ಗುರುಪಾದೇಶ್ವರ ಕಾಲೇಜು ವಿದ್ಯಾರ್ಥಿನಿಗೆ ಪದವಿ ವ್ಯಾಸಂಗಕ್ಕಾಗಿ 60 ಸಾವಿರ ರೂ.ದೇಣಿಗೆ

ಕಲಬುರಗಿ,ಜ.4- ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಕೇವಲ ಶೇ. 54 ಅಂಕ ಗಳಿಸಿ ದ್ವಿ. ಪಿ.ಯು.ಸಿ. ಗುರುಪಾದೇಶ್ವರ ಪದವಿಪೂರ್ವ ಕಾಲೇಜಿನಿಂದ ಶೇ. 90 ಅಂಕಗಳೊಂದಿಗೆ ಪಾಸು ಮಾಡಿದ ವೀರಮ್ಮ ಬೋರಡ್ಡಿ ಅವರ ಉನ್ನತ ವ್ಯಾಸಂಗಕ್ಕಾಗಿ 60 ಸಾವಿರ ರೂ.ಗಳ ದೆಣಿಗೆಯನ್ನು ದಾನಿಗಳು ನೀಡಿದರು.
ಬಡತನದ ಕಾರಣದಿಂದ ತಮ್ಮ ಉನ್ನತ ಶಿಕ್ಷಣವನ್ನು ಮೊಟಕು ಗೊಳಿಸಲು ನಿರ್ಧರಿಸಿದ್ದ ಪ್ರತಿಭಾವಂತ ವಿದ್ಯಾರ್ಥಿನಿ ವೀರಮ್ಮ ಅವರಿಗೆ ಆಕೆಯ ಪದವಿ ವ್ಯಾಸಂಗಕ್ಕಾಗಿ ಪ್ರತಿ ವರ್ಷ 20 ಸಾವಿರದಂತೆ ಒಟ್ಟು 60 ಸಾವಿರ ದೇಣಿಗೆಯನ್ನು ನೀಡಲು ನಿವೃತ್ತ ಪ್ರಾಧ್ಯಾಪಕರಾದ ಪ್ರೊ. ಎಸ್.ಎಲ್. ಪಾಟೀಲ ಮುಂದಾಗಿದ್ದಾರೆ.
ಪ್ರಥಮ ಕಂತಾಗಿ 20 ಸಾವಿರ ನಗದು ಹಣವನ್ನು ವಿದ್ಯಾರ್ಥಿನಿಗೆ ಕಾಲೇಜಿನಲ್ಲಿ ನೀಡಿ, ಬಡ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಗುರುಪಾದೇಶ್ವರ ಕಾಲೇಜು ಮುಂದಾಗಿದೆ ಎಂದು ಪದವಿಪೂರ್ವ ಶಿಕ್ಷಣ ಇಲಾಖೆಯ ನಿವೃತ್ತ ಉಪನಿರ್ದೇಶಕರಾದ ಬಸವರಾಜ ಡಿ. ಕಲಬುರಗಿಯವರು ವಿದ್ಯಾರ್ಥಿ
ಗೆ ಸತ್ಕರಿಸಿ ಬಡ ವಿದ್ಯಾರ್ಥಿಗಳ ಹಿತ ಕಾಪಾಡುತ್ತಿರುವ ಕಾಲೇಜಿನ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕಲ್ಯಾಣ ಕರ್ನಾಟಕ ಭಾಗದ ಮಕ್ಕಳಿಗೆ ಅತ್ಯಂತ ಕಡಿಮೆ ಶುಲ್ಕದಲ್ಲಿ ಗುಣಮಟ್ಟದ ಶಿಕ್ಷಣ ನೀಡುತ್ತಿರುವುದು ವೀರಮ್ಮಳೆ ಜೀವಂತ ನಿದರ್ಶನವೆಂದು ನಿವೃತ್ತ ಪ್ರಾಧ್ಯಾಪಕ ಎಸ್.ಎಲ. ಪಾಟೀಲರು ಪಾತಾಡಿ ಅಂಬಲಗಿಯವರ ಸಾಮಾಜಿಕ ಕಾಳಜಿ ಕಂಡು ಅವರ ಕಾಲೇಜಿನಲ್ಲಿ ಓದಲು ಬರುವ ವಿದ್ಯಾರ್ಥಿಗಳು ಅತ್ಯಂತ ಬಡತನದವನರು ಮತ್ತು ಇವರಲ್ಲಿ ಕಲಿತು ಉನ್ನತ ಶ್ರೇಣಿಯಲ್ಲಿ ಪಾಸಾಗಿ ಸುಸಂಸ್ಕøತ ವ್ಯಕ್ತಿಗಳಾಗುತ್ತಿರುವದನ್ನು ನೋಡಿ 60 ಸಾವಿರ ದೇಣಿಗೆ ನೀಡಿದ್ದೇನೆಂದು ಹೇಳಿದರ.
ಸಂಸ್ಥೆಯ ಸಂಸ್ಥಾಪಕರಾದ ಪ್ರೊ. ಎಂ.ಬಿ. ಅಂಬಲಗಿಯವರು ಮಾತಾಡಿ ಕಳೆದ 5 ವರ್ಷಗಳಿಂದ ನಮ್ಮಲ್ಲಿ ನೂರಾರು ಬಡ ಮಕ್ಕಳು ಉನ್ನತ ಶ್ರೇಣಿಯಲ್ಲಿ ಪಾಸಾಗಿ ಮೆಡಿಕಲ್, ಇಂಜಿನೀಯರಿಂಗ್, ಪದವಿಗಳಲ್ಲಿ ಓದುತ್ತಿದ್ದಾರೆ. ಈ ಭಾಗದ ಬಡ ಮತ್ತು ಪ್ರತಿಭಾವಂತ ಮಕ್ಕಳ ಶ್ರೇಯಸ್ಸಿಗಾಗಿ ಸಂಸ್ಥೆ ದುಡಿಯುತ್ತಿದೆ ಎಂದು ಹೇಳಿದರು. ಸಂಸ್ಥೆ ಅಧ್ಯಕ್ಷೆ ಜಗದೇವಿ ಅಂಬಲಗಿ, ಉಪನ್ಯಾಸಕರಾದ ರೋಹಿತ, ಮೇಘಾ, ಶರಣಬಸಮ್ಮ, ಅನಿಲ ಚವ್ಹಾಣ, ದೇವಮ್ಮ ಉಪಸ್ಥಿತರಿದ್ದರು.