ಗುರುದೇವ ರವೀಂದ್ರನಾಥ ಟ್ಯಾಗೋರರ ಜನ್ಮ ದಿನಾಚರಣೆ

ಧಾರವಾಡ,ಮೇ11: ರವೀಂದ್ರರು ಮೊಟ್ಟಮೊದಲ ಪ್ರಕೃತಿ ಶಾಸ್ತ್ರಜ್ಞರಾಗಿದ್ದರು. ವಿಶ್ವ ಮಟ್ಟದ ವ್ಯಕ್ತಿಯಾಗಿಎಲ್ಲರಿಗೂಗುರುದೇವಆಗಿದ್ದವರುಎಂದು ಸ್ತ್ರೀ ಆರೋಗ್ಯತಜ್ಞಡಾ.ಸಂಜೀವಕುಲಕರ್ಣಿ ಹೇಳಿದರು.
ಕರ್ನಾಟಕ ವಿದ್ಯಾವರ್ಧಕ ಸಂಘವು, ಕೀರ್ತಿಶೇಷ ದಿ. ಪ್ರಹ್ಲಾದ ನರೇಗಲ್ಲ ಮಾಸ್ತರರದತ್ತಿ ಅಂಗವಾಗಿ ಆಯೋಜಿಸಿದ್ದ ಗುರುದೇವ ರವೀಂದ್ರನಾಥ ಟ್ಯಾಗೋರರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಮುಂದುವರೆದು ಮಾತನಾಡಿದ ಅವರು, ಗಾಂಧೀಜಿಯವರ ಮೇಲೆ ಅಪಾರವಾದ ಪ್ರೀತಿ ಗೌರವ ಇದ್ದಾಗಲೂ ಕೂಡ ವೈಚಾರಿಕವಾಗಿ ಪರಸ್ಪರರಲ್ಲಿ ಸಂಘರ್ಷ ಇದ್ದೇ ಇತ್ತು. ಗಾಂಧೀಜಿಯವರು ರವೀಂದ್ರರವರನ್ನು ಗುರದೇವ ಎಂದು ಸಂಬೋಧಿಸುತ್ತಿದ್ದರು. ಗಾಂಧೀಜಿಯವರು ತಪ್ಪು ನಿರ್ಧಾರಗಳನ್ನು ತೆಗೆದುಕೊಂಡಾಗ ತಕ್ಷಣ ಟ್ಯಾಗೋರರು ಹೇಳಿಕೆ ನೀಡಿ ಅದನ್ನು ಸರಿಪಡಿಸಿಕೊಳ್ಳಲು ತಿಳಿಸುತ್ತಿದ್ದರು. ಈ ಸಂಘರ್ಷ ಪರಸ್ಪರ ಗೌರವಕ್ಕೆ ಎಂದೂ ಚ್ಯುತಿಯನ್ನು ತಂದಿರಲಿಲ್ಲ. ರವೀಂದ್ರ ಕವಿತೆಗಳಲ್ಲಿ ಮೂರು ರಾಷ್ಟ್ರಗಳು ರಾಷ್ಟ್ರಗೀತೆಯನ್ನಾಗಿ ಮಾಡಿಕೊಂಡಿದ್ದು ಇತಿಹಾಸ. ಬಾಂಗ್ಲಾದೇಶ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವ್ಯಕ್ತಿಗಳಿಗೆ ಒಂದು ಆದರ್ಶ ತಾಣವಾಗಿರುವುದನ್ನ ಕಾಣುತ್ತೇವೆ. ಅಲ್ಲಿಯ ಪ್ರಕೃತಿ ಸಂಪತ್ತು, ಕೃಷಿ ಮೂಲ, ಪರಿಸರ ಇವೆಲ್ಲ ಸಾಧಕರಿಗೆ ಪೂರಕವಾಗಿದ್ದವು. ರವೀಂದ್ರರಿಗೆ ಭೌತಿಕ ಶ್ರೀಮಂತ್ರಿಕೆ ಅಪಾರವಾಗಿತ್ತು. ರವೀಂದ್ರರ ಪ್ರಭಾವ ಧಾರವಾಡದ ಅನೇಕ ಜನರ ಮೇಲೆ ಆಗಿತ್ತು. ಅದರಲ್ಲಿ ಕೀರ್ತಿಶೇಷ ಪ್ರಹ್ಲಾದ ನರೇಗಲ್ಲ ಮಾಸ್ತರರ ಮೇಲೆ ಅಪಾರವಾಗಿತ್ತು. ಹಾಗಾಗಿ ಧಾರವಾಡಕ್ಕೂ ರವೀಂದ್ರರಿಗಿದ್ದ ನಂಟನ್ನು ಮರೆಯುವಂತಿಲ್ಲ. ಇಂಥ ಮಹಾನ್ ಚೇತನವನ್ನ ಕರ್ನಾಟಕ ವಿದ್ಯಾವರ್ಧಕ ಸಂಘ ಸ್ಮರಿಸುತ್ತಿರುವುದು ಔಚಿತ್ಯಪೂರ್ಣವಾಗಿದೆ ಎಂದರು.
ಅತಿಥಿಯಾಗಿ ಹಳಿಯಾಳ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಗ್ರಂಥಪಾಲಕ ಡಾ. ಮಂಜುನಾಥ ಲಮಾಣಿ ಮಾತನಾಡುತ್ತಾ, ಜಗತ್ತಿನ ಬಹುಮುಖ ಪ್ರತಿಭೆಗಳಲ್ಲಿ ಟ್ಯಾಗೋರವರು ಅಗ್ರಪಂಕ್ತಿಯಲ್ಲಿ ನಿಲ್ಲುತ್ತಾರೆ. ತಮ್ಮ ಪ್ರತಿಭೆಯ ಮೂಲಕವೇ ಜಗತ್ಪ್ರಸಿದ್ದರಾಗಿದ್ದವರು. ತಂದೆ, ತಾಯಿಯ ಸಂಸ್ಕಾರದ ಬಲವು ಅವರ ಮೇಲೆ ಅಗಾಧವಾಗಿತ್ತು. ಇಡೀ ಕುಟುಂಬ ಶೈಕ್ಷಣಿಕವಾಗಿ, ಸಾಂಸ್ಕøತಿಕವಾಗಿ, ಸಾಮಾಜಿಕ, ಸಾಹಿತ್ಯಿಕವಾಗಿ ಸಾಧನೆ ಮಾಡಿದ್ದಾಗಿತ್ತು.ಪ್ರತಿಭೆಯಾರೊಬ್ಬರ ಸ್ವತ್ತುಅಲ್ಲ. ಪ್ರಯತ್ನವಾದಿಗಳನ್ನು ಅದು ಕೈ ಬಿಡುವುದಿಲ್ಲ. ಆ ಹಿನ್ನೆಲೆಯಲ್ಲಿ ಸರ್ವವಿಧದ ಜ್ಞಾನವನ್ನು ರವೀಂದ್ರರು ಹೊಂದಿದ್ದರು ಎಂದು ಅಭಿಪ್ರಾಯಪಟ್ಟರು.
ಪಾಶ್ಚಿಮಾತ್ಯ ಸಾಹಿತ್ಯದಜ್ಞಾನಅವರಲ್ಲಿಅಪಾರವಾಗಿತ್ತು.ಅವರ ಪಾಂಡಿತ್ಯ ಗುರುತಿಸಿ, ಆಕ್ಸ್‍ಫರ್ಡ್ ವಿಶ್ವವಿದ್ಯಾಲಯ ಸಾಹಿತ್ಯಕ್ಷೇತ್ರದ ಸಾಧನೆಗಾಗಿಗೌರವ ಡಿ.ಲಿಟ್ ಪದವಿಯನ್ನು ನೀಡಿ ಗೌರವಿಸಿತು. ಅವರುಕಟ್ಟಿದ ಶಾಂತಿನಿಕೇತನಇಂದು ವಿದ್ಯಾರ್ಜನೆಯಕೇಂದ್ರವಾಗಿಕಾರ್ಯ ನಿರ್ವಹಿಸುತ್ತಿದೆ.ರಾಷ್ಟ್ರದ ಅನೇಕ ಪ್ರತಿಭಾವಂತರು ಈ ಶಾಂತಿನಿಕೇತನದ ಮೂಲಕ ಹೊರಹೊಮ್ಮಿ ಪ್ರಸಿದ್ಧಿಯನ್ನು ಪಡೆದಿದ್ದಾರೆ. 1950ರಲ್ಲಿ ಅವರುರಚಿಸಿದ ‘ಜನಗಣ ಮನ’ ಗೀತೆರಾಷ್ಟ್ರಗೀತೆಯಾಗಿ ಬೆಳಕಿಗೆ ಬಂತು. ಅವರೊಬ್ಬಅವತಾರ ಪುರಷರಂತೆಎಲ್ಲ ಕ್ಷೇತ್ರಗಳಲ್ಲೂ ಸಾಧನೆ ಮಾಡಿಜಗಕೆ ಮಾದರಿಯಾದರು.ಇವರನ್ನು ಬಂಗಾಳದ ಷೇಕ್ಸಫೀಯರ್‍ಎಂದುಕರೆಯಲಾಗಿದೆ.ಸಂಗೀತಕ್ಷೇತ್ರಕ್ಕೆಅವರಕೊಡುಗೆಅಪಾರವಾದದ್ದು.ಸಾಮಾನ್ಯನಿಂದ ಹಿಡಿದು ಉಚ್ಛ ವರ್ಗದವರವರೆಗೂಅವರ ಸಂಗೀತ ಪ್ರೀಯವಾಗಿರುವಂಥದ್ದು.ಅವರ ‘ಗೀತಾಂಜಲಿ’ ಕೃತಿಗೆ ನೊಬೆಲ್ ಪಾರಿತೋಷಕ ಲಭಿಸಿ, ರಾಷ್ಟ್ರದಗೌರವವನ್ನು ಎತ್ತರಿಸಿದರು.ಬಂಗಾಳದ ಸಾಹಿತ್ಯಿಕ, ಸಾಂಸ್ಕøತಿಕ ಲೋಕಕ್ಕೆ ಹೊಸ ಆಯಾಮವನ್ನೇ ಸೃಷ್ಟಿ ಮಾಡಿದರುಎಂದರು.
ವೇದಿಕೆ ಮೇಲೆ ಸಂಘದಅಧ್ಯಕ್ಷಚಂದ್ರಕಾಂತ ಬೆಲ್ಲದಇದ್ದರು.ಎಂ.ಎಂ. ಚಿಕ್ಕಮಠ ಸ್ವಾಗತಿಸಿದರು.ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಡಾ. ಜಿನದತ್ತ ಹಡಗಲಿ ನಿರೂಪಿಸಿದರು. ಕೆ.ಎಚ್. ನಾಯಕ ವಂದಿಸಿದರು.
ಕಾರ್ಯಕ್ರಮದಲ್ಲಿ ನಿಂಗಣ್ಣಕುಂಟಿ, ದಮಯಂತಿ ನರೇಗಲ್ಲ, ರಾಮಚಂದ್ರಗದ್ದೆಣ್ಣವರ, ಮಧುಮತಿ ಸಣಕಲ್, ಚನಬಸಪ್ಪಅವರಾಧಿ ಸೇರಿದಂತೆಅನೇಕರು ಭಾಗವಹಿಸಿದ್ದರು.