ಗುರುಬಸವ ಪಟ್ಟದ್ದೇವರಿಗೆ ಸಂಯಮ ಪ್ರಶಸ್ತಿ ಪ್ರದಾನ

ಭಾಲ್ಕಿ:ಜ.19: ಇಲ್ಲಿಯ ಹಿರೇಮಠ ಸಂಸ್ಥಾನದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಅವರಿಗೆ ಸಂಯಮ ಪ್ರದಾನ ಮಾಡಲಾಗಿದೆ.

ಬಾಗಲಕೋಟ ಜಿಲ್ಲೆಯ ಇಳಕಲ್‍ನ ವಿಜಯ ಮಹಾಂತೇಶ ಶಿವಯೋಗಿಗಳ ಅನುಭವ ಮಂಟಪದಲ್ಲಿ ರಾಜ್ಯ ಮದ್ಯಪಾನ ಸಂಯಮ ಮಂಡಳಿ ವತಿಯಿಂದ ಬುಧವಾರ ಆಯೋಜಿಸಿದ್ದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ 2020-21ನೇ ಸಾಲಿನ ಸಂಯಮ ಪ್ರಶಸ್ತಿಯನ್ನು ಪೀಠಾಧಿಪತಿ ಗುರುಬಸವ ಪಟ್ಟದ್ದೇವರಿಗೆ ನೀಡಿ ಗೌರವಿಸಲಾಗಿದೆ.

ಚಿತ್ತರಗಿ-ಇಳಕಲ್‍ನ ವಿಜಯ ಮಹಾಂತೇಶ್ವರ ಸಂಸ್ಥಾನ ಮಠದ ಪೀಠಾಧಿಪತಿ ಗುರುಮಹಾಂತ ಸ್ವಾಮೀಜಿ, ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್ ನ ಅಧ್ಯಕ್ಷ ಡಾ.ಬಸವಲಿಂಗ ಪಟ್ಟದ್ದೇವರ ಸಾನ್ನಿಧ್ಯದಲ್ಲಿ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಮಲ್ಲಿಕಾರ್ಜುನ ತುಬಾಕಿ ಶ್ರೀಗಳಿಗೆ ಪ್ರಶಸ್ತಿ, ನಗದು 1 ಲಕ್ಷ ರೂ ಚೆಕ್ ಮತ್ತು ಫಲಕ ನೀಡಿ ಗೌರವಿಸಿದರು.

ಈ ಸಂದರ್ಭದಲ್ಲಿ ಸಿದ್ಧಲಿಂಗ ಸ್ವಾಮೀಜಿ, ಚೆನ್ನಮಲ್ಲಿಕಾರ್ಜುನ ಸ್ವಾಮೀಜಿ, ಆಯ್.ಆರ್.ಮಠಪತಿ, ಬಸವಲಿಂಗ ಸ್ವಾಮೀಜಿ, ಬಸವಾನಂದ ಸ್ವಾಮೀಜಿ, ನಗರ ಸಭೆ ಅಧ್ಯಕ್ಷ ಲಕ್ಷ್ಮಣ, ಮದ್ಯಪಾನ ¸ ಮಂಡಳಿ ಕಾರ್ಯದರ್ಶಿಶಂಕರೆಪ್ಪ ಭಾಲ್ಕಿ ಬಸವೆಶ್ವರ ಬ್ಯಾಂಕ್ ಅಧ್ಯಕ್ಷ ಶಶಿಧರ ಕೋಸಂಬೆ, ರವಿ ಬೋರವೆಲ್ಸ್ ಮಾಲೀಕ ರವೀಂದ್ರ ಚಿಡಗುಪ್ಪೆ, Àಂಯಮ ಔರಾದಾರ್ ಜಾನಪದ ಪರಿಷತ್ತು ಅಧ್ಯಕ್ಷ ಡಾ.ಸಂಜೀವಕುಮಾರ ಜುಮ್ಮಾ, ಹಾಸ್ಯ ಕಲಾವಿದ ನವಲಿಂಗ ಪಾಟೀಲ್, ಧನರಾಜ ಬಂಬುಳಗೆ ಸೇರಿದಂತೆ ಹಲವರು ಇದ್ದರು.