ಗುರುಭಕ್ತಿ ಜ್ಯೋತಿಷ್ಯ ಕೇಂದ್ರಕ್ಕೆ ಏ. 2ರಂದು ದ್ವಿತೀಯ ವಾರ್ಷಿಕೋತ್ಸವ ಸಂಭ್ರಮ

ಕಲಬುರಗಿ,ಮಾ.28:ನಗರದ ಹುಮ್ನಾಬಾದ್ ರಸ್ತೆಯಲ್ಲಿರುವ ಶ್ರೀ ಕೆಂಚಬಸವ ಶಿವಾನುಭವ ಮಂಟಪದಲ್ಲಿ ಏಪ್ರಿಲ್ 2ರಂದು ಬೆಳಿಗ್ಗೆ 11 ಗಂಟೆಗೆ ಗುರುಭಕ್ತಿ ಜ್ಯೋತಿಷ್ಯ ಕೇಂದ್ರದ ಎರಡನೇ ವರ್ಷದ ವಾರ್ಷಿಕೋತ್ಸವ ಹಾಗೂ ಮೂರನೇ ವರ್ಷದ ಪ್ರಾರಂಭೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಸಿದ್ಧೇಶ್ವರ್ ಶಾಸ್ತ್ರಿಗಳು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಏಪ್ರಿಲ್ 2ರಂದು ಭಾನುವಾರ ಸಾಲಬಾಧೆಗೆ ಕಾರಣ ಮತ್ತು ಪರಿಹಾರಗಳು ಎಂಬ ವಿಷಯದ ತರಗತಿಗಳನ್ನು ಬೆಂಗಳೂರಿನ ಪ್ರಖ್ಯಾತ ಜ್ಯೋತಿಷ್ಯ ಕಾಳಿಸುತ ಪ್ರವೀಣ್ ಗುರೂಜಿ ಅವರಿಂದ ಏರ್ಪಡಿಸಲಾಗಿದೆ ಎಂದರು.
ಇಚ್ಛೆಯುಳ್ಳವರು ತರಗತಿಗೆ ಬರಬಹುದು. ತರಗತಿಯ ಶುಲ್ಕ 800ರೂ.ಗಳನ್ನು ನಿಗದಿಪಡಿಸಲಾಗಿದೆ. ಬೆಳಿಗ್ಗೆ 11ರಿಂದ ಸಂಜೆ 6 ಗಂಟೆಯವರೆಗೆ ತರಗತಿಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದ ಪಾವನ ಸಾನಿಧ್ಯವನ್ನು ಶ್ರೀ ಶರಣಬಸವೇಶ್ವರ್ ಮಹಾದಾಸೋಹ ಸಂಸ್ಥಾನದ ಚಿ. ದೊಡ್ಡಪ್ಪ ಅಪ್ಪಾ, ಮುತ್ಯಾನ್ ಬಬಲಾದ್‍ನ ಗುರುಪಾದಲಿಂಗ ಸ್ವಾಮೀಜಿ, ಚವದಾಪೂರಿ ಹಿರೇಮಠದ ಡಾ. ರಾಜಶೇಖರ್ ಶಿವಾಚಾರ್ಯರು, ಹಿರೇರೋಜಾ ಹಿರೇಮಠದ ಕೆಂಚಬಸವ ಶಿವಾಚಾರ್ಯರು, ಫಿರೋಜಾಬಾದ್, ಸಂತೆಕೆಲ್ಲೂರಿನ ಘನಮಠೇಶ್ವರ್ ಮಠದ ಗುರುಬಸವ ಮಹಾಸ್ವಾಮಿಗಳು ವಹಿಸುವರು ಎಂದು ಅವರು ತಿಳಿಸಿದರು.
ತರಗತಿಯಲ್ಲಿ ಆಸಕ್ತಿಯುಳ್ಳವರು ಪ್ರತಿ ತಿಂಗಳು ನಡೆಯುವಂತಹ ತರಗತಿಗಳಲ್ಲಿ ಭಾಗವಹಿಸಿ ಸದುಪಯೋಗ ಮಾಡಿಕೊಳ್ಳಬೇಕು ಎಂದು ಅವರು ಕೋರಿದರು. ಸುದ್ದಿಗೋಷ್ಠಿಯಲ್ಲಿ ಸಂಧ್ಯಾ ಕುಲಕರ್ಣಿ, ಗಂಗಾಧರ್ ಅಗ್ಗಿಮಠ್, ಶಿವಲಿಂಗಯ್ಯಸ್ವಾಮಿ, ಸೋಮಯ್ಯ ಮಾದನಹಿಪ್ಪರಗಾ, ಮಲ್ಲಯ್ಯಸ್ವಾಮಿ, ವಿಜಯಕುಮಾರ್ ಎಸ್. ಹಿರೇಮಠ್ ಮುಂತಾದವರು ಉಪಸ್ಥಿತರಿದ್ದರು.