ಗುರುಪೂರ್ಣಿಮೆ: ಅಖಿಲ ಭಾರತೀಯ ಬ್ರಾಹ್ಮಣ ಮಹಾಸಂಘದಿಂದ ಅರ್ಚಕರಿಗೆ ಸನ್ಮಾನ

ಕಲಬುರಗಿ:ಜು.14:ನಗರದ ನ್ಯೂ ಜಯತೀರ್ಥ ಕಲ್ಯಾಣ ಮಂಟಪದಲ್ಲಿ ಗುರು ಪೂರ್ಣಿಮೆ ಅಂಗವಾಗಿ ಅಖಿಲ ಭಾರತೀಯ ಬ್ರಾಹ್ಮಣ ಮಹಾಸಂಘದ ವತಿಯಿಂದ ಕಲಬುರಗಿ ನಗರದ ವಿವಿಧ ದೇವಸ್ಥಾನಗಳ 101 ಅರ್ಚಕರನ್ನು ಗುರುಪೂರ್ಣಿಮೆ ಅಂಗವಾಗಿ ಸನ್ಮಾನಿಸಿ ಗೌರವಿಸಲಾಯಿತು.

ಪ್ರಸ್ತಾವಿಕವಾಗಿ ಮಾತನಾಡಿದ ಸಂಘಟನೆಯ ಜಿಲ್ಲಾಧ್ಯಕ್ಷರಾದ ರವಿ ಲಾತೂರಕರ್ ಮಾತನಾಡಿ,ದೇಶ ಕಾಯುವ ಯೋಧ ಅನ್ನ ನೀಡುವ ರೈತ ಅದರಂತೆ ಅರ್ಚಕರು ಸರ್ವೇ ಜನಾಃ ಸುಖಿನೋ ಭವಂತು ಎಂದು ಮಂದಿರದಲ್ಲಿ ದೇವರ ಪೂಜೆ ಮಾಡುವ ಮೂಲಕ ಸರ್ವ ಜನಾಂಗದವರಿಗೆ ಒಳತನ್ನು ಬಯಸುತ್ತಾರೆ. ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಅರ್ಚಕರನ್ನು ಗುರುಪೂರ್ಣಿಮೆ ಅಂಗವಾಗಿ ಸನ್ಮಾನಿಸಲಾಗುತ್ತದೆ ಎಂದರು ಮತ್ತು ಪ್ರತಿ ರವಿವಾರ ನಗರದ ಎಲ್ಲಾ ದೇವಸ್ಥಾನಗಳಲ್ಲಿ ಸಂಜೆ ಮಹಾ ಮಂಗಳಾರತಿ ಮಾಡಿ ತಮ್ಮ ಬಡಾವಣೆಯ ನಾಗರಿಕರೆಲ್ಲರನ್ನು ಮಹಾಮಂಗಳಾರತಿಯಲ್ಲಿ ಭಾಗವಹಿಸುವಂತೆ ಪ್ರೇರೇಪಿಸಬೇಕು ಎಂದು ಅರ್ಚಕರಲ್ಲಿ ವಿನಂತಿಸಿದರು

ಮುಖ್ಯ ಅತಿಥಿಯಾಗಿ ಮುಖ್ಯ ಅತಿಥಿಯಾದ ಯುನೈಟೆಡ್ ಆಸ್ಪತ್ರೆಯ ಡಾ. ವಿಕ್ರಂ ಸಿದ್ಧಾರೂಟಿ ಮಾತನಾಡಿ ವಿಪ್ರ ಸಮುದಾಯವು ವಿಪ್ರರು ಮೇಧಾವಿಗಳು ಸಮಾಜಕ್ಕೆ ಅಪಾರವಾದ ಕೊಡುಗೆಯನ್ನು ನೀಡಿರುವಂತಹ ಸಮುದಾಯ ಹಾಗೂ ಅವಕಾಶ ಸಿಕ್ಕಾಗಲಿಲ್ಲ ಶಕ್ತಿಮೀರಿ ವಿಪ್ರರ ಸೇವೆ ಮಾಡುತ್ತೇನೆ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಯುನೈಟೆಡ್ ಆಸ್ಪತ್ರೆಯಲ್ಲಿ ರಿಯಾಯಿತಿ ದರದಲ್ಲಿ ಚಿಕಿತ್ಸೆ ಪಡೆಯಬಹುದಾದ ವಿಪ್ರ ಕಾರ್ಡನ್ನು ಬಿಡುಗಡೆ ಮಾಡಿದರು.

ಅಖಿಲ ಭಾರತೀಯ ಬ್ರಾಹ್ಮಣ ಮಹಾಸಂಘದ ರಾಜ್ಯ ಕಾರ್ಯಾಧ್ಯಕ್ಷರಾದ ಶ್ರೀ ಜಿ ಆರ್ ಪ್ರದೀಪ್ ಅಧ್ಯಕ್ಷತೆ ವಹಿಸಿದ್ದರು, ನೂರು ಮುಖ್ಯ ಅತಿಥಿಯಾದ ಕಲಬುರ್ಗಿ ನಗರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ದಯಾಘನ್ ಧಾರವಾಡಕರ ಮಾತನಾಡಿದರು.

ವಿನುತ ಎಸ್ ಜೋಶಿ ಸ್ವಾಗತಿಸಿದರು ವಿನಾಯಕ್ ಕುಲಕರ್ಣಿ ವಂದಿಸಿದರು ಮತ್ತು ಶ್ರೀ ಉದಯದ ದೇಶಮುಖ ನಿರೂಪಿಸಿದರು.

ಈ ಸಂದರ್ಭದಲ್ಲಿ ಪ್ರಲ್ಹಾದ ಪೂಜಾರಿ, ರಾಜೀವ್ ಕುಲಕರ್ಣಿ, ಮುರುಳಿಧರ್ ಕರಲಗಿಕರ್, ಪ್ರಹ್ಲಾದ ಬುರ್ಲಿ, ಗುಂಡಾಚಾರ್ಯ ನರಬೊಳ್, ವೆಂಕಟೇಶ್ ಕುಲಕರ್ಣಿ, ಶಶಾಂಕ್ ಪೂಜಾರಿ, ಅನುಪ ಆಳಂದಕರ್ ಧನೇಶ್ ಮಾಲಗತ್ತಿ, ರಮೇಶ್ ಕುಲಕರ್ಣಿ,ವೆಂಕಟರಾವ್ ದೇಶಪಾಂಡೆ ಕಮಲನಾಭ ಓಂಕಾರ್, ಮಲ್ಲಾರಾವ್ ಕುಲಕರ್ಣಿ, ವಾಸುದೇವ ಕುಲಕರ್ಣಿ, ರಾಘವೇಂದ್ರ ಕುಲಕರ್ಣಿ, ರಮೇಶ್ ಜೋಶಿ ಗೋವಿಂದ ಕುಲಕರ್ಣಿ ಲಕ್ಷ್ಮಣ ಕುಲಕರ್ಣಿ ಶ್ಯಾಮಸುಂದರ್ ಕುಲಕರ್ಣಿ ಉಪಸ್ಥಿತರಿದ್ದರು.