ಗುರುನಾನಕ ಶಾಲೆಯಲ್ಲಿ ಸಂಭ್ರಮದ ಮಕ್ಕಳ ದಿನಾಚರಣೆ

ಬೀದರ:ನ.14:ನಗರದ ಸ್ಟೇಡಿಯಂ ಹತ್ತಿರ ವಿರುವ ಗುರು ನಾನಕ ಪಬ್ಲಿಕ್ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಅತ್ಯಂತ ಸಂಭ್ರದಿಂದ ಆಚರಿಸಲಾಯಿತು. ಈ ಕಾರ್ಯಕ್ರಮವನ್ನು ದೀಪಬೆಳಗಿಸುವುದರ ಮೂಲಕ ನೇಹರುಜಿ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ಕೊಡಲಾಯಿತು.

ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಗುರು ನಾನಕ ಶಾಲೆಯ ಹಳೆ ವಿದ್ಯಾರ್ಥಿಗಳಾದ (ಂಟumಟಿi) ಹೈದ್ರಬಾದಿನ ಗ್ಲೋಬಲ್ ಆಸ್ಪತ್ರೆಯ ಶಸ್ತ್ರ ಚಿಕಿತ್ಸಕ ಡಾ|| ಅಜಯ್ ಪಟವಾಡಿ, ಹೃದಯ ರೋಗ ತಜ್ಞರು ಡಾ|| ನಿತೀನ್ ಗುದಗೆ, ಬೋಶ್ ಕಂಪನೀಯ ಉದ್ಯೋಗಿ ಪ್ರಣಯ್, ಸ್ಯಾಮಸಂಗ್ ಕಂಪನಿಯ ಉದ್ಯೋಗಿ ಪ್ರಿಯಾಂಕಾ, ಕರ್ನಾಟಕ ಬ್ಯಾಂಕ್‍ನ ಉದ್ಯೋಗಿ ವೈಶಾಲಿ ಕುಲಕರ್ಣಿ ಮತ್ತು ಕರ್ನಾಟಕ ಬ್ಯಾಂಕ್‍ನ ಅಧಿಕಾರಿ ರತಿಕಾಂತ.

ಹೈದ್ರಬಾದಿನ ಗ್ಲೋಬಲ್ ಆಸ್ಪತ್ರೆಯ ಶಸ್ತ್ರ ಚಿಕಿತ್ಸಕ ಡಾ|| ಅಜಯ್ ಪಟವಾಡಿ ಮಾತನಾಡಿ ಮಕ್ಕಳು ಚೆನ್ನಾಗಿ ಕಲಿತು ಒಳ್ಳೆಯವನಾದರೆ ಪೋಷಕರ ಪ್ರತಿóಷ್ಠೆ ಸಮಾಜದಲ್ಲಿ ಹೆಚ್ಚುತ್ತದೆ. ಅದೇ ರೀತಿ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಮುಂದೆ ಸಾಗಬೇಕಾದರೆ ಕಠಿಣ ಶ್ರಮಪಡಬೇಕು. ಅದಲ್ಲದೆ ಒಳ್ಳೆ ಶಿಸ್ತನ್ನು ಜೀವನದಲ್ಲಿ ಅಳವಡಿಸಿಕೊಂಡು ಹೋಗಿ ಸಮಾಜ ಸೇವೆ ಹಾಗೂ ದೇಶ ಸೇವೆಯಲ್ಲಿ ಭಾಗಿಯಾಗಬೇಕು ಎಂದು ಕರೆ ಕೊಟ್ಟರು. ಶಾಲೆಯಲ್ಲಿ ಗುರುಗಳ ಮಾರ್ಗದರ್ಶನದಲ್ಲಿ ನಡೆದರೆ ಜೀವನದಲ್ಲಿ ಯಾವುದೆ ಗುರಿ ತಲುಪಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಶಾಲೆಯ ಹಳೆ ವಿದ್ಯಾರ್ಥಿ ಹೃದಯ ರೋಗ ತಜ್ಞರು ಡಾ|| ನಿತೀನ್ ಗುದಗೆ ಮಾತನಾಡಿ ಜೀವನದಲ್ಲಿ ಸಂಯಮ ಹಾಗೂ ಶಿಸ್ತು ಕಾಪಾಡಿಕೊಳ್ಳಬೇಕು. ಇದರಿಂದ ತಮ್ಮ ಗುರಿ ತಲುಪಲು ಅನುಕೂಲವಾಗುತ್ತದೆ ಎಂದು ಮಕ್ಕಳಿಗೆ ತಿಳಿಹೇಳಿದರು. ಮುಂದು ವರೆದು ಮಾತನಾಡುತ್ತ 17 ವರ್ಷದ ನಂತರ ಶಾಲೆಗೆ ಹಿಂತಿರುಗಿ ಬಂದ ನಂತರ ನನಗೆ ಬಹಳ ಸಂತೋಷವಾಗುತ್ತಿದೆ ನನ್ನ ಎಲ್ಲಾ ಹಳೆಯ ನೆನಪುಗಳು ನೆನಸಾಗುತ್ತಿವೆ ಎಂದರು.

ಆಡಳಿತ ಮಂಡಳಿಯ ಉಪಾಧ್ಯಕ್ಷಣಿಯರಾದ ಶ್ರೀಮತಿ ರೇಷ್ಮಾ ಕೌರ ಅವರು ಮಕ್ಕಳ ದಿನಾಚರಣೆಯ ಶುಭಾಷಯಗಳು ಕೋರಿದರು. ಅದೇ ರೀತಿ ಮುಂದು ವರೆದು ಮಾತನಾಡುತ್ತ ಜೀವನ ಒಂದು ಅಮೂಲ್ಯ ಕೊಡುಗೆ, ಜೀವನದಲ್ಲಿ ಯಾವಾಗಲು ಜಿಗುಪ್ಸೆಗೊಳ್ಳಬಾರದು, ಪ್ರತಿಯೊಂದು ಸಂದರ್ಭಕ್ಕೆ ಸಹಾಸ ತೋರಿಸಿ ಸಮಸ್ಯಕ್ಕೆ ಪರಿಹಾರ ಕೊಂಡುಕೊಳ್ಳಬೇಕು ಹಾಗೂ ಜೀವನದಲ್ಲಿ ಸಹನೆ ಭಾವನೆ ಬೆಳೆಸಿಕೊಳ್ಳಬೇಕು ಅದಲ್ಲದೆ ಸಮಾಜದಲ್ಲಿ ಒಬ್ಬ ಒಳ್ಳೆ ನಾಗರಿಕನಾಗಿ ಬಾಳಬೇಕು. ಅದಲ್ಲದೆ ಮೊಬೈಲ್ ಮತ್ತು ಇಂಟರನೆಟ್ ಬಹಳ ಉಪಯೋಗ ಮಾಡಿಕೊಳ್ಳುತ್ತಿದ್ದಾರೆ. ಆದ್ದರಿಂದ ಕೆಟ್ಟ ಪರಿಣಾಮ ಬೀರುತ್ತಿದೆ. ಅದಕ್ಕಾಗಿ ಮಕ್ಕಳಿಗೆ ಮೊಬೈಲ್ ಮತ್ತು ಇಂಟರನೆಟ್‍ನಿಂದ ದೂರ ಇರಬೇಕು, ಎಷ್ಟರ ಮಟ್ಟಿಗೆ ಉಪಯೋಗ ಇದೆಯೋ ಅಷ್ಟೆ ಉಪಯೋಗಿಸಬೇಕು ಎಂದು ಮಕ್ಕಳಿಗೆ ಸಲಹೆ ಕೊಟ್ಟರು.

ಗುರು ನಾನಕ ಶಾಲೆಯ ಪ್ರಾಂಶುಪಾಲರಾದ ಶ್ರೀ ಎನ್.ರಾಜು, ಮುಖ್ಯಗುರುಗಳಾದ ಶ್ರೀಮತಿ ಆರೀಫ್ ಹಾದಿ ಮತ್ತು ಶ್ರೀ ಅಮಜದ ಅಲಿ ಉಪಸ್ಥಿತರಿದ್ದರು. ಎನ್.ರಾಜು ಸ್ವಾಗತ ಕೋರಿದರೆ, ಶಿಕ್ಷಕಿ ಪಾರೋಲ್ ಸಕ್ಸೆನಾ ವಂದನಾರ್ಪಣೆ ಮಾಡಿದರು.