
ಗುರುಮಠಕಲ್:ಎ.11: ತಾಲೂಕಿನ ಗುರುಮಠಕಲ್ ಪಟ್ಟಣದಲ್ಲಿ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಸಶಸ್ತ್ರ ಸೀಮಾ ಬಲ ಸೇನಾಪಡೆಯಿಂದ ಹಾಗೂ ಪೆÇಲೀಸ್ ಇಲಾಖೆಯಿಂದ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಪಥಸಂಚಲನಕ್ಕೆ ಗುರುಮಠಕಲ್ ಸಿಪಿಐ ಅಂಬರಾಯ ಕಾಮನಮನಿ ಅವರ ನೇತೃತ್ವದಲ್ಲಿ ಪಥ ಸಂಚಲನಕ್ಕೆ ಚಾಲನೆ ನೀಡಿದರು. ಭಾರತೀಯ ಹೆಮ್ಮೆಯ ಪ್ಯಾರಾ ಮಿಲಿಟರಿ ಪಡೆ ಗುರುಮಠಕಲ್ ನಗರದ ಪ್ರಮುಖ ಬೀದಿಗಳಲ್ಲಿ ಪರೇಡ್ ಮೂಲಕ ಸಂಚರಿಸಿದ ಅವರಿಗೆ ಈ ಸಂದರ್ಭದಲ್ಲಿ ಊರಿನ ನಾಗರೀಕರು ಹೂ ಮಳೆ ಗಯ್ದು ಭಾರತ್ ಮಾತೆಯ ಜಯ ಘೋಷಣೆ ಕೂಗುತ್ತಾ ಅವರನ್ನು ಗೌರವಿಸಿದ್ದರು. ವೀರ ಯೋಧರು ದೇಶಕ್ಕೆ ತಮ್ಮ ಪ್ರಾಣವನ್ನೇ ಒತ್ತೆಯಿಟ್ಟು ತಮ್ಮೆಲ್ಲ ಆಸೆಗಳನ್ನು ಬದಿಗಿಟ್ಟು ಹಗಲಿರುಳೆನ್ನದೆ ಕಾದಾಡಿ ವೈರಿಯನ್ನು ಕಂಡು ಅಂಜಿಕೆಗೆ ಒಳಗಾಗದೆ ತಮ್ಮ ಗುಂಡಿಯಲ್ಲಿ ಅಪಾರ ರೋಷವನ್ನು ತುಂಬಿಕೊಂಡು ಯಾರೇ ಬಂದರೂ ಅವರನ್ನು ಸೋಲಿಸಿ, ಭಾರತದ ವಿಜಯಪತಾಕೆಯನ್ನು ಮುಗಿಲೆತ್ತರಕ್ಕೆ ಹಾರಿಸಿ ಹೆಮ್ಮೆಯಿಂದ ನಿಲ್ಲುವರು ಈ ವೀರ ಯೋಧರಿಗೆ ಸಾರ್ವಜನಿಕರು ಮನ ಪೂರ್ವಕವಾಗಿ ಸ್ವಾಗತ ಕೋರಿದರು. ಗುರುಮಠಕಲ್ ಪಟ್ಟಣದ ತಹಶೀಲ್ದಾರ್ ಕಾರ್ಯಾಲಯದಿಂದ ಆರಂಭಗೊಂಡ ಪತಸಂಚಲನ ಬಸ್ ಸ್ಟ್ಯಾಂಡ್ ಮತ್ತು ಪಟ್ಟಣದ ಪ್ರಮುಖ ಬೀದಿಯ ಮೂಲಕ ಸಾಗಿ ಪ್ರಮುಖ ರಸ್ತೆಗಳ ಮೂಲಕ ಸೇನಾಪಡೆಯ ಸಿಬ್ಬಂದಿಯವರು ಪತಸಂಚಲನ ಮಾಡಿದರು. ಈ ವೇಳೆ ಯಾವುದೇ ಭೀತಿ ಇಲ್ಲದೆ ಮತದಾನ ಮಾಡಬೇಕು ಸಾರ್ವಜನಿಕರೊಂದಿಗೆ ನಾವಿದ್ದೇವೆ ಎನ್ನುವ ಸಂದೇಶವನ್ನು ಸಾರಿದರು. ಈ ವೇಳೆ ಪಿ ಐ ಅಂಬರಾಯ ಕಾಮನಮನಿ ಸೇರಿದಂತೆ ಪೆÇಲೀಸ್ ಸಿಬ್ಬಂದಿ ಹಾಗೂ ಸೇನಾ ಪಡೆ ಪಾಲ್ಗೊಂಡಿದ್ದರು.