ಗುರುಮಠಕಲ್ ತಾಲೂಕು ಕಚೇರಿಗೆ ಜಿಲ್ಲಾಧಿಕಾರಿ ಭೇಟಿ ಸಾರ್ವಜನಿಕರಿಂದ ಅಹವಾಲು ಸ್ವೀಕಾರ

ಗುರುಮಠಕಲ್:ಸೆ.14: ತಾಲೂಕಿನ ಹಳ್ಳಿಗಳಲ್ಲಿ ಅತಿಯಾದ ಮಳೆಯಿಂದ ಉಂಟಾದ ಬೆಳೆ ಹಾನಿಯ ಸಮಿಕ್ಷೆಯನ್ನು ಕಂದಾಯ ಮತ್ತು ಕೃಷಿ ಇಲಾಖೆ ಜಂಟಿ ಸಮೀಕ್ಷೆ ಕಾರ್ಯ ಕೈಗೊಂಡು ಪೂರ್ಣ ಗೊಳಿಸಿ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಗುರುತಿಸಿ ಶಿಕ್ಷಣದಿಂದ ವಂಚಿತರಾಗದಂತೆ ನೋಡಿ ಕೊಳ್ಳಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸ್ನೇಹಲ್ ಆರ್ ಅವರು ಸೂಚಿಸಿದರು. ಗುರುಮಠಕಲ್ ತಹಶೀಲ್ದಾರ್ ಕಚೇರಿಯಲ್ಲಿ ಮಂಗಳವಾರ ಜಿಲ್ಲಾಧಿಕಾರಿಗಳ ನಡೆ ಹಳ್ಳಿಕಡೆ ಕಾರ್ಯಕ್ರಮದ ಮುಂದುವರೆದ ಭಾಗವಾಗಿ ಬೇಟಿ ನೀಡಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಹಾಗೂ ಅವರ ಕಾರ್ಯವೈಖರಿ ಮತ್ತು ಸಲ್ಲಿಕೆಯಾದ ಅರ್ಜಿಗಳನ್ನು ಖುದ್ದು ಪರಿಶೀಲಿಸಿ ಅವರು ಮಾತನಾಡಿದರು.
ಗುರುಮಠಕಲ್ ತಾಲೂಕಿನ ಸೂಮಾರು 3029 ಹೆಕ್ಟೇರ್ಸ್ ಬೆಳೆ ಹಾನಿಯಾಗಿದೆ ಶೀಘ್ರದಲ್ಲೇ ಸಮಿಕ್ಷೆ ಕಾರ್ಯ ಮುಗಿಸುತ್ತೇವೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಸಮಯಕ್ಕೆ ಸರಿಯಾಗಿ ಬಸ್ ಗಳ ವ್ಯವಸ್ಥೆಮಾಡಲು ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು . ನಗರದ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಯಾಗದಂತೆ ಕ್ರಮ ವಹಿಸಿ ಸ್ವಚ್ಛತೆ ಕಾಪಾಡಿ ನೈರ್ಮಲ್ಯ ಕಾಪಾಡುವಲ್ಲಿ ವಿಫಲ ವಾಗಬರದು ಚರಂಡಿಗಳ ಸ್ವಚ್ಛತೆ ಸೊಳ್ಳೆ ನಿಯಂತ್ರಣ ಮಾಡಬೇಕು ಸಾರ್ವಜನಿಕರ ದೂರುಗಳಿಗೆ ಅಧಿಕಾರಿಗಳು ಸ್ಪಂದಿಸುವದು ನಿಮ್ಮ ಜವಾಬ್ದಾರಿಯಾಗಿದೆ ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.
ಸೌದಿ ಅರೇಬಿಯಾದಲ್ಲಿ ಕಟ್ಟಡ ಕೆಲಸ ಮಾಡುತ್ತಿರುವಾಗ ತಾಲೂಕಿನ ಪುಟಪಾಕ ತಾಂಡಾದ ಕಾರ್ಮಿಕ ನಾಗ್ಯ ಎಂಬಾತ ಮರಣ ಹೊಂದಿದ ರಿಂದ ಅತನ ಕುಟುಂಬಕ್ಕೆ ಸೌದಿ ಅರೇಬಿಯಾ ಸರ್ಕಾರದ ಧನಸಹಾಯ ಮಾಡಿತ್ತು ಆ ಹಣದ ಚೆಕ್ ನ್ನು ಜಿಲ್ಲಾಧಿಕಾರಿ ಯವರು ಮೃತನ ಕುಟುಂಬದ ಪತ್ನಿ ವಿಜ್ಜಿ ಬಾಯಿ ಸದಸ್ಯರಿಗೆ ವಿತರಿಸಿದರು. ಕಂದಾಯ ಗ್ರಾಮ. ಮಾಸಾಶನ. ತ್ರೀ ಆಂಡ್ ನೈನ್ ಮಿಸ್ ಮ್ಯಾಚ್ ಪೈಕಿ ಪಹಣಿ. ಮೋಜನಿ ಕಡತಗಳು ಆರ್ ಟಿ ಸಿ ಎಜೆ ಎಸ್ಕೆ ತಂತ್ರಾಂಶ ದಡಿ ಸ್ವೀಕೃತ ವಾದ ಅರ್ಜಿಗಳು ನವೋದಯ ಆಫ್ ಮತ್ತು ಸ್ಮಶಾನ ಭೂಮಿಗಳ ಲಭ್ಯತೆ ಬಗ್ಗೆ ಹಾಗೂ ಸಕಲ ಯೋಜನೆಗಳ ಪ್ರಗತಿಯ ಮಾಹಿತಿ ಪಡೆದರು. ಸಕಾಲ ಅಡಿ ನೋಂದಾಯಿತ ಸೇವೆಗಳನ್ನು ಆದ್ಯತೆಯಲ್ಲಿ ಒದಗಿಸಿ ಪ್ರಗತಿ ಕುಂಠಿತವಾಗದಂತೆ ಪ್ರಗತಿ ಸಾಧಿಸ ಬೆಕೆಂದು ಜಿಲ್ಲಾಧಿಕಾರಿಗಳು ಸೂಚಿಸಿದರು. ತಾಲೂಕಿನ ಇಂದಿರಾ ನಗರಕ್ಕೆ ಜಿಲ್ಲಾಧಿಕಾರಿ ಭೇಟಿ ಪರಿಶೀಲನೆ. ಇಂದಿರಾ ನಗರದಲ್ಲಿ ವಾಸಿಸುವ ಅಲೆಮಾರಿ ಜನಾಂಗದವರ ಕಾಲೋನಿಗೆ ಜಿಲ್ಲಾ ಧಿಕಾರಿ ಭೇಟಿ ನೀಡಿ ಅಲ್ಲಿನ ಮೂಲಭೂತ ಸೌಕರ್ಯಗಳನ್ನು ಪರಿಶೀಲಿಸಿ ಎಲ್ಲಾ ಕುಟುಂಬದ ಮಕ್ಕಳ ಆರೋಗ್ಯವನ್ನು ಪರಿಕ್ಷಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು. ಅಲ್ಲಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಹಾಗೂ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಸರಿಯಾದ ಸಮಯಕ್ಕೆ ಶಿಕ್ಷಕರು ಕಡ್ಡಾಯವಾಗಿ ಹಾಜರಿರಬೇಕು ಗೈರಾದವರಿಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು. ಅಂಗನವಾಡಿಯಲ್ಲಿ ಮಕ್ಕಳಿಗೆ ಸರ್ಕಾರ ದಿಂದ ಸಿಗುವ ಉತ್ತಮ ಗುಣಮಟ್ಟದ ಆಹಾರ ವನ್ನು ವಿತರಿಸಬೇಕು ಎಂದು ಕಟ್ಟು ನಿಟ್ಟಾಗಿ ಜಿಲ್ಲಾಧಿಕಾರಿ ಸೂಚಿಸಿದರು. ಅನಂತರ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ನಾರಾಯಣಪುರ ಬೇಸ್ ವಾರ್ಡಗೆ ಭೇಟಿ ನೀಡಿ ಅಲ್ಲಿನ ಮಕ್ಕಳ ಕಲಿಕಾ ಮಟ್ಟವನ್ನು ಖುದ್ದಾಗಿ ಪರಿಕ್ಷಿಸಿದರು.
ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಗುರುತಿಸಿ ಅವರಿಗೆ ಶಾಲೆಯಲ್ಲಿ ನೊಂದಾಯಿಸಿ ಕೊಂಡು ಶಿಕ್ಷಣ ನೀಡಿ ಮಕ್ಕಳನ್ನು ಶಿಕ್ಷಣದಿಂದ ವಂಚಿತರಾಗದಂತೆ ನೋಡಿ ಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು. ಪರಿಶಿಷ್ಟ ಅಲೆಮಾರಿ ಅರೆ ಅಲೆಮಾರಿ ಸಮುದಾಯದ ಅಧ್ಯಕ್ಷರು ಆನಂದ ಭಜಂತ್ರಿ ಗೋಪಾಲಪುರ ಅವರು ಅರ್ಜಿ ಸಲ್ಲಿಸಿದರು. ಈ ಸಂದರ್ಭದಲ್ಲಿ ತಹಶೀಲ್ದಾರ್ ಶರಣಬಸವ ರಾಣಪ್ಪ. ಗ್ರೇಡ್-2 ತಹಶೀಲ್ದಾರ್ ನರಸಿಂಹ ಸ್ವಾಮಿ. ಪುರಸಭೆ ಮುಖ್ಯಾಧಿಕಾರಿ ಶ್ರೀ ಮತಿ ಭಾರತಿ ಎಸ್ ದಂಡೋತಿ ಹಾಗೂ ಇಲಾಖೆ ಗಳ ಅಧಿಕಾರಿಗಳು ಸಂಘ ಸಂಸ್ಥೆಗಳ ಅಧ್ಯಕ್ಷರು ಪದಾಧಿಕಾರಿಗಳು ಮುಖಂಡರು ಇತರರು ಭಾಗವಹಿಸಿದ್ದರು.