶ್ಯಕ್ತಿ ಉಂಟಾಗುತ್ತದೆ ಹೊಟ್ಟೆನೋವು ವಾಕರಿಕೆ ವಾಂತಿ ಅತಿಸಾರ ಕಂಡುಬರುತ್ತದೆ ಅಲ್ಬಂಡ ಜೋಲ್ ಮಾತ್ರೆಗಳು ಸೇವಿಸುವುದರಿಂದ ರಕ್ತಹೀನತೆ ಪೆÇೀಷಕಾಂಶ ಹೀರಿಕೆಯನ್ನು ಸುಧಾರಿಸುತ್ತದೆ ಎಂದು ಹೇಳಿದರು.ಪಟ್ಟಣದಲ್ಲಿ ಎನ್ ಎಸ್ ಎಸ್ ಎಸ್ ಘಟಕದ ವತಿಯಿಂದ ರಾಷ್ಟ್ರೀಯ ಜಂತು ಹುಳು ನಿವಾರಣಾ ದಿನಾಚರಣೆ ಯ ಕಾರ್ಯಕ್ರಮ ದಲ್ಲಿ ಮಾತನಾಡಿದ ಅವರು ಹಣ್ಣು ಮೊಟ್ಟೆ ಹಾಲು ಶುದ್ಧ ವಾದ ತರಕಾರಿಗಳು ಸೇರಿದಂತೆ ಪೌಷ್ಟಿಕಾಂಶದ ಆಹಾರ ಪದಾರ್ಥಗಳನ್ನು ಸೇವಿಸಬೇಕು ಎಂದು ಡಾಕ್ಟರ್ ಬಾಗರೆಡ್ಡಿ ಮನವಿ ಮಾಡಿದರು. ಮುಖ್ಯ ಗುರುಗಳು ಮಲ್ಲಿಕಾರ್ಜುನ ಬಳ್ಳಾರ್.ವೈಧ್ಯಾದಿಕಾರಿ ಶಿವಪ್ರಸಾದ್ ಮೈತ್ರಿ.ಶಿಕ್ಷಕಿ ಹೇಮಲತ. ಎಸ್ ಬಿಐ ಎಮ್ ಸದಸ್ಯ ಪದ್ಮಮ್ಮ ಸೇರಿದಂತೆ ಸಿಬ್ಬಂದಿ ಯವರು ಮುದ್ದು ಮಕ್ಕಳು ಇದ್ದರು