ಗುರುಪರಂಪರೆ, ಸಂಸ್ಕøತಿಕೊಡುವದ್ದಾಗಿದೆ:ಶಿಕ್ಷಕ ಹಂಚಲಿ

ತಾಳಿಕೋಟೆ:ಫೆ.17: ಸದಾ ಮಕ್ಕಳಲ್ಲಿ ನಗು ಇರಬೇಕು ಒಳ್ಳೆಯ ಸಾದಕನಾಗಿ ಸಾಧನೆ ಮಾಡಬೇಕೆಂಬುದೇ ಗುರುಗಳದ್ದಾಗಿದೆ ಮಕ್ಕಳಲ್ಲಿ ಸ್ಪರ್ದಾ ಮನೋಭಾವ ಬೆಳೆಯಬೇಕು ವಿದ್ಯ ವಂತರಾಗಿ ಬೆಳಗಬೇಕೆನ್ನುವ ಆಸೆ ಗುರು ಪರಂಪರೆಯದ್ದಾಗಿದೆ ಎಂದು ಸರಕಾರಿ ಪ್ರೌಢ ಶಾಲೆಯ ಮಡಿಕೇಶ್ವರದ ಶಿಕ್ಷಕ ಬಿ.ಎಸ್.ಹಂಚಲಿ ಅವರು ಹೇಳಿದರು.
ಶುಕ್ರವಾರರಂದು ಸ್ಥಳೀಯ ಶ್ರೀ ಖಾಸ್ಗತೇಶ್ವರ ಕೃಪಾಪೋಷಿತ ಗಂಗಮ್ಮ ಚನ್ನಪ್ಪ ಮುದಗಲ್ಲ ಬಾಲಕೀಯರ ಪ್ರೌಢ ಶಾಲೆಯ 2023-24ನೇ ಸಾಲಿನ 10ನೇ ತರಗತಿಯ ವಿಧ್ಯಾರ್ಥಿನಿಯರಿಗೆ ಶುಭಕೋರುವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಸನ್ಮಾನ ಸ್ವಿಕರಿಸಿ ಮಾತನಾಡುತ್ತಿದ್ದ ಅವರು ವೀ.ವಿ.ಸಂಘ ಈ ಸಂಸ್ಥೆ ಜ್ಞಾನ ಸಾಮ್ರಾಜ್ಯ ಸಂಸ್ಥೆಯಾಗಿದೆ ಈ ಸಂಸ್ಥೆಯಲ್ಲಿ ಸೇವೆಗೈಯುತ್ತಿರುವ ಶಿಕ್ಷಕರಲ್ಲಿ ಗುರು ಪರಂಪರೆಯಲ್ಲಿ ಇರಬೇಕಾದ ಆದರ್ಶಭಾವನೆಗಳು ಅವರಲ್ಲಿವೆ ಕಾರಣ ಈ ಶಾಲೆಯಲ್ಲಿ ಎಲ್ಲ ಹಂತದದಲ್ಲಿ ಪ್ರೇರಣೆ ತುಂಬುವ ಕೆಲಸ ಮಾಡಿದ್ದಾರೆಂದರು. ಹುಟ್ಟು ಸಾವಿನ ನಡುವೆ ಅಹಂ ತುಂಬಿದೆ ಅಹಂ ಇರದಿದ್ದರೆ ಆದರ್ಶ ಬಧುಕನ್ನು ಕಟ್ಟಿಕೊಳ್ಳಲು ಸಾಧ್ಯವಿಲ್ಲಾವೆಂದರು. ನಿಮ್ಮ ನಡೆ ನುಡಿ ಆದರ್ಶಕತೆ ಕುರಿತು ಅನ್ಯರು ನಿಮ್ಮ ಮಾತಾಪಿತರಿಗೆ ತಿಳಿಸುತ್ತಾರೋ ಆವಾಗ ಜೀವನ ಸಾರ್ಥಕತೆಯಾಗಲಿದೆ ಎಂದು ವಿದ್ಯಾರ್ಥಿನಿಯರಿಗೆ ಕಿವಿಮಾತೇಳಿದ ಶಿಕ್ಷಕ ಹಂಚಲಿ ಅವರು ಸಾಧನೆ ಮಾಡುವ ಸಾಮಥ್ರ್ಯ ಎಲ್ಲರಲ್ಲಿದೆ ಜೀವನದಲ್ಲಿ ಸಾಧಿಸುತ್ತೇನೆಂಬ ಛಲದಿಂದ ಮುನ್ನಡೆಯಿರಿ ತಂದೆ ತಾಯಿಯವರ ಪ್ರೀತಿ ವಾತ್ಸಲ್ಯ ನೋಡಿಕೊಂಡು ಬಧುಕಿ ಎಂದು ಅಪ್ಪನು ತನ್ನ ಬೇಡಿಕೆಯ ಮಾತನ್ನು ಆಲಿಸಲಿಲ್ಲಾ ಎಂಬ ಹಟತೊಟ್ಟ ಬಾಲಕಿ ಮಗಳ ಮಾತಿನ ಚಿಂತೆಯಲ್ಲಿ ತಲ್ಲಿನನಾಗಿ ಮಗಳ ಹೆಸರಿನಲ್ಲಿ 50 ಲಕ್ಷ ರೂ. ಬ್ಯಾಂಕ್ ಖಾತೆಗೆ ಜಮೆ ಮಾಡಿ ಮೃತಪಟ್ಟ ತಂದೆ ತಾಯಿ ಆದರ್ಶಮಯ ಪ್ರೀತಿ ವಾತ್ಸಲ್ಯ ಹೇಗಿತ್ತೆಂಬುದನ್ನು ವಿವರಿಸಿ ವಿಧ್ಯಾರ್ಥಿಗಳಿಗೆ ಮನವರಿಕೆ ಮಾಡಿದರು.
ಇನ್ನೋರ್ವ ಸನ್ಮಾನ ಸ್ವಿಕರಿಸಿದ ಬೆಂಗಳೂರಿನ ಎಂ.ಎಸ್.ಸಿ.(ಕಂಪ್ಯೂಟರ್ ಸೈನ್ಸ್) ಪ್ರಾಧ್ಯಾಪಕಿಯಾದ ಶ್ರೀಮತಿ ಎಂ.ಎಂ.ಅಮಲ್ಯಾಳ ಅವರು ಮಾತನಾಡಿ ಶಿಕ್ಷಣ ಅನ್ನುವಂತಹದನ್ನು ಕಲಿಯುವದು ದೊಡ್ಡ ಹುದ್ದೆ ಪಡೆಯುವದಕ್ಕಾಗಿ ಅಲ್ಲಾ ಮಾನವೀಯ ಮೌಲ್ಯಗುಣಗಳನ್ನು ಅಳವಡಿಸಿಕೊಂಡು ಕಲಿಸಿದ ಶಿಕ್ಷಕರನ್ನು ಹಾಗೂ ಮಾತಾಪಿತರನ್ನು ಹಿರಿಯರನ್ನು ಗೌರವಿಸುವಂತಹ ಕಾರ್ಯ ಮಾಡುತ್ತಾ ಸಾಧನೆ ಎಂಬ ಗುರಿ ತಲುಪಬೇಕೆಂಬುದು ಶಿಕ್ಷಣದ್ದಾಗಿದೆ ಇದೇ ಶಾಲೆಯಲ್ಲಿ ಕಲಿತು ಉನ್ನತ ಸ್ಥಾನ ಮಾನ ಹೊಂದಿದ್ದೇನೆ ಇಲ್ಲಿಯ ಶಿಕ್ಷಕರು ಹಾಗೂ ಮುಖ್ಯೋಪಾಧ್ಯರಾದ ಭಂಟನೂರ ಸರ್ ಅವರ ಕಲಿಕೆಯ ನನಗೆ ದಾರಿದೀಪವಾಗಿ ಮಾರ್ಪಟ್ಟಿದೆ ಎಂದ ಅವರು ಯಾವ ರೀತಿ ಕಟ್ಟಡದ ಬುನಾದಿ ಗಟ್ಟಿಯಾಗಿದ್ದರೆ ಕಟ್ಟಡವು ಸ್ದøಡವಾಗಿ ನಿಲ್ಲುತ್ತದೆಯೋ ಹಾಗೆ ವಿಧ್ಯಾರ್ಥಿ ಜೀವನದ ತಳಹದಿಯು ಗಟ್ಟಿತನದಿಂದ ಕೂಡಿರಬೇಕು ಜ್ಞಾನ ದೇಗುಲದಿಂದ ಪಡೆದ ಶಿಕ್ಷಣವನ್ನು ಅರ್ಜಿಸಿಕೊಂಡು ಮುನ್ನುಗ್ಗಬೇಕೆಂದರು.
ಅಧ್ಯಕ್ಷತೆ ವಹಿಸಿದ ಮುಖ್ಯೋಪಾಧ್ಯಾಯ ಪಿ.ಬಿ.ಭಂಟನೂರ ಹಾಗೂ ಅತಿಥಿಯಾಗಿ ಆಗಮಿಸಿದ ವೀ.ವಿ.ಸಂಘದ ನಿರ್ದೇಶಕ ಸಿ.ಆರ್.ಕತ್ತಿ ಅವರು ಮಾತನಾಡಿ ಸಾದಿಸುವದೇ ಸಾಧನೆಯಾಗಿದೆ ಸಾಧನೆ ಎಂಬುದು ಸೋಮಾರಿತನ ಅಲ್ಲಾ ನಮ್ಮ ಶಾಲೆಯಲ್ಲಿ ಕಲಿತು ಉನ್ನತ ಹುದ್ದೆ ಪಡೆದ ಶ್ರೀಮತಿ ಮಲ್ಲಮ್ಮ ಅಮಲ್ಯಾಳ ಅವರಂತೆ ಸಾಧಕರಾಗಿರಿ ಎಂದು ವಿಧ್ಯಾರ್ಥಿನಿಯರಿಗೆ ತಿಳಿ ಹೇಳಿದ ಅವರು ಸರಳತೆಯಲ್ಲಿಯೂ ಶ್ರೀಮಂತಿಕೆ ಇದೆ ಮಾತು ಕಡಿಮೆ ಇರಲಿ ಕಾರ್ಯ ಹೆಚ್ಚಾಗಿರಲಿ ಎಂದು ವಿಧ್ಯಾರ್ಥಿನಿಯರಿಗೆ ಸಲಹೆ ನೀಡಿದರು.
ಕಾರ್ಯಕ್ರಮದ ದಿವ್ಯ ಸಾನಿದ್ಯ ವಹಿಸಿದ ಗುಂಡಕನಾಳ ಹಿರೇಮಠದ ಶ್ರೀ ಗುರುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ ವಿಧ್ಯಾರ್ಥಿ ಜೀವನವೆಂಬುದು ಬಂಗಾರದಂತಾಗಿದೆ ಇದನ್ನು ಕಷ್ಟಪಟ್ಟು ಇಷ್ಟ ಪಟ್ಟು ಓದುವ ಜ್ಞಾನವನ್ನು ವೃದ್ದಿಸಿಕೊಂಡು ಮುಂದಾಗಬೇಕೆಂದು ಹೇಳಿದ ಶ್ರೀಗಳು ಲಾಲಬಹದ್ದೂರ ಶಾಸ್ತ್ರೀಜಿ ಅವರ ಸರ್ ಎಂ ವಿಶ್ವೇಶ್ವರಯ್ಯನವರ, ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಅವರು ಕಷ್ಟ ಪಟ್ಟು ಕಲಿತು ಸಾಧನೆಗೆ ಕಾರಣ ಹೇಗಾದರೆಂಬುದರ ಕುರಿತು ವಿವರಿಸಿದರು.
ವಿಧ್ಯಾರ್ಥಿನಿಯರು ಹಾಗೂ ಶಿಕ್ಷಕರು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ಶಾಲಾ ಆದರ್ಶ ವಿಧ್ಯಾರ್ಥಿನಿಯರೆಂದು ಆಯ್ಕೆ ಮಾಡಿ ಗೌರವಿಸಲಾಯಿತು.
ಶಿಕ್ಷಕಿ ಪ್ರೀತಿ ಮೇಡಂ ಪ್ರಾಸ್ಥಾವಿಕ ಮಾತನಾಡಿದರು. 10ನೇ ವರ್ಗದ ವಿಧ್ಯಾರ್ಥಿನಿಯರು ಶಾಲೆಗೆ ಕಟ್ಟಿಗೆಯಿಂದ ತಯಾರಿಸಲಾದಂತಹ ಸುಸರ್ಜಿತವಾದ ಮೈಕ್ ಟೇಬಲ್‍ನ್ನು ನೀಡಿದರು.
ಶ್ರೀಗಳಿಗೆ ಅತಿಥಿ ಮಹೋದಯರಿಗೆ ಸನ್ಮಾನಿಸಿ ಗೌರವಿಸಲಾಯಿತು.
ವೇದಿಕೆಯ ಮೇಲೆ ವೀ.ವಿ.ಸಂಘದ ಕಾರ್ಯದರ್ಶಿ ಎಂ.ಎಸ್.ಸರಶೆಟ್ಟಿ, ಸಹಕಾರ್ಯದರ್ಶಿ ಕಾಶಿನಾಥ ಮುರಾಳ, ನಿರ್ದೇಶಕರಾದ ಕೆ.ಸಿ.ಸಜ್ಜನ, ಎಂ.ಆರ್.ಕತ್ತಿ, ರಮೇಶ ಸಾಲಂಕಿ, ಎಂ.ಜಿ.ಕತ್ತಿ, ಶಂಕರಗೌಡ ಪಾಟೀಲ, ಹಾಗೂ ಎಂ.ಬಿ.ಸರಶೆಟ್ಟಿ, ಆರ್.ಸಿ.ಪಾಟೀಲ, ಹಾಗೂ ಶಿಕ್ಷಕರಾದ ಪಿ.ಬಿ.ದೇಶಮುಖ, ಎಂ.ಆರ್.ಕಾಂಬಳೆ, ಎಂ.ಆರ್.ಕುಲಕರ್ಣಿ, ಪಿ.ಪಿ.ಬಸರಕೋಡ, ವಿಧ್ಯಾರ್ಥಿ ಪ್ರತಿನಿಧಿ ಕು.ಲಕ್ಷ್ಮೀ ದೊಡಮನಿ, ಅವರು ಉಪಸ್ಥಿತರಿದ್ದರು.
ಶಿಕ್ಷಕ ವಾಯ್.ಎಸ್.ನಾದ ಸ್ವಾಗತಿಸಿದರು. ಶ್ರೀಮತಿ ಎಂ.ಆಯ್.ಕೇಸರಿ ನಿರೂಪಿಸಿ ವಂದಿಸಿದರು.