ಗುರುದ್ವಾರ ಹಿಂಸಾಚಾರ: 14 ಮಂದಿ ಬಂಧನ,ವಿಚಾರಣೆ

ಮುಂಬೈ,ಮಾ. ೩೦- ಮಹಾರಾಷ್ಟ್ರದ ನಾಂದೇಡ್ ಗುರುದ್ವಾರ ಮುಂಭಾಗದಲ್ಲಿ ನಡೆದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ೧೪ ಮಂದಿಯನ್ನು ಪೊಲೀಸರು ಬಂಧಿಸಿ ,ವಿಚಾರಣೆಗೆ ಒಳಪಡಿಸಿದ್ದಾರೆ.

ಹಿಂಸಾಚಾರ ಪ್ರಕರಣದಲ್ಲಿ ನಾಲ್ವರು ಪೊಲೀಸರು ಗಾಯಗೊಂಡು ಅದರಲ್ಲಿ ಓರ್ವ ಪೊಲೀಸ್ ಪೇದೆ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಘಟನೆಗೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.

ಗುರುದ್ವಾರದ ಮುಂಭಾಗದಲ್ಲಿ ನಡೆದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ೬೪ ಜನರ ಮೇಲೆ ಪೊಲೀಸರು ಕೊಲೆಯತ್ನ, ಹಿಂಸಾಚಾರ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ದೂರು ದಾಖಲಿಸಿಕೊಂಡಿದ್ದರು.

ಈ ಪೈಕಿ ೧೪ ಮಂದಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ. ಕೊರೊನಾ ಸೋಂಕು ಇರುವ ಹಿನ್ನೆಲೆಯಲ್ಲಿ ಸಾರ್ವಜನಿಕ ಸಭೆ ಸಮಾರಂಭಗಳಿಗೆ ಮಹಾರಾಷ್ಟ್ರದಲ್ಲಿ ನಿಷೇಧ ಹೇರಲಾಗಿದೆ ಆದರೂ ಕೆಲವು ಮಂದಿ ಗುರುದ್ವಾರದ ಮುಂದೆ ಜಮಾಯಿಸಿ ನೂರಾರು ಯುವಕರು ದಾಂಧಲೆ ನಡೆಸಿದ್ದರು. ಇದು ಹಿಂಸಾಚಾರಕ್ಕೆ ತಿರುಗಿತ್ತು. ಪರಿಸ್ಥಿತಿ ವಿಕೋಪಕ್ಕೆ ತಿರುಗಿತ್ತು

ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಪೊಲೀಸರು ದೂರು ದಾಖಲಿಸಿಕೊಂಡು ಸ್ಥಳದಲ್ಲಿ ದಾಖಲೆಗಳನ್ನು ಪರಿಶೀಲಿಸಿದ ನಾಲ್ಕು ಮಂದಿಯನ್ನು ವಶಕ್ಕೆ ಪಡೆಯಲಾಗಿದೆ.

ಹಿಂಸಾಚಾರ ಪ್ರಕರಣದಲ್ಲಿ ಅನೇಕ ವಾಹನಗಳು ಹಾನಿಗೊಳಗಾಗಿದ್ದವು ಎಂದು ನಾಂದೇಡ್ ವಲಯ ಪೊಲೀಸ್ ಮಹಾ ನಿರ್ದೇಶಕ ನಿಸಾರ್ ಥಾಂಬೋಲಿ ಹೇಳಿದ್ದಾರೆ.

ಮುನ್ನೂರಕ್ಕೂ ಹೆಚ್ಚು ಯುವಕರು ಗುರುಜಿ ಅವರದು ಜಮಾಯಿಸಿ ಗಲಭೆ ಹಿಂಸಾಚಾರ ನಡೆಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.ಹೋಳಿ ಹಬ್ಬದ ನಂತರ ಸಿಕ್ಕರು ಆಚರಿಸುವ ಹೋೞಾ ಮೊಹಲ್ಲಾ ಸಂಭ್ರಮದ ವೇಳೆ ಹಿಂಸಾಚಾರ ಪ್ರಕರಣ ನಡೆದಿತ್ತು