ಗುರುಪೂರ್ಣಿಮಾ ಸಂಗೀತ ಕಾರ್ಯಕ್ರಮ

ಕಲಬುರಗಿ ಜು23: ಕೋಟನೂರಿನ ಪುಟ್ಟರಾಜ ಸಂಗೀತ ಭವನದಲ್ಲಿ ಕಲಬುರಗಿಯ ಪಂಡಿತ್ ಪಂಚಾಕ್ಷರಿ ಗವಾಯಿಗಳ ಸಂಗೀತ ಕಲಾ ಬಳಗ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗದಲ್ಲಿ ನಡೆದಾಡುವ ದೇವರು ಅಂಧರ ಬಾಳಿಗೆ ಬೆಳಕಾದ ಡಾ. ಪಂಡಿತ್ ಪುಟ್ಟರಾಜ ಕವಿ ಗವಾಯಿಗಳವರ ಗುರು ಪೂರ್ಣಿಮಾ ಅಂಗವಾಗಿ ಸಂಗೀತ ಕಾರ್ಯಕ್ರಮ ಜರಗಿತು. ಸಾನಿಧ್ಯವನ್ನು ಪೂಜ್ಯ ಚನ್ನಮಲ್ಲ ಸ್ವಾಮೀಜಿ ವಹಿಸಿದರು. ಕಾರ್ಯಕ್ರಮದ ಉದ್ಘಾಟನೆಯನ್ನು ಶಿವಾನಂದ ಖಜೂರ್ಗಿ ರವರು ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಸಿದ್ರಾಮಪ್ಪ ಪಾಟೀಲ್ ಕುಕನೂರು ರವರು ವಹಿಸಿದರು. ಕಾರ್ಯಕ್ರಮದಲ್ಲಿ ಸದಾನಂದ ಪೆರ್ಲ, ರಮೇಶ್ ಸುಂಬಡ, ದವಲತ್ರಾಯ ಪಾಟೀಲ್ ಮಾವುರ್, ಮಲ್ಲಿಕಾರ್ಜುನ ಟೆಂಗಳಿರವರು ಮುಖ್ಯ ಅಥಿತಿಗಳ ಸ್ಥಾನವನ್ನು ವಹಿಸಿದ್ದರು.
ಕಾರ್ಯಕ್ರಮದಲ್ಲಿ ನೀಲಮ್ಮ ಎ ಪಾಟೀಲ್ ರವರು ಹಿಂದೂಸ್ತಾನಿ ಸಂಗೀತ ನಡೆಸಿಕೊಟ್ಟರು.
ಲಕ್ಷ್ಮಣ ವಿಶ್ವಕರ್ಮ ಕುಕನೂರ ರವರು ಸುಗಮ ಸಂಗೀತ ಹಾಗೂ ವೀರಭದ್ರ ಹಡಗಿಲ್ ಹಾರೂತಿ ರವರು ಜಾನಪದ ಸಂಗೀತವನ್ನು ನಡೆಸಿಕೊಟ್ಟರು. ವೀರೇಶ್ ಗವಾಯಿ ಕಲ್ಲೂರ್, ಮಲ್ಲಯ್ಯ ಸ್ವಾಮಿ ಕೂಡಲಗಿ, ಬಸಯ್ಯ ಸ್ವಾಮಿ ಮಾವುರ ಮತ್ತು ಡಾ.ಸಿದ್ರಾಮಪ್ಪ ಪಾಟೀಲ್ ಮಂಗಲ ಸಂಗೀತ ನಡೆಸಿಕೊಟ್ಟರು ಎಂದು ಸಂಸ್ಥೆಯ ಅಧ್ಯಕ್ಷರು ತಿಳಿಸಿದ್ದಾರೆ.