ಗುರುನಾನಕ ದೇವ ತಾಂತ್ರಿಕ ವಿದ್ಯಾಲಯದ ವಿದ್ಯಾರ್ಥಿಗೆ ಚಿನ್ನದ ಪದಕ

ಬೀದರ:ಫೆ.24:ಗುರು ನಾನಕ ದೇವ ತಾಂತ್ರಿಕ ವಿದ್ಯಾಲಯದ ಸಿವಿಲ ವಿಭಾಗದ ವಿದ್ಯಾರ್ಥಿ ಮೊಹ್ಮದ ಜಿಯಾ ವುಲ್ ಹಸನ್ ವಿಶ್ವೇಶ್ವರಯ್ಯತಾಂತ್ರೀಕ ವಿಶ್ವವಿದ್ಯಾಲಯದ ನಾಲ್ಕು ವರ್ಷಗಳ(2018-22ಶೈಕ್ಷಣಿಕ ವಷರ್ದ) ಇಂಜಿನಿಯರಿಂಗ್ ಪದವಿಯಲ್ಲಿ ಅತ್ಯಧಿಕ ಅಂಕಗಳನ್ನು ಗಳಿಸಿ ಚಿನ್ನದ ಪದಕ ಪಡೇದಿದ್ದಾರೆ. ಇದನ್ನರಿತ ಗುರುನಾನಕ ಶಿಕ್ಷಣ ಸಂಸ್ಥೆಯ ಅದ್ಯಕ್ಷರಾದ ಡಾ.ಸರದಾರ ಬಲಬೀರ ಸಿಂಗ್ ರವರು ಮತ್ತು ಉಪಾದ್ಯಕ್ಷರಾದ ಡಾ. ರೇಷ್ಮಾಕೌರರವರು ಹರ್ಷ ವ್ಯಕ್ತಪಡಿಸಿ ತಮ್ಮ ಸಂಸ್ಥೆಯ ವಿದ್ಯಾರ್ಥಿಯ ಸಾಧನೆಯನ್ನು ಪ್ರಶಂಶಿಸಿದರು.

ಕಾಲೇಜಿನ ಪ್ರಾಂಶುಪಾಲರು, ಸಿವಿಲ್ ವಿಭಾಗದ ಮುಖ್ಯಸ್ಥರು, ಉಪನ್ಯಾಸಕರು ಮತ್ತುಎಲ್ಲಾ ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಹರ್ಷವ್ಯಕ್ತ ಪಡಿಸಿದರು.ಇಂತಹ ವಿದ್ಯರ್ಥಿಗಳ ಸಾಧನೆಯಿಂದಇತರ ವಿದ್ಯಾರ್ಥಿಗಳಿಗೆ ಮಾರ್ಗ ದರ್ಶನವಾಗುತ್ತದೆ ಎಂದರು.