ಗುರುಪೂರ್ಣಿಮೆ ಆಚರಣೆ

ಲಕ್ಷ್ಮೇಶ್ವರ,ಜು.4: ತಾಲೂಕಿನ ಶಿಗ್ಲಿ ಗ್ರಾಮದ ಸಾಮಾಜಿಕ ಕಾರ್ಯಕರ್ತ ಹಾಗೂ ಧಾರ್ಮಿಕ ಪ್ರೇಮಿ ವೀರಣ್ಣ ಪವಾಡದವರ ನಿವಾಸದಲ್ಲಿ ಗುರುಪೂರ್ಣಿಮೆಯ ದಿನವನ್ನು ಅತ್ಯಂತ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಅವರು ಮಾತನಾಡಿ ಭಾರತೀಯ ಪರಂಪರೆ ಸಂಸ್ಕೃತಿ ಇವುಗಳಲ್ಲಿ ಆದಿ ಅನಾದಿಕಾಲದಿಂದಲೂ ಗುರು ಮತ್ತು ಶಿಷ್ಯರ ಸಂಬಂಧ ಹಾಸು ಹೊಕ್ಕಾಗಿದೆ ಯಾವುದೇ ಒಂದು ಸಮಾಜ ಒಂದು ಧರ್ಮ ಉನ್ನತ ಸ್ಥಾನ ಹೊಂದಲು ಅಭಿವೃದ್ಧಿ ಹೊಂದಲು ಗುರುವಿನ ಮಾರ್ಗದರ್ಶನ ಬೇಕು ಅದಕ್ಕಾಗಿಯೇ ಸಾಧುಗಳು ಸಂತರು ಋಷಿ ಮುನಿಗಳು ದಾರ್ಶನಿಕರು ತಮ್ಮ ಪ್ರತಿಯೊಂದು ಗುರುಕುಲಗಳಲ್ಲಿ ಶಿಷ್ಯರೊಂದಿಗೆ ಬೆರೆತು ಅವರನ್ನು ಎಲ್ಲ ರೀತಿಯಿಂದಲೂ ತಯಾರು ಮಾಡುವ ಒಂದು ಕಾಯಕವನ್ನು ಹೊಂದಿದ್ದರು.
ನಮ್ಮ ಸಮಾಜದಲ್ಲಿ ದೇವರ ನಂತರ ಗುರುವಿನದೇ ಮಹತ್ವದ ಸ್ಥಾನ ದೇವರು ಒಂದೊಮ್ಮೆ ಕೈಬಿಟ್ಟರು ಗುರು ಸನ್ಮಾರ್ಗ ದತ್ತ ಕೊಂಡೆಯುತ್ತಾನೆ ಆದ್ದರಿಂದ ಇಂದಿನ ಯುವಕರು ವಿದ್ಯಾರ್ಥಿಗಳು ಜೀವನದಲ್ಲಿ ಗುರುಗಳ ಆದರ್ಶಗಳನ್ನು ಪಾಲಿಸಿಕೊಂಡು ಉದಾತ ಧ್ಯೇಯಗಳೊಂದಿಗೆ ಜೀವನ ಸಾಗಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ನಿರ್ವಲಾದೇವಿ ಪವಾಡ ಅನನ್ಯ ಪವಾಡ ವೀರಸೋಮೇಶ್ವರ ಪವಾಡ ಸೇರಿದಂತೆ ಅನೇಕರಿದ್ದರು.